ಪುಟ:ಸಮತಿ ಮದನಕುಮಾರರ ಚರಿತ್ರ.djvu/೨೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೮] ಸುಮತಿ ಮದನಕುಮಾರರ ಚರಿತ್ರೆ | ೨೧8 ತಮ್ಮ ಯೋಗ್ಯತೆಯನ್ನೆಲ್ಲಾ ಪ್ರಾಮಾಣಿಕವಾಗಿ ತೋರಿಸಿಯಾರು, ಇನ್ನೂ ಚೆನ್ನಾಗಿ ಆಡುವುದಕ್ಕೆ ಅವರಿಗೆ ಬಂದಿದ್ದರೆ ಆಡದೆ ಬಿಡುತಿರ ಲಿಲ್ಲ, ಅವರಿಗೆ ಬಾರದ ಆಟವನ್ನು ಆಡಲಿಲ್ಲವೆಂದು ಆ ಬಡಜನರನ್ನು ಹೀಗೆ ಅಗಡುಮಾಡುವುದು ಯುಕ್ತವಲ್ಲ. ನಿಮ್ಮ ಮನೆಗೆ ಔತಣದ ಊಟಕ್ಕೆ ಬಂದ ಜನರು ಅಡಿಗೆ ಚೆನ್ನಾಗಿಲ್ಲವೆಂದು ನಿಮ್ಮ ಮನೆಯವ ರನ್ನು ಹಿಡಿದು ಬೈದು ಹೊಡೆಯುವುದಕ್ಕೆ ಹೇಗೆ ಬಾಧ್ಯರಲ್ಲವೋ, ಹಾಗೆಯೇ ನೀವು ಈ ಆಟಗಾರರಿಗೆ ಅವಮಾನಮಾಡಲು ಬಾಧ್ಯರಲ್ಲ. ಈ ಪ್ರಕಾರ ಈ ಹುಡುಗರಲ್ಲಿ ಚರ್ಚೆಹುಟ್ಟಿತು. ಮಂಗರಾಜನು ಸುಮತಿಯ ಮಾತನ್ನು ಕೇಳಿ ಅವನನ್ನು ಮನಸ್ಸು ಬಂದಹಾಗೆ ಬೈದನು. ಅವರ ಸವಿಾಪದಲ್ಲಿದ್ದ ಒಬ್ಬ ವಿದೇಶಿಯು ಇವರು ಇಂಥವರೆಂದು ತಿಳಿ ಯದೆ ಸುಮತಿ ಹೇಳಿದ ಬುದ್ದಿ ವಾದ ಸರಿಯಾದ್ದೆಂದು ಹೇಳಿದನು. ಇಷ್ಟಕ್ಕೇ ಮಂಗರಾಜನಿಗೆ ಆಗ್ರಹಬಂತು, ಅವನಿಗೂ ಮಗನಿಗೂ ಜಗಳಹತ್ತಲು, ತಾನು ದೊರೆಮಗನೆಂಬ ಅಹಂಕಾರದಿಂದ ಮಂಗನು ಆ ವಿದೇಶಿಯ ಕೆನ್ನೆ ಯಮೇಲೆ ಒ೦ದೇಟನ್ನು ಹೊಡೆದನು. ಕೂಡಲೆ ಆ ವಿದೇಶಿಯು ಮುಖನೋಡದೆ ಮಂಗನಿಗೆ ದಿಂದಿರಗನ ಹಣ್ಣನ್ನು ಕೊಡಲು, ಈ ರಾಜಪುತ್ರನು ಬಾಯನ್ನು ಹೆಚ್ಚು ಮಾಡಿದನು. ಅದನ್ನು ಸಹಿಸಲಾರದೆ ಈ ಹುಡುಗನಿಗೆ ತಕ್ಕದ್ದನ್ನು ಮಾಡಬೇಕೆಂದು ಆ ವಿದೇಶದವನು ಮಂಗನನ್ನು ಎತ್ತಿ ತನ್ನ ಕಾಲಕೆಳಗೆ ಹಾಕಿಕೊಂಡು ಅವನನ್ನು ತುಳಿಯುವುದಕ್ಕೆ ಮೊದಲುಮಾಡಿದನು. ಮಂಗರಾಜನಿಗೆ ಯಾತನೆ ಬಲವಾಯಿತು. ಏನುಮಾಡಿದರೂ ಎಷ್ಟು ಅರಚಿಕೊಂಡರೂ ಆ ಎದುರಾಳಿಯು ಬಿಡದೆ ತುಳಿಯುತ್ತಾ ಬಂದನು, ತಿಮ್ಮನಾಯ ಕನೂ ಮದನನೂ ತಮ್ಮ ಸಂಗಾತಿಯನ್ನು ಬಿಡಬೇಕೆಂದು ಎಷ್ಟು ಹೇಳಿದಾಗ್ಯೂ-ಆದ್ದೆಲ್ಲಾ ಆಗಲಿ, ನಾನು ಈ ತುಂಟ ಹುಡುಗನಿಗೆ ಬುದ್ದಿಯನ್ನು ಕಲಿಸಿಯೇಬಿಡುತೇನೆ, ಎಂದನೇ ಹೊರತು, ಆ ಮನು ಹೈನು ಅವನನ್ನು ಬಿಡಲಿಲ್ಲ. ಕೊನೆಗೆ ಸುಮತಿಯು ಕನಿಕರದಿಂದಅಯ್ಯಾ, ಈಗ್ಗೆ ಬಿಟ್ಟು ಬಿಡು; ಈಗ ಆದ ಶಿಕ್ಷೆ ಸಾಕು, ಎಂದು ಕೇಳಿ -ಕೊಳ್ಳಲು, ಆ ಪುರುಷನು ನಿನ್ನ ಒಡವೆಯನ್ನೂ ಶೃಂಗಾರವನ್ನೂ ನೋಡಿ