ಪುಟ:ಸಮತಿ ಮದನಕುಮಾರರ ಚರಿತ್ರ.djvu/೨೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

[ܣܘ ಸುಮತಿ ಮದನಕುಮಾರರ ಚರಿತ್ರೆ ೨೧೩ ದುಡ್ಡನ್ನೂ ಮೈಮೇಲಿದ್ದ ಕೆಲವು ಒಡವೆಗಳನ್ನೂ ಜೂಜಾಡಿ ಕಸಿದು ಕೊಂಡು ಆಚೆಗೆ ಕಳುಹಿಸಿದರು., ಸುಮತಿಯು ಇವರ ಸಂಗಡಲೇ ಇರುತಾ ಮದನ ಕೆಟ್ಟ ಕೆಲಸಕ್ಕೆ ಹೋದಾಗೆಲ್ಲಾ ಅದು ಸರಿಯಲ್ಲವೆಂದು ಎಚ್ಚರವನ್ನು ಹೇಳುತ್ತಲೇ ಇದ್ದನು, ಆದರೆ ಮಂಗರಾಜ, ತಿಮ್ಮ ನಾಯಕ, ಇವರಿಬ್ಬರ ದುರ್ಬೋಧೆಯು ಬಲವಾಗಿದ್ದ ಕಾರಣ, ಸುಮತಿ ಹೇಳಿದ ಬುದ್ದಿವಾದ ಯಾವುದೂ ಪ್ರಯೋಜನಕ್ಕೆ ಬರಲಿಲ್ಲ. ಬರುತ ಬರುತಾ ಮದನನಿಗೆ ಸುಮತಿಯ ಕಂಡರೆ ಆಗದಹಾಗಾಯಿತು, ಇದೂ ಅಲ್ಲದೆ ರಾಮಜೋಯಿಸನ ಹೆಸರನ್ನು ಯಾವಾಗ ತೆಗೆದಾಗ್ಯೂ, ಮದ ನನು ಈ ತುಂಟ ಹುಡುಗರ ಸಂಗಡ ಸೇರಿಕೊಂಡು ಸ್ವಲ್ಪ ಅಸಡ್ಡೆಯಾಗಿ ಮಾತನಾಡುವುದು ಹೆಚ್ಚು ತಾ ಬಂತು, ಇವರಿಬ್ಬರೂ ಸೇರಿ ಮದನನ ಬುದ್ದಿ ಯನ್ನು ಕೆಡಿಸಿ ತಂದಿಟ್ಟ ಕೆಟ್ಟತನವನ್ನು ಕಂಡು ಸುಮತಿಯು ಅದು ಸರಿಯಲ್ಲವೆಂದು ಹೇಳಿದಾಗಲೆಲ್ಲಾ ಸುಮ್ಮನಿರೊ, ಹಾರವ, ನೀನೇನು ಬಲ್ಲೆ ? ಎಂದು ಅವನನ್ನು ಬಯ್ಯುತಿದ್ದುದಲ್ಲದೆ ಒಂದೆರಡು ಸಾರಿ ಮಂಗರಾಜನು ಅವನನ್ನು ಹಿಡಿದು ಹೊಡೆದನು, ಆದರೆ ಸುಮ ತಿಗೆ ಮದನನಮೇಲಿದ್ದ ಪ್ರೀತಿಯು ಇಂಥಾ ಪೆಟ್ಟಿ ನಿಂದ ಉಂಟಾದ ಕೋಪಕ್ಕಿಂತಲೂ ಮಿಂಚಿ ಇತ್ತು. ಹೀಗಿರಲಾಗಿ ಆ ಊರಲ್ಲಿ ಭಾಗವತರ ಆಟದವರು ಹೊಸದಾಗಿ ಬಂದು ಒಂದು ದಿನ ಆಟವನ್ನು ಕಟ್ಟಿದರು. ಅದನ್ನು ನೋಡುವುದಕ್ಕೆ ಹೋಗೋಣವೆಂದು ಮಂಗರಾಜನೂ ತಿಮ್ಮನಾಯಕನೂ ಮದನನನ್ನು ಎಳೆದರು. ಸುಮತಿಯೂ ಮದನನ ಬೆನ್ನ ಹತ್ತಿ ಹೋದನು. ಆಟ ಕಟ್ಟ ತು, ಆಗ ಮದನನ ತುಂಟ ಸಂಗಾತಿಗಳಿಬ್ಬರೂ ಮನಸುಬಂದ ಹಾಗೆ ಕೂಗುವುದೂ, ಗಟ್ಟಿ ಯಾಗಿ ನಗುವುದೂ, ಹೀಗೆಲ್ಲಾ ಗದ್ದಲವನ್ನು ಮಾಡಿದ್ದರಿಂದ ಆಟಗಾರರು ಹಾಡುವ ಹಾಡನ್ನು ಯಾರೂ ಚೆನ್ನಾಗಿ ಕೇಳದಂತೆ ಆಯಿತು. ಮದನನೂ ಇವರ ಜೊತೆಗೆ ಸೇರಿಕೊಂಡು ಕೂಗುಮಾಡುತಿದ್ದನು. ಇವರು ಅರಸುಮಕ್ಕಳಾದ್ದರಿಂದ, ಇವರನ್ನು ಸ್ವಲ್ಪ ಮಾತನಾಡಿಸಿದರೂ ಏನುಬ೦ದೀತೋ ಎಂದು ಸುಮ್ಮನಿರುತ್ತಾ, ಇವರು ಮಾಡುತಿದ್ದ ಗದ್ದಲಕ್ಕೆ ಮನಸ್ಸಿನಲ್ಲಿಯೇ ಇವರನ್ನು ಬೈಯುತಾ