೧೭] ಸುಮತಿ ಮದನಕುಮಾರರ ಚರಿತ್ರೆ ೨೦ಜ ವೆಂತಲೂ ಆ ದಿನ ಹೇಳಿಕೊಂಡೆ; ಆದರೆ ಆ ಬಡ ಜನರು ಎಲ್ಲರೂ ದೊರೆ ಮಕ್ಕಳಲ್ಲ. ಆದಾಗ್ಯೂ ಅವರಲ್ಲಿರುವ ನಡತೆ ದೊರೆಮಕ್ಕಳಲ್ಲಿ ಇದು ವರೆಗೂ ಕಾಣಬಂದಿಲ್ಲ. ಅವರನ್ನು ಯಾರಾದರೂ ಹಾಸ್ಯಮಾಡಿದರೆ, ನಿನ್ನ ಹಾಗೆ ಅವರು ಕೋಪಮಾಡಿಕೊಂಡು ಸಿಕ್ಕಿದವರನ್ನೆಲ್ಲಾ ಹೊಡೆ ಯುವುದಿಲ್ಲ. ಒಬ್ಬನನ್ನು ಒಬ್ಬ ಹಾಸ್ಯ ಮಾಡಿದರೆ, ಅವರಿಬ್ಬರೂ ಒಂದು ಮನೆಯಲ್ಲಿ ತಮ್ಮ ಜನರ ಸಭೆಸೇರಿಸಿ, ಅವರ ಮುಂದೆ ಇಬ್ಬ ರಲ್ಲಿ ಒಬ್ಬನು ತನ್ನ ಪ್ರತಿಕಕ್ಷ್ಮಿಯನ್ನು ಹಾಸ್ಯಮಾಡಿ ಪದಗಳನ್ನು ಹಾಡುವನು. ' ಹೀಗೆ ಹಾಡಿ ಹಾಡಿ ಅವನಿಗೆ ಸಾಕಾದಮೇಲೆ ಪ್ರತಿ ಕಕ್ಷಿಯು ಅದೇ ರೀತಿಯಲ್ಲಿ ಇವನಮೇಲೆ ಪದವನ್ನು ಹಾಡುವನು. ಇವರಿಬ್ಬರಲ್ಲಿ ಯಾರ ಪದಗಳು ಸಭೆಯವರಿಗೆ ಹೆಚ್ಚು ನಗುವನ್ನು ಉಂಟುಮಾಡುವುದೋ ಅವನೇ ಜೈಸಿದನೆಂದು ಹೇಳಿ ಅವನಿಗೆ ಬಹು ಮಾನವನ್ನು ಮಾಡುವರು. ಆ ವರಟು ಜನರ ವ್ಯಾಜ್ಯ ಹೀಗೆ ವ್ಯವ ಸ್ಥೆ ಯಾಗುವುದೇ ಹೊರತು ಸಿಕ್ಕಿದವರನ್ನು ಹಿಡಿದು ಹೊಡೆಯುವುದ ರಿಂದ ಅಲ್ಲ. ಬಡವರು ನಿರಪರಾಧಿಗಳಾಗಿದ್ದಾಗ್ಯೂ ಸರಿಯೆ ಅವರನ್ನು ಹಿಡಿದು ಹೊಡೆಯುವ ಸುಗುಣ ದೊರೆಮಕ್ಕಳಲ್ಲಿಯೇ ಹೊರತು, ಆ ವರಟು ಜನರಲ್ಲಿ ಇಲ್ಲ. ಈ ಮಾತನ್ನು ಕೇಳಿ ಮದನ ನಾಚಿಕೊಂಡು ಸುಮ್ಮನಾದನು. ೧೭ ನೆ ಅಧ್ಯಾಯ. ಅತ್ತ ಮದನನ ತಂದೆಯಾದ ಅನಂಗರಾಜನ ಅರಮನೆಯಲ್ಲಿ ನಡೆಯಬೇಕಾದ ಒಂದು ದೊಡ್ಡ ಮಹೋತ್ಸವವು ಸವಿಾಪಿಸಿತು. ದೊರೆ ಹೆಂಡತಿಯಾದ ಖಾನಾ೦ಬಕ್ರೀದೇವಿಯ ತಂಗಿಯಾದ ಕಮ ಲಾಂಬ ಕೀದೇವಿಯನ್ನು ಕೋಡೂರು ಪಾಳಯಗಾರನಾದ ಮಲ್ಲನಾಯ ಕನಿಗೆ ಕೊಟ್ಟು ಮದುವೆಯಾಗಿತ್ತು, ಕಮಲಾಂಬಕಿಯು ಬಸಿರಾಗಿ ದ್ದಳು. ಮಾನಾಂಬಕಿಯು ತನ್ನ ತಂಗಿಯನ್ನು ಕರೆತಂದು ಅಕ್ಷತೆಪ್ರ ಸ್ವವನ್ನು ವಿಶೇಷ ವೈಭವದಿಂದ ಜರುಗಿಸಬೇಕೆಂದು ಯೋಚಿಸಿದಳು.
ಪುಟ:ಸಮತಿ ಮದನಕುಮಾರರ ಚರಿತ್ರ.djvu/೨೨೦
ಗೋಚರ