ಪುಟ:ಸಮತಿ ಮದನಕುಮಾರರ ಚರಿತ್ರ.djvu/೨೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೭] ಸುಮತಿ ಮದನಕುಮಾರರ ಚರಿತ್ರೆ ೨of ಯನ್ನು ಮರೆತುಬಿಟ್ಟನು. ಯಾವ ಒಡವೆಯೂ ಇಲ್ಲದೆ, ಹೊದ್ದಿದ್ದ ಪಂಚೆ ಹೊರತು ಮತ್ತೆ ಯಾವ ದು ಕೂಲವೂ ಇಲ್ಲದೆ ಇದ್ದ ಸುಮತಿಯು ಆ ಸಭೆಯಲ್ಲಿ ದೂರವಾಗಿಯೇ ಕೂತುಕೊಂಡನು. ಆಗ ಒಬ್ಬ ಅರಸಿಯು-ಈ ಗಂಡು ಯಾವುದೋ ಕಾಣೆ, ದೊಣ್ಣೆ ಯ ಹಾಗೆ ಒರಟು ಒರಟಾಗಿದೆ ; ನಮ್ಮ ಪುಟ್ಟ ಸಾಮಿಗೆ ದೃಷ್ಟಿ ಪರಿಹಾರಾರ್ಥವಾಗಿ ಇದನ್ನು ತಂದು ಕೂರಿಸಿದಾರೆಯೊ ಕಾಣೆ ? ಎನಲು : ಅವಳ ಪಕ್ಕದಲ್ಲಿ ಕೂತಿದ್ದ ಒಬ್ಬ ಸಿಸ್ತುಗಾತಿಯು-ಆ ಗಂಡಿಗೆ ಭೂಷಣವಾಗಿ ಒಂದು ಬಟ್ಟೆ ಗೆ ಕೂಡ ಗತಿ ಇಲ್ಲ ; ಇದರ ಮೇಲೆ ಸುವರ್ಣ ವೈರಿ; ಇದನ್ನು ಏನೆಂದು ಇಲ್ಲಿಗೆ ಕರೆತಂದರೋ ಕಾಣವ್ವ, ಎನಲು: ಈ ಮಾತನ್ನು ಕಿವಿಗೊಟ್ಟು ಕೇಳುತಿದ್ದ ಒಬ್ಬ ದಿಟ್ಟ ಗಾತಿಯು-ಐ ! ತೆಗೆ, ಯಾರೊ ಹಾರವರ ಹೈದ, ದಕ್ಷಿಣೆಗೆ ಬಂದಿದೆಯೋ ಏನೋ, ಏನಾದರೂ ಕೊಟ್ಟು ಕಳುಹಿಸವ್ವ ಎನಲು; ಹತ್ತಿರಿದ್ದ ಮಿಠಾರಿಯೊಬ್ಬಳು-ಈ ಹಾರವರ ಹುಡುಗ ನಮ್ಮ ಮದನನಿಗೆ ಸಂಗಾತಿಯೊ ? ಎನಲು : ಕೊನೆಗೆ ಅಲ್ಲಿದ್ದ ಒಬ್ಬ ಹಳ್ಳಿ ಗಡಾವಣೆ ಗಾತಿಯು-ಏನಾ ? ನಮ್ಮ ದೊರೆಮಕ್ಕಳ ಸಂಗಡ ಆಡಾಕೆ ಈ ಹಾರವರ ಹಕ್ಕಳಾ ? ಅವರ ಹರಟೆ, ಅವರ ಚಾಳಿ ನಮ್ಮ ಹಕ್ಕಳಿಗೂ ಬರಾಕಿಲ್ಲವಾ ? ಎಂದಳು, ಹೀಗೆ ಅಲ್ಲಿದ್ದ ಅರಸಿಯರಲ್ಲಿ ಒಬ್ಬೊಬ್ಬರು ಒಂದೊಂದು ರೀತಿಯಾಗಿ ಸುಮತಿಯನ್ನು ಆಡಿಕೊಂಡರು, ಆಗ ಹಸೇಮೇಲೆ ಪಟ್ಟ ಭದ್ರೆಯಾಗಿ ಅಕ್ಕನ ಹತ್ತಿರ ಕೂತಿದ್ದ ಕಮಲಾಂಬಕಿಯು-ಅಕ್ಕಯ್ಯ, ಅಲ್ಲಿ ಕುಕ್ಕರಬಡದಿರುವ ಹಾರವರಹೈದ ಯಾವಾಗ ನೋಡಿದರೂ ನಮ್ಮ ಪುಟ್ಟ ಸಾಮಿಯ ಸಂಗಡಲೇ ಹಿಂದೆ ಹಿಂದೆಯೇ ಸುತ್ತು ತಾನೆ. ಈ ಪಂಜೆ ಹೈಕಳ ಗೆಳೆತನ ನಮ್ಮ ಮಕ್ಕ ಳಿಗೆ ಒಳ್ಳೇದೆ ? ಆ ಹುಡುಗರ ಸಂಗಡ ನಮ್ಮ ಹುಡುಗರು ಆಡುತಿದ್ದರೆ ನಮಗೆತಾನೆ ಮಾನವೆ ? ಎಂದಳು, ಮಾನಾಂಬಕಿ-ಆ ಹುಡುಗ ಬಹು ಬುದ್ದಿ ಶಾಲಿಯಂತೆ, ವಿದ್ಯೆ ಚೆನ್ನಾಗಿ ಬರುವುದಂತೆ, ಅವನು ರಾಜಸನ್ನಿಧಾನದಲ್ಲಿ ಬಹು ಅಚ್ಚು ಮೆಚ್ಚು, ಅಂಥಾ ಹುಡುಗರ ಜೊತೆಯಲ್ಲಿ ನಮ್ಮ ಪುಟ್ಟು ಸಾಮಿಯು