ಪುಟ:ಸಮತಿ ಮದನಕುಮಾರರ ಚರಿತ್ರ.djvu/೨೦೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೯೪ ಸುಮತಿ ಮದನಕುಮಾರರ ಚರಿತ್ರೆ [ಅಧ್ಯಾಯ ಸೂರನ ಸಮಿಾಪಕ್ಕೆ ಹೋದರೆ, ಭೂಮಿಯು ಅವರ ಕಣ್ಣಿಗೆ ಹೇಗೆ ಕಾಣಿಸುವುದು ? ಮ ದನ-ನನಗೆ ತಿಳಿಯದು. ಜೋಯಿಸ ತಿಳಿಯದೆ ! ಒಂದು ಪದಾರ್ಥವೇ ಇದ್ದ ಸ್ಥಳವನ್ನು ಬಿಟ್ಟು ದೂರವಾಗಿ ಹೋಗಿ ನಾವು ಇದ್ದ ಕಡೆಯಲ್ಲಿಯೇ ಇದ್ದರೂ ಒಂದೇ, ಅಥವಾ ಆ ಪದಾರ್ಥವು ಇದ್ದ ಕಡೆಯಲ್ಲಿಯೇ ಇದ್ದು ನಾವು ದೂರವಾಗಿ ಹೋದರೂ ಒಂದೇ, ನಮ್ಮನ್ನು ಬಿಟ್ಟು ಪಟ ದೂರವಾಗಿ ಹೋದರೂ ಸರಿಯೆ, ಪಟವನ್ನು ಬಿಟ್ಟು ನಾವು ದೂರವಾಗಿ ಹೋದರೂ ಸರಿಯೆ, ಫಲವೆಲ್ಲಾ ಒಂದೇ ಅಲ್ಲವೆ ? ನಮಗೂ ಅದಕ್ಕೂ ಸ್ವಲ್ಪ ದೂರ ಬಿಟ್ಟರೆ ಸರಿ. ಮದನ-ಹವುದು. ಜೋಯಿಸ- ಹಾಗಾದರೆ, ಭೂಮಿಯಿಂದ ಆಕಾಶಕ್ಕೆ ಯಾರಾ ದರೂ ಹಾರಿಹೋದರೆ ನಮ್ಮ ಭೂಮಿ ಹೇಗೆ ಕಾಣಿಸುವುದು ? ಮದನ-ನಾವು ಮೇಲಕ್ಕೆ ದೂರವಾಗಿ ಹೋಗುತ್ತಾ ಹೋಗುತಾ ಭೂಮಿ ಸಣ್ಣ ವಾಗುತ ಬರುವುದು.' ಜೋಯಿಸ- ಆದ್ದರಿಂದ, ಸೂರ್ಯ ಚಿಕ್ಕದೆಂತಲೂ, ಭೂಮಿ ದೊಡ್ಡದೆಂತಲೂ ಹೇಳಬಾರದು. ಸೂರ್ಯನೂ ಚಂದ್ರನೂ ನಕ್ಷತ್ರಗಳೂ ನಮ್ಮ ಕಣ್ಣಿಗೆ ಎಷ್ಟು ದೊಡ್ಡದಾಗಿ ಕಾಣಿಸುವವೋ ಅದಕ್ಕಿಂತಲೂ ಎಷ್ಟೋ ದೊಡ್ಡದಾಗಿದೆ ಎಂದು ಈಗಲಾದರೂ ಊಹಿಸಿಕೊ. ಈ ಪ್ರಕಾರ ಮಾತನಾಡಿಕೊಂಡು ಬರುತಿರುವಾಗ ದಾರಿಯಲ್ಲಿ ಒಂದು ಹಳ್ಳಿ ಸಿಕ್ಕಿತು, ಆ ಊರಮುಂದೆ ನಾರೀ ಗುಡಿಯ ಬಳಿ ರಂಗ ಸ್ಥಳದಲ್ಲಿ ಒಬ್ಬ ಹಾವಾಡಿಗನು' ಡೋಲನ್ನು ಬಡಿಯುತಾ ಇದ್ದನು. ಅಲ್ಲಿಗೆ ಜನಗಳು ಓಡಿಹೋಗುತಿದ್ದರು, ಅದನ್ನು ತಿಳಿದು ಮದನನು ತಾನೂ ಅಲ್ಲಿಗೆ ಹೋಗಬೇಕೆಂದು ಅಪೇಕ್ಷಿಸಿದನು. ಜೋಯಿಸನು ಸುಮತಿಮದನ ಇಬ್ಬರನ್ನೂ ಕರೆದುಕೊಂಡು ಅಲ್ಲಿಗೆ ಹೋದನು, ಆ ಗುಂಪಿನ ಸಂಗಡ ಇವರೂ ನಿಂತುಕೊಂಡರು, ಆ ಗಾರುಡಿಗನು ತನ್ನ