ಪುಟ:ಸಮತಿ ಮದನಕುಮಾರರ ಚರಿತ್ರ.djvu/೨೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೭] ಸುಮತಿ ಮದನಕುಮಾರರ ಚರಿತ್ರೆ ೨೦೭ ಪದ್ದ ತೀ ಪ್ರಕಾರ ಸಾಯಂಕಾಲ ಆರತಿ ಅಕ್ಷತೆಯು ಬಿಡದೇ ಏಳು ದಿವಸ ನಡೆಯಿತು. ಆ ಕಾಲದಲ್ಲಿ ರಾಜಸ್ತ್ರೀಯರೇ ಬಹಳವಾಗಿ ಸೇರಿ ಆ ವಿಭವವನ್ನು ನಡೆಯಿಸಿ ಹಾಡನ್ನು ಹೇಳಿ ವಿನೋದವಾಗಿ ಕಾಲವನ್ನು ಕಳೆಯುತಿದ್ದರು. ಆ ಹೆಣ್ಮಣಿಯರ ಸಭೆಯಲ್ಲಿ ಓರೆದುರುಬಿನ ವಯ್ಯಾರಿಯರು, ಸಣ್ಣ ಕುಂಕುಮದ ಬಿನ್ನಾ ಣಿಯರು, ಕೊಂಕು ಕುರು ಳಿನ ಕುಲಕಲಾಟಿಯರು, ಹುಸಿನಗೆಯ ಸೊಗಸುಗಾತಿಯರು, ನುಣ್ಣಲ್ಲ ದವಳು, ಎಸಳು ಮೂಗಿನವಳು, ಕೊಂಕುಗುರುಳಿನವಳು, ಉಂಗುಟ ದಲ್ಲಿ ನೆಲವನ್ನು ಕೆರೆಯದಿದ್ದರೆ ತನ್ನ ಸೊಗಸು ಕಾಣುವದಿಲ್ಲವೆನ್ನು ವಳು, ಹುಬ್ಬನ್ನು ಮೇಲಕ್ಕೆ ಎತ್ತಿ ಸ್ವಲ್ಪ ಗಂಟುಹಾಕಿಕೊಂಡು ಸ್ವಲ್ಪ ಸ್ವಲ್ಪ ನಗುತಿರುವ ಬಿ೦ಕಗಾತಿ, ಎಣೆಗಂಟನ್ನು ಉದ್ದವಾಗಿ ಹಾಕಿಕೊಂಡು ಅದಕ್ಕೆ ಹೂವನ್ನು ದಟ್ಟ ವಾಗಿ ಸುತ್ತಿ ಆ ಗಂಟನ್ನು ಬೆನ್ನಿ ನಮೇಲೆ ಭುಜದಿಂದ ಭುಜಕ್ಕೆ ಉರುಳಿಸಿಯಾಡುತಿರುವ ಒಲಪಿನವಳು, ಓರೆ ನೋಟದ ಕಪಟಿ, ತಲೆಗಿಟ್ಟ ಒಡವೆಯ ಭಾರ ಹಿಂದಕ್ಕೆ ಜಗಿಯಲು ತಲೆಯನ್ನು ಮುಂದಕ್ಕೆ ಬಗ್ಗಿಸಿಕೊಂಡಿರುವ ಹೊಸ ಮದುವಣ ಗಿ, ಕತ್ತಿಗೆ ಇಟ್ಟ ಒಡವೆಯ ಭಾರದಿಂದ ತಿರುಗುವುದಕ್ಕಾಗದೆ ಕೊಂಚವಾಗಿ ದೇಹವನ್ನೆ ತಿರುಗಿಸಿ ನೋಡುತಿರುವ ಡಂಭದವಳು, ನೆವನೆವದಲ್ಲಿ ಸೆರಗನ್ನು ಜಾರಿಸಿ ತುಯಿದುತುಯಿದು ಹೊದೆಯುವ ವಯ್ಯಾರಿ, ಕ್ಷಣಕ್ಷಣಕ್ಕೆ ಮುಖವನ್ನು ಒರಸಿಕೊಳ್ಳುವ ಸೊಗಸುಗಾತಿ, ಕೆಳಗಡೇ ತುಟಿಯನ್ನು ಆಗಾಗ್ಗೆ ಹಿಡಿದು ನೋಡಿಕೊಳ್ಳುವ ಚತುರೆ, ಸಮಯ ಬಂದಾಗ ಗಂಡಸರ ಮುಖವನ್ನು ನೋಡಿ ಬಂದ ಹುಸಿನಗು ವನ್ನು ಮರೆಮಾಚಿಕೊಳ್ಳುವುದಕ್ಕೆ ತುಟ ಎರಡನ್ನೂ ಮುಡಿ ಕಚ್ಚಿಕೊ ಳ್ಳುವ ಚಪಲೆ, ನಿಜವಾದ ಧ್ವನಿಯನ್ನು ಮರೆಸಿಕೊಂಡು ಮಾತನಾಡುವ ಮಾಯಾಂಗನೆ, ಏನೂ ಇಲ್ಲದೆ ಸುಮ್ಮನೆ ಕೂತಿರುವ ಗರತಿ, ಇವರೆ ಲ್ಲರೂ ಸಭೆ ಸೇರಿದ್ದರು, ಪ್ರತಿಯೊಬ್ಬ ಅರಸಿಯ ಹತ್ತಿರದಲ್ಲೂ ಒಬ್ಬಳು ಎಲೆ ಅಡಕೆಯನ್ನು ನೀಡುತ್ತಲೂ, ಒಬ್ಬಳು ಕಾಳಂಜಿಯನ್ನು ಹಿಡಿಯುತ್ತಲೂ, ನಿಂತಿರುತಿದ್ದರು, ಈ ರಾಣಿವಾಸದ ಅರಸಿಯರೆಲ್ಲರೂ ಕೈವಸ್ತ್ರವನ್ನೂ ದೊಡ್ಡದಾದ ಚಿನ್ನದಲ್ಲಿ ಮಾಡಿದ ನೆಸ್ಯದ ಡಬ್ಬಿಗಳನ್ನೂ