ಪುಟ:ಸಮತಿ ಮದನಕುಮಾರರ ಚರಿತ್ರ.djvu/೨೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೭ ೧೫] ಸುಮತಿ ಮದನಕುಮಾರರ ಚರಿತ್ರೆ ಮದನ-ಈ ಉತ್ತರಮುಖಿಯಿಂದ ಉಪಯೋಗವೇನು ? ಜೋಯಿಸ-ಈ ಹೊಸ ಉಪಾಯವನ್ನು ಏರ್ಪಡಿಸುವುದಕ್ಕೆ ಮುಂಚೆ, ಸಮುದ್ರದಮೇಲೆ ಪ್ರಯಾಣಮಾಡುವ ನಾವಿಕರಿಗೆ ಬಹು ಕಷ್ಟ ವಾಗಿತ್ತು. ಮಸಲ ಪೂರ್ವದಿಕ್ಕಿಗೆ ಹಡಗನ್ನು ತಿರುಗಿಸಿಕೊಂಡು ಹೊರಟರೆ ಆ ದಿಕ್ಕಿಗೇ ಹೋಗುತಿದ್ದರು, ಗಾಳಿ ಬಂದು ಬೇರೆ ಕಡೆಗೆ ಹಡಗನ್ನು ತಳ್ಳಿಕೊಂಡು ಹೋದರೆ ಅಲ್ಲಿಗೆಲ್ಲಾ ಹೋಗುತಿದ್ದರು. ಮೋಡ ಕವಿದುಕೊಂಡರೆ ದಿಕ್ಕು ತೋರುತಿರಲಿಲ್ಲ. ರಾತ್ರಿ ಹೊತ್ತು ಮತ್ತೂ ಕಷ್ಟವಾಗಿತ್ತು. ನಕ್ಷತ್ರಗಳು ಕಾಣಿಸಿದರೆ ಅದನ್ನು ನೋಡಿ ದಿಕ್ಕುಗಳನ್ನು ತಿಳಿದುಕೊಳ್ಳುತಿದ್ದರು, ಅದೂ ಕಾಣಿಸದೇ ಇದ್ದರೆ ಅವರ ಕಷ್ಟವನ್ನು ಹೇಳಲು ಶಕ್ಯವಲ್ಲ. ಎತ್ತ ನೋಡಿದರೂ ನೀರು, ಎಲ್ಲಿ ನೋಡಿದರೂ ಕತ್ತಲೆ, ಹೀಗೆ ಆಗುತಿತ್ತು. ಆದರೆ ಉತ್ತರಮುಖಿಯನ್ನು ಕಂಡುಹಿಡಿದ ಈಚೆಗೆ ಈ ಕಷ್ಟವೆಲ್ಲಾ ತಪ್ಪಿತು. ಇದರಿಂದ ದಿಕ್ಕು ಗಳೆಲ್ಲಾ ಗೊತ್ತಾಗುತಿದ್ದ ಕಾರಣ, ಸಮುದ್ರದ ಮೇಲೆ ಸಿಕ್ಕಿದ ಕಡೆ ಸುತ್ತದೆ, ಯಾವ ಕಡೆಗೆ ಹೋಗಬೇಕೋ ಅಲ್ಲಿಗೆ ನೆಟ್ಟಗೆ ಹೋಗುತ್ತಾರೆ. ಮದನ- ಇದು ತಿಳಿಯುವುದಕ್ಕೆ ಮುಂಚೆ ಏನ ಮಾಡುತಿದ್ದರು? ಜೋಯಿಸ-ಸಮುದ್ರದಮೇಲೆ ಬಹಳ ದೂರ ಹೋಗುತಿರಲಿಲ್ಲ. ತಡಿಯ ಹತ್ತರಲೇ ಹಡಗನ್ನು ನಡೆಯಿಸಿಕೊಂಡು ಒಂದು ರೇವಿನಿಂದ ಇನ್ನೊಂದು ರೇವಿಗೆ ಹೋಗುತಿದ್ದರು. ಈ ದೇಶದ ಸರಕುಗಳು ಇನ್ನೊ೦ದುದೇಶಕ್ಕೂ, ಅಲ್ಲಿನ ಸರಕುಗಳು ಇಲ್ಲಿಗೂ ಸಾಗುವುದಕ್ಕೆ ಆಗುತಿರಲಿಲ್ಲ. ಸೌಖ್ಯವಾಗಿ ನಾವು ಜೀವಿಸಿಕೊಂಡು ಇರಬೇಕಾದರೆ ನಮಗೆ ಅಲ್ಲಿನ ಸರಕುಗಳೂ ಬೇಕು, ಇಲ್ಲಿನ ಸರಕುಗಳೂ ಬೇಕು. ಸುಮತಿ - ಇಲ್ಲಿ ಆಗುವ ಸರಕಿನಿಂದಲೇ ನಾವು ಜೀವಿಸಿಕೊಂ ಡಿರುವುದಕ್ಕೆ ಆಗುವುದಿಲ್ಲವೆ ? ಎಷ್ಟು ಇದ್ದರೆ ಅಷ್ಟೇ ಸಾಕು. ಜೋಯಿಸ-ಈ ಮಾತು ನಿಜ, ನಮ್ಮ ಸೀಮೆಯಲ್ಲಿ ಆಗುವ ಸರಕು ಜೀವನಕ್ಕೆ ಸಾಕು, ದೇಶಾಂತರದಿಂದ ಬರುವ ಸರಕಿನಿಂದ ನಮಗೆ ಕೆಟ್ಟದ್ದೇ ಹೊರತು ಒಳ್ಳೇದಲ್ಲ. ಆದಾಗ್ಯೂ ಒಂದೊಂದು ದೇಶದಲ್ಲಿ ಒಂದೊಂದು ವಿಶೇಷವಾದ ಪದಾರವಾಗುವುದು, ಹೆಚ್ಚಾ