ಪುಟ:ಸಮತಿ ಮದನಕುಮಾರರ ಚರಿತ್ರ.djvu/೨೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೫, ೧೫] ಸುಮತಿ ಮದನಕುಮಾರರ ಚರಿತ್ರೆ ಹಸ್ತಲಾಘವ ವಿದ್ಯಗಳನ್ನೂ ವಿಶೇಷವಾಗಿ ತೋರಿಸಿ, ಒಂದು ತಂತ್ರ ವನ್ನು ಕೊನೆಗೆ ಇರಿಸಿಕೊಂಡು, ಸುತ್ತಲೂ ನಿಂತಿದ್ದ ಜನರನ್ನು ನೋಡಿ ಹೇಳಿದ್ದೇನೆಂದರೆ : ಇಗೊ ನೋಡಿ ಸಾಧಾರಣವಾದ ವಿದ್ಯಗಳೆಲ್ಲಾ ಆಯಿತು, ವಿಚಿತ್ರವಾದ ಇನ್ನೊಂದು ಅದ್ಭುತವನ್ನು ಕೊನೆಯಲ್ಲಿ ತೋರಿಸಬೇಕೆಂದು ನಿಲ್ಲಿಸಿದ್ದೆ. ಇಗೊ ನೋಡಿ, (ಒಂದು ವಿಾನನ್ನು ಹಿಡಿದು)ನನ್ನ ಕೈಯಲ್ಲಿ ಒಂದು ಮಿಾನಿದೆ, ಇದಕ್ಕೆ ಜೀವವಿಲ್ಲ, ಆದಾಗ್ಯೂ ಅದನ್ನು ಸಾಕಿದವನು ಇಂಥವನೆಂದು ಬಲ್ಲದು, ನಾನು ಯಾವ ಕಡೆಗೆ ಕರೆದರೂ ಆ ಕಡೆಗೆ ಬರುವುದು, ಹೀಗೆ ಹೇಳಿ ಆ ಗಾರುಡಿ ಗನು ಒಂದು ತಟ್ಟೆಯಲ್ಲಿ ನೀರನ್ನು ಹಾಕಿ ಆ ಮಿಾನನ್ನು ಅದರಲ್ಲಿ ಬಿಟ್ಟು ತನ್ನ ಬಳಿಯಲ್ಲಿದ್ದ ರಾಗಿರೊಟ್ಟಿ ಯ ಮುರುಕನ್ನು ಅದಕ್ಕೆ ತೋರಿಸಿದನು, ಅದು ನಿರ್ಜಿವ ಪದಾರ್ಥವಾಗಿದ್ದಾಗ್ಯೂ ಇವನು ರೊಟ್ಟಿಯನ್ನು ಯಾವ ಕಡೆಗೆ ಹಿಡಿದರೆ ಆ ಕಡೆಗೆಲ್ಲಾ ಅದು ತಿರುಗು ತಿತ್ತು, ಇದನ್ನು ನೋಡಿ ಎಲ್ಲರೂ ಆಶ್ಚರ್ಯ ಪಟ್ಟಿ ರು, ಮದನನಿಗಂತೂ ಏನೂ ತೋರಲಿಲ್ಲ, ಬೆಕ್ಕಸ ಬೆರಗಾದನು. ಜೋಯಿಸ, ಸುಮತಿ, ಮದನ ಇವರು ಮೂರುಜನರೂ ಮನೆಗೆ ಬಂದರು, ಮದನನಿಗೆ ಮಿಾನಿನ ತಂತ್ರ ಗೊತ್ತೇ ಆಗಲಿಲ್ಲ, ಅವನು ಇದನ್ನು ಕುರಿತು ಸುಮತಿಯೊಡನೆ ಪ್ರಸ್ತಾಪಮಾಡಲು, ಸುಮತಿಯು -ನಾನೂ ಹಾಗೆಯೇ ಮಾಡಿ ನಿನಗೆ ತೋರಿಸುತೇನೆಂದು ಹೇಳಿ, ಮೇಣದಲ್ಲಿ ಒಂದು ಮಿಾನಿನ ಆಕಾರವನ್ನು ಮಾಡಿ ತಟ್ಟೆ ಯಲ್ಲಿ ನೀರನ್ನು ಹಾಕಿ ಮಿಾನನ್ನು ಅದರ ಮೇಲೆ ತೇಲಬಿಟ್ಟನು. ಒಂದು ರೊಟ್ಟಚೂರನ್ನು ಹಿಡಿದು ಆ ಮಿಾನಿನ ಕಡೆಗೆ ತೋರಿಸಲು, ಅದು ರೊಟ್ಟಕಡೆಗೆ ಓಡಿಬಂತು. ಮದನನು ಆಶ್ಚರ್ಯಪಟ್ಟು ಅದರ ಗುಟ್ಟನ್ನು ತನಗೆ ತೋರಿಸಿಕೊಡು ಎಂದು ಕೇಳಿದನು. ಆಗ ಸುಮತಿಯು-ಇಗೋ ನೋಡು, ಈ ವಿಾನಿನ ಬಾಯಿಂದ ಬಾಲದವರೆಗೂ ಒಂದು ಕಬ್ಬಿಣದ ತಂತಿ ಇವೆ, ಈ ರೊಟ್ಟಿ ಯೊಳಗೆ ಒಂದು ಕಬ್ಬಿಣದ ಮುರುಕು ಇದೆ, ಎಂದನು. - ಮದನನಿಗೆ ಇದು ಚೆನ್ನಾಗಿ ತಿಳಿಯಲಿಲ್ಲ. ಕೂಡಲೆ ಅಲ್ಲಿದ್ದ ಜೋಯಿಸನು ಅದನ್ನು ವಿವರಿಸಿದ್ದು ಹೇಗೆಂದರೆ :--