ಪುಟ:ಸಮತಿ ಮದನಕುಮಾರರ ಚರಿತ್ರ.djvu/೨೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ܗܘܦ ಸುಮತಿ ಮದನಕುಮಾರರ ಚರಿತ್ರೆ [ಅಧ್ಯಾಯ ಹಗ್ಗವನ್ನು ತನ್ನ ಮೈಗೆಲ್ಲಾ ಸುತ್ತಿಕೊಳ್ಳುವದಕ್ಕೆ ಮೊದಲುಮಾಡಿ, ನೀರಿನೊಳಕ್ಕೆ ಹೊರಟು ಹೋಗುವುದು, ಅದು ಎಷ್ಟು ಎಳೆದರೂ ಬರುವ ಹಾಗೆ ಹಗ್ಗವನ್ನೂ ಉದ್ದವಾಗಿ ಬಿಡುವರು. ಹೀಗೆ ತಾನು ಹಾಕಿಕೊಂಡ ಕಟ್ಟನ್ನು ತಾನು ಸಹಿಸಲಾರದೆ ಮೇಲಕ್ಕೆ ಏಳುವುದು. ಮತ್ತೆ ಜನರು ಹೋಗಿ ಹೀಗೆಯೇ ಹೊಸಕಟ್ಟು ಅದಕ್ಕೆ ಬೀಳುವ ಹಾಗೆ ಮಾಡುವರು, ಈ ಬಂಧದಿಂದ ತಾನಾಗಿಯೇ ಆ ಮಹಾಜಂತುವು ಸಾಯುವುದು, ಸುಮತಿ-ಅದರ ಹತ್ತಿರಕ್ಕೆ ಹಡಗು ಹೋದರೆ ಅದನ್ನು ಮುಳು ಗಿಸುವುದು ಹೊರತು ತಿಮಿಂಗಿಲವು ಇನ್ನು ಏನೂ ಮಾಡುವುದಿಲ್ಲವೆಂದು ಹೇಳಿದಿರಿ, ಹಾಗಾದರೆ ಆ ನಿರಪರಾಧಿಯಾದ ಬಡ ಜಂತುವನ್ನು ಯಾಕೆ ಕೊಲ್ಲಬೇಕು ? ಜೋಯಿಸ-ಅಯ್ಯ, ವಿಧವಿಧವಾದ ಪ್ರಯೋಜನದಮೇಲಿನ ದೃಷ್ಟಿಯಿಂದ ಜನರು ಎಲ್ಲಾ ಕಾರಗಳಿಗೂ ಪ್ರವೇಶಮಾಡುವರು. ಇದನ್ನು ನೀನು ಅರಿಯಬೇಕಾದರೆ ಪ್ರಪಂಚ ಧಮ್ಮನನ್ನು ನೀನು ಇನ್ನೂ ಚೆನ್ನಾಗಿ ತಿಳಿಯಬೇಕು, ಅದು ಹಾಗಿರಲಿ, ಈ ತಿಮಿಂಗಿಲವು ಅನೇಕ ಮಿಾನುಗಳನ್ನು ಕೊಲ್ಲುವುದು. ಇದು ಸಾಯುವುದರಿಂದ ಆ ನಿರಸ ರಾಧಿಗಳಾದ ವಿಾನುಗಳಿಗೆ ಸಂತೋಷವಾಗುವುದಿಲ್ಲವೆ ? ಮತ್ತು ಆ ಮಹಾ ಶೀತ ಪ್ರದೇಶದಲ್ಲಿ ಮತ್ತೆ ಏನೂ ಸಿಕ್ಕುವುದಿಲ್ಲವಾಗಿ ಜನರು ಇದರ ಮಾಂಸವನ್ನು ತಿಂದು ಹೊಟ್ಟೆ ತುಂಬಿಕೊಳ್ಳುವರು. ಮದನ-ಅಷ್ಟು ಕಷ್ಟ ವನ್ನಾದರೂ ಪಟ್ಟು ಕೊಂಡು ಅ೦ಥಾ ಕೆಟ್ಟ ಪ್ರಾಂತ್ಯದಲ್ಲಿ ಜನರು ಯಾಕೆ ವಾಸಮಾಡಬೇಕು ? ಸುಭಿಕ್ಷವಾಗಿ ರುವ ಬೇರೇದೇಶಕ್ಕೆ ಯಾಕೆ ಹೋಗಿ ಸುಖವಾಗಿರಬಾರದು ? ಜೋಯಿಸ-ಅವರ ದೇಶವೇ ಅವರಿಗೆ ಸುಖವಾಗಿದೆ, ಇತರ ದೇಶವನ್ನು ಅವರು ಒಲ್ಲರು, ಇತರ ದೇಶೀಯರನ್ನು ಕಂಡರೆ ಅವರಿಗೆ ಸೇರುವುದಿಲ್ಲ. ಮದನ - ಈ ಕಾಡು ಜನರಿಗೆ ತಮಗಿಂತಲೂ ಉತ್ತಮರಾದವ ರನ್ನು ಕಂಡರೆ ಸೇರುವುದಿಲ್ಲವೆಂದರೇನು ? ಇವರು ಎಷ್ಟು ಮಾತ್ರ ದವರು ?