ವಿಷಯಕ್ಕೆ ಹೋಗು

ಪುಟ:ಸಮತಿ ಮದನಕುಮಾರರ ಚರಿತ್ರ.djvu/೨೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೧೪ ಸುಮತಿ ಮದನಕುಮಾರರ ಚರಿತ್ರೆ [ಅಧ್ಯಾಯ ಇದ್ದರು. ಸುಮತಿಗೆ ಈ ಹುಡುಗರ ನಡತೆ ಬಹಳ ಅಸಮಾಧಾನ ವನ್ನು ಉಂಟುಮಾಡಿತು, ಆದರೂ ಅವನು ಎಲ್ಲವನ್ನೂ ತಾಳಿ ಕೊಂಡು ಮುಖವನ್ನು ಗಂಟುಹಾಕಿಕೊಂಡು ಮಾತನಾಡದೆ ದೂರವಾಗಿ ಕೂತಿದ್ದನು. ಈ ಮಧ್ಯೆ ಮಂಗರಾಜನು ಮದನನನ್ನು ಕುರಿತು- ಪುಟ್ಟ ಸಾಮಿ, ನಾವು ಈಗ ಒ೦ದು ದೊಂಬಿಮಾಡಿ ಆಟವನ್ನು ಕೆಡಿಸೋಣ, ಎಂದನು. ಈ ಮಾತಿನ ಅರ್ಥವು ಮದನನಿಗೆ ಗೊತ್ತಾಗಲಿಲ್ಲ. ಆದರೂ ಈ ಇಬ್ಬರು ಹೊಸಸ್ನೇಹಿತರ ಸ್ವಭಾವವು ಇವನ ಮನಸ್ಸಿನಲ್ಲಿ ಚೆನ್ನಾಗಿ ನಾಟಿದ್ದ ಕಾರಣ, ಮದನನು ಅವರ ಮಾತಿಗೆ ಒಪ್ಪಿ ಹಾಗೇ। ಮಾಡೋಣವೆಂದನು. ಕೂಡಲೆ ಈ ಮೂರುಜನವೂ ಸೇರಿ ಕಿತ್ತಿಳೆ ಹಣ್ಣಿನಸಿಪ್ಪೆ, ಬಾಳೇಹಣ್ಣಿನಸಿಪ್ಪೆ, ಜಲ್ಲಿಕಲ್ಲು, ಮರಳು ಹೆಂಚಿಬಕ್ಕರೆ ಇವುಗಳನ್ನು ಕುಣಿಯುತ್ತಾ ಇದ್ದ ಆಟಗಾರರ ಮೇಲೆ ಎಸೆಯುತ್ತಾ, ಗಟ್ಟಿಯಾಗಿ ಕೂಗಿಕೊಳ್ಳುತ್ತಾ, ದೀಪಗಳನ್ನು ಆರಿಸುತ್ತಾ ಬಹಳ ಆಭಾಸವನ್ನು ಮಾಡಿದರು. ಇವರು ದೊರೆಮಕ್ಕಳೆಂದು ಯಾರೂ ಯಾವಮಾತನ್ನೂ ಆಡದೆ ಸುಮ್ಮನೆ ಬಾಯಿಮುಚ್ಚಿ ಕೊಂಡಿದ್ದರು. ಆದರೆ ಈ ಕೆಟ್ಟ ತನವನ್ನು ಕಂಡು ಸುಮತಿಯು ಸಹಿಸಲಾರದೆ ಅವರನ್ನು ಕುರಿತು-ಅಯ್ಯಾ, ಇದು ಸರಿಯಲ್ಲ, ಎಂದನು. ಮಂಗರಾಜ- ನೀನೇನು ಬಲ್ಲೆ ಯೋ, ಸುಮ್ಮನೆ ಕೂತಿರು, ಅವರ ಆಟಕ್ಕೆ ತಕ್ಕ ಹಾಗೆ ನಾವು ಚೇಷ್ಟೆ ಯನ್ನು ಮಾಡುತ್ತೇವೆ, ಚೆನ್ನಾಗಿ ಆಟವನ್ನು ಕಟ್ಟದೆ, ಯಾಕೆ ಇಂಥಾ ಗತಿಗೆಟ್ಟ ಆಟವನ್ನು ಇಲ್ಲಿ ಬಂದು ಆಡಬೇಕು ? ಸುಮತಿ-ನಾನು ಇಂಥಾ ಆಟಗಳನ್ನು ಎಂದಿಗೂ ನೋಡಿರಲಿಲ್ಲ. ಇದೇ ಮೊದಲು. ಆದಕಾರಣ ಇದರ ವಿಷಯದಲ್ಲಿ ನಾನು ಏನೂ ಹೇಳಲಾರೆ. ಆದರೆ ಆಟ ಚೆನ್ನಾಗಿಲ್ಲದಿದ್ದರೆ ಸುಮ್ಮನೆ ಕೂತುಕೊಂಡು ಇರಬೇಕು, ಅಥವಾ ಎದ್ದು ಮನೆಗೆ ಹೊರಟುಹೋಗಬೇಕು. ಇದನ್ನು ಬಿಟ್ಟು ಇಂಥಾ ತುಂಟತನವನ್ನು ನಾವು ಮಾಡವುದು ಯೋಗ್ಯವಲ್ಲ. ಇಂಥಾ ದೊಡ್ಡ ಪಟ್ಟಣದಲ್ಲಿ ಆಟವನ್ನು ಕಟ್ಟಲು ಬಂದಿರತಕ್ಕವರು