ಪುಟ:ಸಮತಿ ಮದನಕುಮಾರರ ಚರಿತ್ರ.djvu/೨೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

nt೮ ಸುಮತಿ ಮದನಕುಮಾರರ ಚರಿತ್ರೆ [ಅಧ್ಯಾಯ ದ್ದನ್ನು ಬೇರೆ ಕಡೆಗೆ ಕಳುಹಿಸಿ, ಬೇಕಾದ್ದನ್ನು ತಂದುಕೊಂಡರೆ, ಜನರು ವಿಶೇಷ ಸುಖವಾಗಿರಬಹುದು. ಸುಮತಿ- ಏನೂ ಆಗದೇ ಇರತಕ್ಕೆ ಉತ್ತರಪ್ರಾಂತ್ಯದ ಕೊನೆ ಯಲ್ಲಿ ಇದ್ದದನ್ನೇ ತಿಂದುಕೊಂಡು ಜನರು ತೃಪ್ತರಾಗಿದಾರೆಂದು ಹೇಳಿ ದೀರಷ್ಟೆ. ಜೋಯಿಸ-ಹವುದು, ಆ ಉತ್ತರ ಪ್ರಾಂತ್ಯದಲ್ಲಿ ಚಳಿ ಬಹು ಹೆಚ್ಚು, ಹಿನು ಯಾವಾಗಲೂ ಬೀಳುವುದು, ಅದು ಗಟ್ಟಿ ಯಾಗಿ ಗೆಡ್ಡೆ ಯಾಗುವುದು, ಕರಗುವುದೇ ಇಲ್ಲ, ಅಲ್ಲಿ ಯಾವ ಗಿಡವೂ ಬೆಳೆಯು ವುದಿಲ್ಲ. ಆದ್ದರಿಂದ ಮನೆ ಕಟ್ಟುವುದಕ್ಕೆ ಮರ ಸಿಕ್ಕುವುದಿಲ್ಲ. ಆದರೆ ಇತರ ದೇಶದಿಂದ ಕೊಚ್ಚಿ ಕೊಂಡು ಬಂದು, ಸಮುದ್ರತೀರದಲ್ಲಿ ಬಿದ್ದಿ ರುವ ಮರವನ್ನು ತಂದು ಅದನ್ನು ನಿಲ್ಲಿಸಿ, ಮೇಲೆ ಮಣ್ಣ ಬಳಿಯು ವರು, ಕಲ್ಲಿನಲ್ಲಿಯೂ ಮಣ್ಣಿನಲ್ಲಿಯೂ ಗೋಡೆಯನ್ನು ಕಟ್ಟು ವರು. ಇಂಥಾ ಗುಡಿಸಿಲಿನಲ್ಲಿ ಜನರು ವಾಸಮಾಡುವರು. ಮನೆಯೊಳಗೆ ಒಂದು ದೀಪ ಯಾವಾಗಲೂ ಉರಿಯುತ್ತಲೇ ಇರುವುದು, ಅದರಿಂದ ಜನರಿಗೆ ಬೆಳಕು ಉಂಟಾಗುವುದು, ಅವರ ಅಡಿಗೆಯೆಲ್ಲಾ ಅದರಲ್ಲಿ ಆಗುವುದು. ಮತ್ತು ಮನೆಯೆಲ್ಲಾ ಬೆಚ್ಚಗೆ ಆಗುವುದು, ಚಳಿಯಿಂದ ನೀರೆಲ್ಲಾ ಗಟ್ಟಿಯಾಗುವುದು, ಸಮುದ್ರದ ಮೇಲೆ ಹಿಮದಗೆಡ್ಡೆ ಯು ಪದ್ವ ತದಹಾಗೆ ತೇಲುತ್ತಾ ಇರುವುದು, ಅವುಗಳು ಗಾಳಿಯ ದೆಸೆಯಿಂದ ಒಂದರಮೇಲೆ ಒಂದು ಬೀಳುವುದು, ಇದರ ಮಧ್ಯೆ ಹಡಗು ಮೊದಲಾದ್ದು ಸಿಕ್ಕಿದರೆ ಚೂರುಚೂರಾಗುವುದು. ಈ ಮಂಜಿನ ಬೆಟ್ಟ ಗಳಮೇಲೆ ಬಿಳೀಕರಡಿ ಮಲಗಿಕೊಂಡು ನಿದ್ರೆ ಮಾಡುತಿರುವುದು. ಮದನ-ಇಂಥಾ ದೇಶದಲ್ಲಿ ಜನರು ಏನನ್ನು ತಾನೆ ತಿಂದು ಬದುಕಿಯಾರು ? ಜೋಯಿಸ-ಆ ಉತ್ತರಸಮುದ್ರದಲ್ಲಿ ಇನ್ನೆನೂ ಸಿಕ್ಕುವುದಿಲ್ಲ. ಒಂದು ವಿಧವಾದ ವಿಾನು ಮಾತ್ರ ಸಿಕ್ಕುವುದು. ಇದರಿಂದ ಅವರಿಗೆ ಬೇಕಾದ್ದೆಲ್ಲಾ ದೊರೆಯುವುದು, ಅದರ ಮಾಂಸದಿಂದ ಹೊಟ್ಟೆ ತುಂಬಿ ಕೊಳ್ಳುವರು. ಅದರ ಕೊಬ್ಬು ದೀಪಕ್ಕೆ ಎಣ್ಣೆಯಾಗುವುದು, ಅದರ