ಪುಟ:ಸಮತಿ ಮದನಕುಮಾರರ ಚರಿತ್ರ.djvu/೨೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೫] - ಸುಮತಿ ಮದನಕುಮಾರರ ಚರಿತ್ರೆ ೧ts ಚಕ್ಕಳವನ್ನೆ ಮನೆಯ ಒಳಗಡೇಗೋಡೆಗೆ ಅಂಟಿಸುವರು. ಇದರ ಮೇಲೆ ನೀರು ಕೆ೦ದುವುದಿಲ್ಲ. ಇ೦ಥಾ ಉಪಯೋಗವಾದ ಜಂತು ವನ್ನು ಹಿಡಿಯುವುದೇ ಜನರ ಮುಖ್ಯವಾದ ಕೆಲಸ, ಆ ಸಮುದ್ರದಲ್ಲಿ ತಿಮಿಂಗಿಲವೆಂಬ ಒಂದು ವಿಧವಾದ ಜಲಜಂತು ಸಿಕ್ಕುವುದು. ಇದು ಈವರೆಗೆ ನಾವು ಕಂಡದ್ದರಲ್ಲಿ ಅತ್ಯಂತ ದೊಡ್ಡ ಮೃಗವಾಗಿದೆ. ಉದ್ದ ದಲ್ಲಿ ಅರುವತ್ತು ಎಪ್ಪತ್ತು ಮೊಳ ಇರುವುದು ; ಸಮುದ್ರದಮೇಲೆ ಕಾಣಿ ಸುವ ಒಂದು ಚಿಕ್ಕ ಬೆಟ್ಟ ವೋ ಎನ್ನುವ ಹಾಗೆ ನೀರಿನಮೇಲೆ ತೇಲುತಿ ರುವುದು, ಅದರ ತಲೆಯಲ್ಲಿ ಎರಡು ತೂತು ಇದೆ. ಆ ತೂತಿನಿಂದ ಕಾರಂಜಿಹಾರಿದಂತೆ ನೀರನ್ನು ಹಾರಿಸುತ್ತಲೇ ಇರುವುದು, ಅದರ ಬಾಲದಿಂದ ಒಂದುಸಾರಿ ನೀರನ್ನು ಬಡಿದರೆ, ಒಂದು ದೊಡ್ಡ ಬಿರುಗಾಳಿ ಎದ್ದ ಹಾಗೆ ಗಾಳಿ ಹೊರಟು ಸಮುದ್ರ ಉಕ್ಕು ವದು. ಯಾವಾಗ ಲಾದರೂ ಅಕಸ್ಮಾತ್ತಾಗಿ ಇದಕ್ಕೆ ಹಡಗು ಸಿಕ್ಕಿದರೆ, ಅದನ್ನು ತಲೆ ಕೆಳಗೆ ಮಾಡುವುದು ವಿನಾ ಇನ್ನು ಯಾವ ಕೆಟ್ಟ ತನಕ್ಕೂ ಇದು ಬರ: ವುದಿಲ್ಲ. ಇದು ಮಿಾನನ್ನು ತಿಂದೇ ಜೀವಿಸುವುದು, ಇಂಥಾ ಮೃಗ ವನ್ನು ಹಿಡಿದು ಕೊಲ್ಲುತ್ತಾರೆ. ಆ ದೇಶದವರು ಹೊಟ್ಟೆಗಿಲ್ಲದೆ, ಅದನ್ನು ಹಿಡಿಯುತ್ತಾರಾದ್ದರಿಂದ, ಅವರು ಅಷ್ಟು ಆಕ್ಷೇಪಣೆಗೆ ಗುರಿಯಾಗು ವುದಿಲ್ಲ. ಇತರ ಜನರು ಯಾಕೆ ಆ ಕೆಲಸಕ್ಕೆ ಹೋಗಬೇಕು ? ಯಾಕೆ೦. ದರೆ ಅದರಿಂದ ಒಂದು ವಿಧವಾದ ಎಣ್ಣೆ ಹೊರಡುವುದು, ಅದು ಅನೇಕ ಕೆಲಸಕ್ಕೆ ಉಪಯೋಗವಾಗುವುದು, ಮೇಲೂ, ತಿ ಮಿ ೦ ಗಿ ಲ ದ ಮೂಳೆಯು ಬಹು ಗಟ್ಟಿಯಾಗಿಯೂ ವಿಶೇಷವಾಗಿ ಬಗ್ಗೆ ತಕ್ಕದ್ದಾ ಗಿಯೂ ಇರುವಕಾರಣ, ಅದರಿಂದಲೂ ಬಹಳ ಉಪಯೋಗ ಉಂಟು. ಇಂಥಾ ಮೃಗವನ್ನು ಕೊಲ್ಲುವುದು ಬಹು ಕಷ್ಟವಾದ ಕೆಲಸವೇ ಸರಿ, ಜನರು ಹಡಗಿನಮೇಲೆ ಕೂತು ಹೊರಡುವರು, ತಿಮಿಂಗಿಲ ವನ್ನು ದೂರದಲ್ಲಿಯೇ ಕಂಡ ಕೂಡಲೆ, ೮-೧೦ ಜನ ದೋಣಿಯಲ್ಲಿ ಕೂತು ಅದರ ಸವಿಾಪಕ್ಕೆ ಹೋಗುವರು. ಅವರಲ್ಲಿ ಒಬ್ಬನು ಒಂದು ಹಗ್ಗದ ಕೊನೆಗೆ ಕೊಕ್ಕೆ ಯಹಾಗಿರುವ ಒಂದು ಹರಿತವಾದ ಆಯುಧ ವನ್ನು ಕಟ್ಟಿ ಅದನ್ನು ತಿಮಿಂಗಿಲದಕಡೆ ಎಸೆಯುವನು. ಕೂಡಲೆ ಅದು