ಪುಟ:ಸಮತಿ ಮದನಕುಮಾರರ ಚರಿತ್ರ.djvu/೨೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೫] ಸುಮತಿ ಮದನಕುಮಾರರ ಚರಿತ್ರೆ ೨೦೧ ಜೋಯಿಸ.. ನೀನು ಹಾಗೆ ತಿಳಿದಿದೀಯೆ, ಅವರು ಇತರರಿಗಿಂ ತಲೂ ತಾವು ಬುದ್ದಿವಂತರೆಂದು ತಿಳಿದುಕೊಂಡಿದಾರೆ. ಮಸಲ, ಈ ತಿಮಿಂಗಿಲವನ್ನು ಹಿಡಿಯುವುದರಲ್ಲಿ ಅವರ ಸಾಮರ್ಥ್ಯಕ್ಕೆ ಸಮಾನ ವಾದ್ದು ಯಾರದೂ ಅಲ್ಲ. ಅವರೂ ಹಾಗೆಯೇ ಎಲ್ಲರಿಗಿಂತಲೂ ತಾವೇ ಬುದ್ದಿವಂತರೆಂದು ತಿಳಿದಿದಾರೆ. ' ಮದನ-ಅವರ ಅವಿವೇಕವನ್ನು ಅವರಿಗೆ ತೋರಿಸಿಕೊಟ್ಟು, ಅವರಿಗೆ ಬುದ್ದಿ ಕಲಿಸಬೇಕೆಂದು ನನಗೆ ಇಷ್ಟವಿದೆ. ಜೋಯಿಸ--ನಿನ್ನ ಊಳಿಗದವರಿಗಿಂತಲೂ ನೀನು ಎಷ್ಟೋ ಬುದ್ದಿವಂತನೆಂದು ನೀನು ತಿಳಿದುಕೊಂಡಿಲ್ಲವೊ ? ಅವರನ್ನು ಅತಿ ನಿಕೃಷ್ಟ ವಾಗಿ ನೀನು ಕಾಣುವುದಿಲ್ಲವೋ ? ಮದನ ಅವರನ್ನು ಕಂಡರೆ ಪೂತ್ವದಲ್ಲಿ ನನಗಿದ್ದ ಅಸಹ್ಯ ಈಗ ಇಲ್ಲ. ಆದಾಗ್ಯೂ, ನಾನು ದೊರೆಮಗನಾದ್ದರಿಂದ ಅವರಿಗಿಂತಲೂ ನಾನು ಉತ್ತಮ. ಜೋಯಿಸ-ದೊರೆಮಗ, ದೊರೆಮಗ, ಎಂದು ನೀನು ಹೇಳು ತಲೇ ಇರುತೀಯೆ. ಅದಕ್ಕೆ ನನಗೆ ಇನ್ನೂ ಚೆನ್ನಾಗಿ ಅರ್ಥವಾಗಲಿಲ್ಲ. ಮದನ-ಯಾವ ಕೆಲಸವನ್ನೂ ಮಾಡದೆ ಇರುವಂಥಾ ಮತ್ತು ನಮ್ಮ ಅ ಸ್ವಾಜಿಯ ಸಮೀಾ ಪದಲ್ಲಿಯೂ ನಮ್ಮ ಅಮ್ಮಯ್ಯನ ಸಖಾ ಸ ದಲ್ಲಿಯೂ ಊಳಿಗದವರು ಕಾದುಕೊಂಡು ನಿಂತಿರುವ ಹಾಗೆ ಯಾರ ಸವಿಾಪದಲ್ಲಿ ನಿಂತಿರುತ್ತಾರೆಯೋ ಅ೦ಥಾ ಮನುಷ್ಯನು ದೊರೆಮಗ. ಜೋಯಿಸ-ಇಂಥಾ ಮನುಷ್ಯನು ಇತರರನ್ನು ತಿರಸ್ಕಾರಭಾವ ದಲ್ಲಿ ಕಾಣಬಹುದೆ ? ಮದನ-ಆ ಮಾತನ್ನು ನಾನು ಆಡಲಿಲ್ಲ, ಆದರೆ ದೊರೆಮ ಗನು ಇತರರಿಗಿಂತಲೂ ಶ್ರೇಷ್ಠ. ' ಜೋಯಿಸ-ಯಾತರಲ್ಲಿ ಶ್ರೇಷ್ಠ? ಆರಂಬವನ್ನು ಮಾಡಿ ದವಸಾ ಬೆಳೆಯುವುದರಲ್ಲಿಯೆ ? ಬಟ್ಟೆ ನೆಯ್ಯುವುದರಲ್ಲಿಯೆ ? ಮನೆಕಟ್ಟುವುದರ ಲ್ಲಿಯೆ ? ಯಾತರಲ್ಲಿ ? ಮದನ-ದೊರೆ ಮಕ್ಕಳು ಮನೆ ಕಟ್ಟುವುದೂ ಇಲ್ಲ, ಆರಂಬ ಮಾಡುವುದೂ ಇಲ್ಲ, ಬಟ್ಟೆ ನೆಯ್ಯುವುದೂ ಇಲ್ಲ. 14