ಪುಟ:ಸಮತಿ ಮದನಕುಮಾರರ ಚರಿತ್ರ.djvu/೨೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೧೨ ಸುಮತಿ ಮದನಕುಮಾರರ ಚರಿತ್ರೆ [ಅಧ್ಯಾಯ ಗುಣವಾಗಿ ಮಗಳನ್ನು ಸಾಕಿದನು. ಇಂಥಾ ಗುಣಸಂಪತ್ತನ್ನು ಉಳ್ಳ ಲಲಿತೆಯು ಸುಮತಿ ಕೂತಿದ್ದ ಬಳಿಗೆ ಹೋಗಿ ಅವನನ್ನು ಆದರಿಸಿ ಅಲ್ಲಿದ್ದ ಕೆಲವು ಹಣ್ಣು ಗಳನ್ನು ತೆಗೆದು ಅವನಿಗೆ ಕೊಡುವುದಕ್ಕೆ ಹೋದಳು. ಆಗ ಸುಮತಿಯು-ತಾಯಿ, ತಮಗೆ ಕೃತಜ್ಞನಾಗಿದೇನೆ ; ಹಣ್ಣನ್ನಾಗಲಿ ಯಾವ ಪದಾರ್ಥವನ್ನಾಗಲಿ ಯಾರು ಕೊಟ್ಟ ರೂ ಸುಮ್ಮನೆ ತೆಗೆದುಕೊಳ್ಳಬಾರದೆಂದು ನಮ್ಮ ಗುರುಗಳ ಅಪ್ಪಣೆಯಾಗಿದೆ, ಎಂದನು. ಗೋಪಾಳದ ಬ್ರಾಹ್ಮಣರು, ಸಂಜೆಹಾರವರು, ಎಂದು ಹೇಳಿ ದವರ ಮುಖವೆಲ್ಲಾ ಸುಮತಿಯ ಗಾಂಭೀರವನ್ನು ಕಂಡು ಚಿಕ್ಕದಾ ದವು. ಈ ಮಧ್ಯೆ ಮದನನು ಸುಮತಿಯನ್ನು ಮರೆತು ಬಿಟ್ಟನು. ಈ ಹೆಂಗಸರ ಹೆಬ್ಬು ಬ್ಸಿನ ಮಾತಿನಿಂದ, ತಾನು ಎಷ್ಟೋ ಬುದ್ಧಿಶಾಲಿ ಯೆಂದು ತಿಳಿದುಕೊಂಡನು. ೧೮ ನೆ ಅಧ್ಯಾಯ ಈ ಪ್ರಕಾರ ಮದನನ ಬುದ್ದಿ ಯೆಲ್ಲಾ ಬದಲಾಯಿಸಿತು. ಇವನ ಚಿಕ್ಕಮ್ಮ ಕಮಲಾಂಬಿಕೆಯ ಮಗನಾದ ವಾನರರಾಜನೂ, ಮತ್ತು ಇವನ ಸೋದರಮಾವನ ಮಗನಾದ ತಮ್ಮನಾಯಕನೂ, ಓರಗೇ ಹುಡುಗರಾಗಿದ್ದರು, ಇವರು ಮದನನ ಸಂಗಡ ಸೇರಿ ಆಡುವುದಕ್ಕೆ ಆರಂಭಿಸಿದರು. ಈ ಹುಡುಗರಿಬ್ಬರೂ ಮನಸ್ಸು ಬಂದಕಡೆಗೆ ಮದನ ನನ್ನು ಕರೆದುಕೊಂಡು ಹೋಗುವುದು, ಸಿಕ್ಕಿದವರ ಮೇಲೆ ಕಲ್ಲೆ ಸೆಯು ವುದು, ಸಿಕ್ಕಿದ ಮರವನ್ನು ಹತ್ತುವುದು, ಅ೦ಗಡಿಗಳಿಗೆ ಹೋಗಿ ಕೈಗೆ ಸಿಕ್ಕಿದ್ದನ್ನು ಎಳೆದುಕೊಂಡು ಬರುವುದು, ಬಡ ಹುಡುಗರು ಸಿಕ್ಕಿದರೆ ಅವರನ್ನು ಹಿಡಿದು ಹೊಡೆದು ಅವರು ಗೋಳಾಡುವ ವಿನೋದವನ್ನು ನೋಡುವುದು, ಕಂಡವರನ್ನು ಬೈದು ಅವರಮೇಲೆ ಉಗುಳುವುದು, ಇವೇ ಮೊದಲಾದ ಅನೇಕ ತುಂಟತನಗಳನ್ನು ಮಾಡುತ್ತಾ ಹೊರಟರು. ಒಂದೆರಡು ಸಾರಿ ಈ ಸಂಗಾತಿಗಳಿಬ್ಬರೂ ಮದನನನ್ನು ಜೂಜಾಡುವು ದಕ್ಕೆ ಎಳೆದುಕೊಂಡು ಹೋದರು. ಜೂಜುಗಾರರು ಇವರುಗಳಲ್ಲಿದ್ದ