ಪುಟ:ಸಮತಿ ಮದನಕುಮಾರರ ಚರಿತ್ರ.djvu/೨೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧t೬ ಸುಮತಿ ಮದನಕುಮಾರರ ಚರಿತ್ರ [ ಅಧ್ಯಾಯ ತನ್ನ ಎಡದ ಅಂಗೈಯಲ್ಲಿ ೩-೪ ಸೂಜಿಗಳನ್ನು ಹಾಕಿಕೊಂಡು ಬಲದ ಕೈಯಲ್ಲಿ ರೊಟ್ಟಿ ಯೊಳಗಿದ್ದ ಕಬ್ಬಿಣದ ಮುರುಕನ್ನು ಅದರ ಮೇಲೆ ಹಿಡಿಯಲು, ಆ ಸೂಜಿಗಳೆಲ್ಲಾ ಮೇಲಕ್ಕೆ ನೆಗೆದು ಆ ಕಬ್ಬಿಣದ ತುದಿಗೆ ಅಂಟಿಕೊಂಡವು. ಜೋಯಿಸನು ತನ್ನ ಕೈಲಿದ್ದ ಕಬ್ಬಿಣದ ಬೀಗದಕೈ ಯನ್ನು ಕೆಳಗೆ ಇಟ್ಟು ಸ್ವಲ್ಪ ದೂರದಲ್ಲಿ ಈ ಕಬ್ಬಿಣದ ಮುರುಕನ್ನು ಇರಿಸಿದನು. ಆ ಕ್ಷಣವೇ ಆ ಬೀಗದ ಕೈ ಬೇಗ ಹೋಗಿ ಕಬ್ಬಿಣದ ಮುರುಕಿಗೆ ಅಂಟಿಕೊಂಡಿತು. ಇದಕ್ಕೆಲ್ಲಾ ಕಾರಣ ವೇನೆಂದು ಮದನ ಪ್ರಶ್ನೆ ಮಾಡಲು, ಜೋಯಿಸನು – ಕಬ್ಬಿಣದ ಗಣಿಯಲ್ಲಿ ಒಂದು ವಿಧವಾದ ಕಲ್ಲು ಸಿಕ್ಕುವುದು. ಇದಕ್ಕೆ ಸೂಜಿಕಲ್ಲು ಅಥವಾ ಅಯಃಕಾಂತಶಿಲೆ ಎಂದು ಹೆಸರು, ಈ ಕಲ್ಲಿನಲ್ಲಿ ಕಬ್ಬಿಣವ ನ್ನೆಲ್ಲಾ ತನ್ನ ಕಡೆಗೆ ಎಳೆದುಕೊಳ್ಳುವ ವಿಚಿತ್ರವಾದ ಒಂದು ತ್ರಾಣವಿದೆ, ಆ ಕಲ್ಲಿನಮೇಲೆ ಒಂದು ಕಬ್ಬಿಣದ ಮುರುಕನ್ನು ತಿಕ್ಕಿದರೆ ಆ ಕಬ್ಬಿ ಣಕ್ಕೂ ಆ ಶಿಲೆಯ ತಾಣ ಬರುವುದು, ಮಾನಿನ ಬಾಯಿಯಕೊನೆ ಯಲ್ಲಿ ಸೂಜಿಕಲ್ಲಿನಮೇಲೆ ತಿಕ್ಕಿದಂಥಾ ಕಬ್ಬಿಣದ ತಂತಿ ಇದೆ. ರೊಟ್ಟಿ ಯ ಚೂರಿನ ಒಳಗೆ ಸಾಧಾರಣವಾದ ಕಬ್ಬಿಣದ ಮುರುಕು ಇದೆ. ಆದ್ದರಿಂದ ರೊಟ್ಟಿಗೆ ಮಾನುಬಂದು ಅಂಟಿಕೊಳ್ಳುವುದು, ಹೀಗೆಂದು ಹೇಳಿದನು. ಈ ಮಾತನ್ನು ಕೇಳಿದ ಮದನನು-ಈ ಮಿಾನನ್ನು ಹೇಗೆ ಹೇಗೆ ತಿರುಗಿಸಿದರೂ ಒಂದೇ ಕಡೆಗೆ ತಿರುಗುತಿತ್ತು. ಅದು ಹೇಗೆ ? ಜೋಯಿಸಅದನ್ನು ಹೇಗೆ ತಿರುಗಿಸಿದಾಗ್ಯೂ ಅದು ಉತ್ತರ ದಕ್ಷಿಣವಾಗಿ ನಿಂತುಕೊಳ್ಳುವುದು, ಉತ್ತರದಿಕ್ಕಿಗೆ ತಿರುಗಿಕೊಳ್ಳುವ ಗುಣ ಇದರಲ್ಲಿದೆ, ಈ ಗುಣವನ್ನು ಕಂಡು ಹಿಡಿದು ಉತ್ತರಮುಖಿ ಯನ್ನು ಮಾಡಿದಾರೆ. ಈ ಉತ್ತರಮುಖಿಯಲ್ಲಿ ದಿಕ್ಕುಗಳನ್ನೂ ಉಪ ದಿಕ್ಕು ಗಳೂ ಗುರುತುಮಾಡಿ, ಮಧ್ಯೆ ಒಂದು ಗುಬಟನ್ನು ಇರಿಸಿ ಅದ ರಮೇಲೆ ಸೂಜಿಕಲ್ಲಿಗೆ ಸಿಕ್ಕಿದ ಒಂದು ಸೂಜಿಯನ್ನು ಮಧ್ಯಕ್ಕೆ ಸರಿ ಯಾಗಿ ತೂಕಾನೋಡಿ ನಿಲ್ಲಿಸಿ ಇರುತಾರೆ. ಆ ಸೂಜಿಗೆ ಯಾವ ಕಡೆಯೂ ಇಲ್ಲದಿರುವಕಾರಣ ಉತ್ತರದಿಕ್ಕಿಗೇ ತಿರುಗಿಕೊಳ್ಳುವುದು.