ಪುಟ:ಸಮತಿ ಮದನಕುಮಾರರ ಚರಿತ್ರ.djvu/೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೦ ಸುಮತಿ ಮದನ ಕುಮಾರರ ಚರಿತ್ರೆ [ಅಧ್ಯಾಯ. “ ಇಗೊ ಈ ಅಗ್ರಹಾರದಲ್ಲಿರುವ ಸೂರ ಭಟ್ಟರು, ತಾಯಿ ” “ ಅಪ್ಪ, ಇನ್ನು ಮೇಲೆ ನೀನೂ ನನ್ನ ಮಗುವಿನ ಹಾಗೇ ; ನನ್ನ ಮಗುವಿನ ಹಾಗೇ ನಮ್ಮಲ್ಲಿ ಇರುತೀಯಾ, ಏನಪ್ಪಾ ?” - “ ತಾಯಿ, ತಮ್ಮ ದಯ ಬಂದರೆ ಹಾಗೇ ಆಗಬಹುದು ; ಆದರೆ: ನಮ್ಮ ತಂದೆ, ನಮ್ಮ ತಾಯಿ ಸಹ ಹಾಗೆ ಇರುವುದಾದರೆ, ಆಗಬಹುದು.” ಅರಸಿಯು ಆ ಕ್ಷಣದಲ್ಲಿಯೇ ಆ ಬ್ರಾಹ್ಮಣನ ಮನೆಗೆ ಒಬ್ಬ ಆಳನ್ನು ಓಡಿಸಿ, ಸುಮತಿಯ ಕೈ ಹಿಡಿದು ತನ್ನ ಅರಮನೆಯೊಳಕ್ಕೆ ಕರೆದುಕೊಂಡು ಹೋದಳು ; ಅಲ್ಲಿ ಅನಂಗರಾಜನನ್ನು ಕಂಡು ತನ್ನ ಪುಟ್ಟು ಸಾವಿಗೆ ಬಂದಿದ್ದ ವಿಪತ್ತನ್ನೂ ಸುಮತಿಯ ಧೈರವನ್ನೂ ಸವಿ ಸ್ವಾರವಾಗಿ ಹೇಳಿದಳು. ತಂದೆಗೂ ಬಹು ಸಂತೋಷವಾಯಿತು. ಅರಸುಮಗನಿಗೆ ಬಂದಿದ್ದ ಗಂಡ ತಪ್ಪಿತಲ್ಲಾ ಎಂದು ಮನೆಯವರೆಲ್ಲಾ ಸಂತೋಷದಿಂದ ಬಹು ಸಡಗರ ಪಡುತಿದ್ದರು, ಮಗುವಿನ ಪೀಡಾಪರಿಹಾರಾರ್ಥವಾಗಿ ಮೃತ್ಯುಂಜಯ ಜಪವೂ ಹವನವೂ ತಕ್ಕ ದಾನಧಮ್ಮಗಳೂ ಬ್ರಾಹ್ಮಣ ಸಂತರ್ಪಣೆಯೂ ನಡೆದವು. ಆ ಕಾಲದಲ್ಲಿ ಮಗುವಿಗೆ ಅಲಂಕಾರ ಮಾಡಿ ಬೇಕಾದ ಒಡವೆಯನ್ನು ಇಟ್ಟು ದಿವ್ಯವಾದ ವಸ್ತ್ರವನ್ನು ಹೊದಿಸಿ ಶೃಂಗರಿಸಿದರು. ಸುಮತಿಯನ್ನೂ ಉಪಚರಿಸಿ, ನೋಡು ವುದಕ್ಕೆ ಮನೋಹರವಾದ ಪದಾರ್ಥಗಳನ್ನೆಲ್ಲಾ ಅವನ ಮುಂದೆ ತಂದಿಟ್ಟರು. ಸುನೇರಿ ಕೆಲಸದ ಚೌಕಟ್ಟಿ ಹಾಕಿರುವ ನಿಲುಗನ್ನಡಿ ಗಳೂ, ಚಿತ್ರ ವಿಚಿತ್ರವಾದ ತಸ್ಬೀರುಗಳೂ, ನಾಜೂಕಾದ ಕಂದೀಲು ಗಳೂ, ಗಾಜಿನ ಸಾಮಾನುಗಳೂ, ರತ್ನ ಗಳನ್ನು ಕೆತ್ತಿದ ಚಿನ್ನ ಬೆಳ್ಳಿ ಪಾತ್ರೆಗಳೂ, ತಟ್ಟೆ ಗಳೂ ಇವೇ ಮುಂತಾಗಿ ನೋಡುವುದಕ್ಕೆ ಆಹ್ಲಾದಕರವಾದ ಪದಾರ್ಥಗಳೆಲ್ಲಾ ಈ ಬಡ ಬ್ರಾಹ್ಮಣರ ಗಂಡಿನ ಮುಂದೆ ಸಾಲುಸಾಲಾಗಿ ಓರಣಗೊಂಡವು. ಆ ದಿನ ರಾಣಿಯು ತನ್ನ ಸಮಿಾಪದಲ್ಲಿಯೇ ತನ್ನ ಮುದ್ದಿನ ಕಂದನನ್ನು ಊಟಕ್ಕೆ ಕೂರಿಸಿ ಕೊಂಡು ಮನೆಯಲ್ಲಿ ಮಾಡಿದ್ದ ರುಚಿಕರವಾದ ಅನೇಕ ಪದಾರ್ಥ ಗಳನ್ನು ಚಿನ್ನದ ತಟ್ಟೆ ಬಟ್ಟಲುಗಳಲ್ಲಿಟ್ಟು ಬೇಕಾದಹಾಗೆ ತಾನೇ ತೆಗೆದು