ಪುಟ:ಸಮತಿ ಮದನಕುಮಾರರ ಚರಿತ್ರ.djvu/೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸುಮತಿ ಮದನ ಕುಮಾರರ ಚರಿತ್ರೆ [ಅಧ್ಯಾಯ ಹೇಳಿದರೆ ತನಗೆ ಒಂದು ಹಣ್ಣು ದೊರೆಯುವುದು, ದಿಟ ಹೇಳಿದರೆ ಬೆತ್ತದಿಂದ ಏಟು ಬೀಳುವುದು ಎಂದು ಅವನಿಗೆ ಖಂಡಿತವಾಗಿ ತಿಳಿದಿ ದ್ದಾಗ್ಯೂ, ದಿಟವನ್ನೇ ಹೇಳಿ ಸಾಧಿಸುತ್ತಿದ್ದನೇ ಹೊರತು, ಸ್ವಲ್ಪವೂ ಅನುಮಾನ ಪಡುತ್ತಿರಲಿಲ್ಲ. ಮಕ್ಕಳು ಮೂರು ಹೊತ್ತೂ ಏನನ್ನಾ ದರೂ ತಿನ್ನು ತಲೇ ಇರುವವಷ್ಟೆ, ಇವ ಹಾಗಲ್ಲ. ಒಂದು ಚೂರು ದೋಸೆಯನ್ನು ಕೊಟ್ಟರೆ ಅವನಿಗೆ ಅಷ್ಟೆ ಸಾಕು ; ಇನ್ನು ಯಾವ ತಿಂಡಿ ಎಷ್ಟು ಹಾಕಿದರೆ ಅಷ್ಟೆ ಸಾಕು, ಹೀಗಿತ್ತು. ಮದನಕುಮಾರನಿಗೂ ಸುಮ ತಿಗೂ ಪರಿಚಯವಾಯಿತು. ಅದು ಹೇಗೆಂದರೆ, ಒಂದಾನೊಂದು ದಿನ ವಸಂತಋತುವಿನಲ್ಲಿ ಬೆಳಗಿನ ಹೊತ್ತು ಮದನ ಕುಮಾರನೂ ಅವನ ದಾದಿಯೂ ಪಟ್ಟಣದ ಹೊರಗಿ ರುವ ಒ೦ದಾನೊಂದು ಹೂವಿನ ತೋಟದಲ್ಲಿ ನಡೆದುಕೊಂಡು ಹೋಗುತಾ ಇರುವಾಗ ಅರಸು ಮಗನು ಅಲ್ಲಿ ಕಂಡ ಕಂಡ ಹೂವನ್ನೆ ಲ್ಲಾ ಕುಯಿ ದುಕೊಳ್ಳುತ್ತಾ, ಚಿಟ್ಟೆ ಗಳೂ ಪುಟ್ಟ ಪುಟ್ಟ ಹಕ್ಕಿಗಳೂ ಹಾರಾಡುತಿ ರಲು, ಅವುಗಳನ್ನು ಹರಿಸಿಯಾಡುತಾ, ಅಲ್ಲಲ್ಲಿಯೇ ಬಳಸಿ ಬಳಸಿ ಬರುತಾ, ಹೀಗೆ ಓಡಾಡುತ್ತಿರುವಾಗ್ಗೆ, ಕೆಸರಾಗಿದ್ದ ಹುಲ್ಲ ಹಸಳೆಯಲ್ಲಿ ಒ೦ದು ನೀರಹಾವು ಸರಕ್ಕನೆ ಮೇಲಕ್ಕೆ ಎದ್ದು ಸುಕುಮಾರನ ಕಾಲಿಗೆ ಸುತ್ತಿಕೊಂಡಿತು. ಆ ಮಗುವಿಗೂ ಅವನ ಸಂಗಡ ಇದ್ದ ದಾದಿಗೂ ಉ೦ಟಾದ ಭಯವನ್ನು ಕೇಳ ಬೇಕೆ ? “ ಅಯ್ಯೋ ಇನ್ನೇನು ಗತಿ ” ಎಂದು ಕೂಗಿಕೊಳ್ಳು ತಾ ದಾದಿಯು ಓಡಿ ಹೋದಳು. ರಾಜಕುಮಾರನು ಮಹಾ ಭಯದಿಂದ ಗಡಗಡನೆ ನಡು ಗುತ್ತಾ, ಹೆಜ್ಜೆ ಯನ್ನು ಎತ್ತಿ ಮೇಲಕ್ಕೆ ಇಡಲಾರದೆ ನಿಂತ ಕಡೆಯಲ್ಲಿಯೇ ನಿಂತುಕೊಂಡು ಅರಚಿಕೊಳ್ಳು ತಿದ್ದನು. ಸವಿಾಪವಾದ ಕಾಲುದಾರಿ ಯಲ್ಲಿ ಹೋಗುತಿದ್ದ ಸುಮತಿಯು ಇದನ್ನು ಕಂಡು ಓಡಿಬರುತ್ತಾ “ ಅದೇನು ಅದೇನು ?” ಎಂದು ಕೂಗಿ ಕೇಳಿದನು, ನೋಡಿದವರಿಗೆ ಮರುಕ ಹುಟ್ಟುವಂತೆ ಬಿಕ್ಕಳಿಸಿಕೊಂಡು ಅಳುತ್ತಿದ್ದ ಆ ಮದನ ಕುಮಾ ರನ ಬಾಯಲ್ಲಿ ಮಾತೇ ಹೊರಡದೆ, ಅವನು ಕಾಲನ್ನು ಕೊಡವುತಾ ಹಿಂದ ಹಿಂದಕ್ಕೆ ಹೋಗುತಾ ತನ್ನ ಕಾಲನ್ನು ಕೈಯಿಂದ ತೋರಿಸಿದನು.