ವಿಷಯಕ್ಕೆ ಹೋಗು

ಪುಟ:ಸಮತಿ ಮದನಕುಮಾರರ ಚರಿತ್ರ.djvu/೨೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ܘܘܘ ಸುಮತಿ ಮದನಕುಮಾರರ ಚರಿತ್ರೆ [ಅಧ್ಯಾಯ ಇದ್ದರೆ ಅವನಿಗೂ ಚೆನ್ನಾಗಿ ಬುದ್ಧಿ ಬರುವುದು ಎಂದು, ಮಗುವನ್ನು ಅವನ ಜೊತೆಗೆ ಹಾಕಿದಾರೆ. ಕಮಲಾಂಬಕಿ- ಹೇಳಿಕೊಡುವ ಉಪಾಧ್ಯಾಯ ಜಾಣನಾದರೆ ಸರಿ, ಕಾಡಹುಡುಗರನ್ನು ದೊರೆಯಮಕ್ಕಳಸಂಗಡ ಸೇರಿಸಬೇಕೆ ? ಮಾನಾಂ-ಇನ್ನು ರಾಮಜೋಯಿಸನಿಗಿಂತ ಗಟ್ಟಿ ಗರು ಈ ಪ್ರಾಂತ್ಯದಲ್ಲಿ ಯಾರೂ ಇಲ್ಲ, ಹುಡುಗರಿಗೆ ವಿದ್ಯಾ ಕಲಿಸುವುದರಲ್ಲಿ ಅವನು ನಿಸ್ಸಿಮನಂತೆ, ಅವನೂ ಸಹಿತ, ಮದನನಿಗೆ ಸಹವಾಸ. ಸರಿಯಾಗಿರಬೇಕು, ಈ ಸುಮತಿ ಎಂಬ ಹುಡುಗನನ್ನು ಅವನ ಜೊತೆಗೆ ಹಾಕಿದರೆ ತಾನು ಪಾಠವನ್ನು ಹೇಳುತೇನೆ; ಇಲ್ಲದಿದ್ದರೆ, ಒಲ್ಲೆ ಎಂದು ಹೇಳಿದ. ಅದಕ್ಕೆ ನಿಮ್ಮ ಭಾವಾಜಿಯವರು ಒಪ್ಪಿದರು. ಕಮಲಾಂ-ಸುಮತಿಯೊ ಗಿಮತಿಯೊ, ನಾನು ಕೇಳಲಾರೆ; ನಾಯಿಯ ಹೆಸರು ಸಂಪಿಗೆ ಎಂದ ಹಾಗಿದೆ. ರಾಮಜೋಯಿಸ ಪಾಠ ಹೇಳುವುದಿಲ್ಲ ಅಂದರೆ, ಅವರ ಅ ಪ್ಪ ಇನ್ನೊಬ್ಬ ಬರುತಾನೆ. ಆ ಹಾರವರ ಹೈದನನ್ನು ನಮ್ಮ ಮಗುವಿನ ಜೊತೆಗೆ ಹಾಕಬೇಡವೆಂದರೆ ಆಯಿತು, ಹೇಳಿದಮಾತ ಅವ ಕೇಳ ಬೇಕು. ಮಾನಾಂ- ನಾವು ಹಾಗೆಲ್ಲಾ ಹೇಳಿದರೆ ಕೇಳತಕ್ಕ ಬ್ರಾಹ್ಮಣ ನಲ್ಲ, ರಾಮಜೋಯಿಸ; ನಾವು ಆತನಿಗೆ ಒಂದು ಕಾಸನ್ನೂ ಕೊಡು ವುದಿಲ್ಲ. ನಮ್ಮಿಂದ ಆತನಿಗೆ ಯಾವ ಉಪಕಾರವೂ ಇಲ್ಲ. ಹೀಗಿರು ವಲ್ಲಿ ನಮ್ಮ ಮಾತನ್ನು ಆತ ಕೇಳಲಾರ. ಕಮಲಾಂ- ಇದೂ ಅಲ್ಲದೆ, ಅಕ್ಕಯ್ಯ, ಕಾಕು ಎಂದು ಎರಡು ಅಕ್ಷರ ಬರೆದರೆ ಉಪಯೋಗವೇನು ? ದೊರೆಮಕ್ಕಳು ಬಿಳಿ ಕಾಗದದ ಮೇಲೆ ಕರೀಕ ಪ್ಪನ್ನು ಹತ್ತಿಸಿ ಹಾರವರಹಾಗೆ ಹೊಟ್ಟೆ ಹೊರೆಯ ಬೇಕೊ ? ಸಾಮು ಮಾಡುವುದು, ಕುಸ್ತಿ ಮಾಡುವುದು, ಪಟಾ ತಿರುಗಿಸು ವುದು, ಅ೦ಬು ಬಿಲ್ಲು ಹೊಡೆಯುವುದು, ಜನರಿಗೆಲ್ಲಾ ಭಯವನ್ನು ಹುಟ್ಟಿಸಿ, ರಾಜ್ಯವನ್ನು ಜೈಸಿ ದೊರೆತನಮಾಡುವುದು, ಪಗಡೆ ಚದು ರಂಗ ಮೊದಲಾದ ಆಟಗಳನ್ನಾಡುವುದು, ಅಷ್ಟರಮಟ್ಟಿಗೆ ನಮ್ಮ ಮಕ್ಕ ಳಿಗೆ ಬಂದರೆ ಸಾಕು.