ಪುಟ:ಸಮತಿ ಮದನಕುಮಾರರ ಚರಿತ್ರ.djvu/೨೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೦+ ಸುಮತಿ ಮದನ ಕುಮಾರರ ಚರಿತ್ರೆ | - [ಅಧ್ಯಾಯ ತಮ್ಮನ್ನು ಆ ಮೇಲೆ ಏನವಾಡಿಯಾರೋ ಎಂಬ ಭಯದಿಂದ ಇವನ ಕೈಲಿ ಏಟತಿಂದು ಸುಮ್ಮನೇ ಹೊರಟುಹೋದರು. ಈ ಗದ್ದಲ ಹೆಚ್ಚಾಗಿ, ಮಡಿ ಉಟ್ಟುಕೊಂಡು ಎಲ್ಲರಿಗೂ ಬಡಿಸುತಿದ್ದ ಜೋಯಿಸನ ಕಿವಿಗೆ ಮುಟ್ಟಿತು. ಜೋಯಿಸನು ತನ್ನ ಮನೆ ಬಾಗಿಲಿಗೆ ಬಂದು ನೋಡಲು ಮೈಯನ್ನು ತರೆಸಿಕೊಂಡು ಕೊಚ್ಚೆಯಾಗಿ ಶರೀರವೆಲ್ಲಾ ನನೆದು ಹೋಗಿದ್ದ ಮದನನು ಮನೇಕಡೆಗೆ ಓಡಿ ಬರುತಿದ್ದನು, ರಾಮಜೋಯಿ ಸನು ಅವನನ್ನು ಕರೆದುಕೊಂಡು ಹೋಗಿ ಸ್ನಾನವನ್ನು ಮಾಡಿಸಿ ಒಣ ಗಿದ್ದ ಬಟ್ಟೆ ಯನ್ನು ಕೊಡಿಸಿ, ಆಗ ಯಾವ ಮಾತನ್ನೂ ಆಡದೆ ಸುಮ್ಮನೆ ಆದನು. ತರುವಾಯ ಆ ಸಂಗತಿಯನ್ನೆ ಲ್ಲಾ ಕೇಳಿ ತಿಳಿದುಕೊಂಡು ಮಾರನೇ ದಿನ ಮದನನನ್ನು ನೋಡಿ-ಮದನ, ನೀನು ನಿನ್ನೆ ದಿನ ಬಹಳ ಚೆನ್ನಾಗಿ ಕರುವನ್ನು ಹೊಡೆದು, ಕೈಲಾಗದ ಹುಡುಗರನ್ನು ಚಚ್ಚಿ, ಹೆಚ್ಚಾದ ಪರಾಕ್ರಮವನ್ನು ತೋರಿಸಿದಹಾಗಿದೆ ಎಂದನು. ಮದನ- ಜೋಯಿಸರೆ, ಆ ಕೆಟ್ಟ ಹುಡುಗರೆಲ್ಲಾ ನನ್ನನ್ನು ಹಾಸ್ಯ ಮಾಡಿಕೊಂಡು ನಕ್ಕರು. ಅದಕ್ಕೋಸ್ಕರ ನನಗೆ ಕೋಪ ಬಂತು. ಜೋಯಿಸ -ಅವರು ನಕ್ಕದ್ದರಿಂದ ನಿನಗೇನು ಕಡಮೆಯಾ ಯಿತು ? ಮದನ-ಇತರರು ನಮ್ಮನ್ನು ನೋಡಿ ನಕ್ಕರೆ ಕೋಪ ಬರದೇ ಯಿರುವುದಿಲ್ಲ. - ಜೋಯಿಸ- ಇದನ್ನು ನಿವಾರಣಮಾಡಿಕೊಳ್ಳುವುದಕ್ಕೆ ಎರಡು ಮಾರ್ಗ ಉಂಟು. ಇತರರು ಹಾಸ್ಯ ಮಾಡುವ ಕೆಲಸಕ್ಕೆ ನಾವು ಹೋಗ | ಲೇಬಾರದು, ಅಥವಾ ಹೋದರೂ ಅವರು ಮಾಡಿದ ಹಾಸ್ಯವನ್ನು ಸಹಿಸಿ ಕೊಂಡು ಸುಮ್ಮನೇ ಇರಬೇಕು. ಮದನ-ಅಂಥಾ ಸಂದರ್ಭದಲ್ಲಿ ಯಾರೂ ಸುಮ್ಮನೇ ಇರುವುದ ಕ್ಯಾಗುವುದಿಲ್ಲ. ಜೋಯಿಸ-ನಿನ್ನಂಥಾ ಕೋಪಿಷ್ಠ ಈ ಪ್ರಪಂಚದಲ್ಲಿ ಯಾರೂ ಇಲ್ಲ. ಚಳಿಯಾದ ಸೀಮೆಯಲ್ಲಿರುವ ಜನರೆಲ್ಲಾ ವರಟರೆಂತಲೂ, ನೀನು ಬಹು ಬುದ್ದಿಶಾಲಿ ಎಂತಲೂ, ಅವರು ನಿನಗೆ ಸಮಾನವಲ್ಲ