ಪುಟ:ಸಮತಿ ಮದನಕುಮಾರರ ಚರಿತ್ರ.djvu/೨೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೬ ಸುಮತಿ ಮದನಕುಮಾರರ ಚರಿತ್ರೆ ೨೦೩ ರೆಲ್ಲರೂ ತಮ್ಮ ಹೆಂಗಸರು ಮಕ್ಕಳುಗಳನ್ನು ಕರೆದುಕೊಂಡು ಬಂದು ಬ್ರಾಹ್ಮಣರ ಊಟವಾಗಲೆಂದು ಕಾದುಕೊಂಡು ಹೊರಗಡೇ ಜಗಲಿಗಳ ಮೇಲೆ ಕೂತಿದ್ದರು. ಜೋಯಿಸನು ಬಂದ ಅತಿಥಿಗಳನ್ನು ಬಡವರು ಭಾಗ್ಯವಂತರು ಎಂದು ನೋಡದೆ, ಒಬ್ಬೊಬ್ಬರನ್ನಾ ಗಿ ಎದುರುಗೊಂಡು ಕರೆತಂದು ಅಲ್ಲಲ್ಲಿ ಎಡೆಮಾಡಿ ಕೂರಿಸಿ, ಅವರ ಕ್ಷೇಮಲಾಭವನ್ನು ವಿಚಾರಿಸಿ ಅವರ' ಗೃಹಕೃತ್ಯವನ್ನೆಲ್ಲಾ ಕೇಳಿ ಅವರನ್ನು ಆದರಿಸು ತಿದ್ದನು. ಹೀಗೆ ಜೋಯಿಸನು ಬೇರೇ ಕೆಲಸದಲ್ಲಿ ಇದ್ದನಾದಕಾರಣ, ಮದನನಿಗೆ ಸ್ವಲ್ಪ ಬಿಡುವಾಯಿತು. ಆಗ ಇವನು ಸುಮ್ಮನಿರದೆ ಜೋಯಿಸನ ಮನೆಯಲ್ಲಿದ್ದ ಒಂದು ಹೆಂಗರುವನ್ನು ಬಿಚ್ಚಿ ಕೊಂಡು ಬಂದು ಒಂದು ಮರದ ತುಂಡಿಗೆ ಕಟ್ಟಿ ಹೊಡೆಯುವುದಕ್ಕೆ ಮೊದಲು ಮಾಡಿದನು, ಅಲ್ಲಿದ್ದ ಹುಡುಗರೆಲ್ಲಾ ಮದನನು ಏನ ಮೂಡುತಾನೋ ನೋಡಬೇಕೆಂದು ಇವನ ಸುತ್ತಲೂ ನಿಂತುಕೊಂಡಿದ್ದರು, ಇವನು ಕರುವನ್ನು ಕಟ್ಟಿಗೆಯಿಂದ ಗಟ್ಟಿಯಾಗಿ ಹೊಡೆಯಲು, ಎಂದಿಗೂ ಭಾರವನ್ನು ಎಳೆದ ಅಭ್ಯಾಸವನ್ನೇ ಕಾಣದಂಥಾ ಆ ಹೆಂಗರು ಮನಸ್ಸು ಬಂದಕಡೆಗೆ ಇವನನ್ನು ಅಡ್ಡಾದಿಡ್ಡಿಯಾಗಿ ಎಳೆದುಕೊಂಡು ಹೋಯಿತು, ಆ ವೇಗದಲ್ಲಿ ಮದನನ ಕೈ ಕಾಲುಗಳೆಲ್ಲಾ ತರೆದುಹೋ ದವು, ಕೊನೆಗೆ ಕರುವು ಇವನನ್ನು ಎಳೆದುಕೊಂಡು ಹೋಗಿ ದೊಡ್ಡ ಹಳ್ಳಕ್ಕೆ ಕೆಡವಿತು. ಮೈಯೆಲ್ಲಾ ಕೊಚ್ಚೆ ಯಾಯಿತು. ಇವನ ಹಿಂದೆ “ ಹೋ ” ಎಂದು ಕೂಗಿಕೊಂ ಡು ಓಡಿಬರುತಿದ್ದ ಹುಡುಗರೆಲ್ಲಾ ಹಾಸ್ಯ ಮಾಡಿ ಗೊಳ್ ಎಂದು ಗಟ್ಟಿ ಯಾಗಿ ನಕ್ಕರು. ಮದನನಿಗೆ ಈ ಹಾಸ್ಯ ದಿಂದ ನಾಚಿಕೆ ಉಂಟಾಗಿ ಕೊನೆಗೆ ಅದು ಕೋಪವನ್ನು ಎಬ್ಬಿಸಿತು. ದೊರೆಮಗನು ಹಳ್ಳದಿಂದ ಮೇಲಕ್ಕೆ ಎದ್ದು ಆ ಹುಡುಗರು ನಿಂತಿದ್ದ ಕಡೆಗೆ ಬಂದು ಒಬ್ಬೊಬ್ಬರನ್ನಾಗಿ ಹಿಡಿದು ಹೊಡೆಯುವುದಕ್ಕೆ ಮೊದಲು ಮಾಡಿದನು. ಕೆಲವರಿಗೆ ಒಳ್ಳೆ ಪೆಟ್ಟು ಬಿತ್ತು, ಇನ್ನು ಕೆಲವರು ಮದನನ ಕೈಗೆ ಸಿಕ್ಕದೆ ಕೂಗುತಾ ಓಡಿಹೋದರು. ಈ ಮದನನು ಭಾಗ್ಯವಂತರ ಮಗನಲ್ಲಾ, ಇವನನ್ನು ತಾವು ಹಿಂತಿರುಗಿ ಹೊಡೆದರೆ