ಪುಟ:ಸಮತಿ ಮದನಕುಮಾರರ ಚರಿತ್ರ.djvu/೨೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೨೬ ಸುಮತಿ ಮದನಕುಮಾರರ ಚರಿತ್ರೆ [ಅಧ್ಯಾಯ. ಬಿಡುವುದಿಲ್ಲ, ಬುದ್ಧಿಶಾಲಿಯಾದ ಆ ಹುಡುಗ (ಸುಮತಿ) ಕೇಳಿ ಕೊಂಡದ್ದರಿಂದ ಬಿಟ್ಟಿ ದೇನೆ; ಇನ್ನು ತುಂಟಾಟವನ್ನು ಬಿಟ್ಟು ಬುದ್ದಿ ಯನ್ನು ಕಲಿತುಕೊ, ಅರಸುಮಕ್ಕಳು ಇಷ್ಟು ಅವಿವೇಕದಿಂದ ನಡೆದು ಕೊಳ್ಳುತಾರೆಂದು ನಾನು ಯೋಚಿಸಿರಲಿಲ್ಲ ಎಂದು ಹೇಳಿ ಆ ಮಂಗ ನನ್ನು ಬಿಟ್ಟು ಕಳುಹಿಸಿದನು ಆಗ ಮಂಗರಾಜನು ಮನೆಯಹತ್ತಿರ ಬರುತಬರುತಾ, ಅವನಿಗೆ ಧೈರ್ಯಹೆಚ್ಚು ತಾಬಂತು. ಮಂಗನು ತನ್ನ ಜೊತೆಗಾರರನ್ನು ಕುರಿತು -ನಾಯಿ ಹೊಡೆಯುವದಕ್ಕೆ ಬಣ್ಣದ ಕೋಲೆ ? ಆ ಅಲ್ಪನಸಂಗಡ ನನಗೇನು ಎಂದು ನಾನು ಸುಮ್ಮನಿದ್ದೆ; ಇಲ್ಲದಿದ್ದರೆ ಅವನ ಆಟವನ್ನು ತಿಳಿಸುತಿದ್ದೆ, ಹೀಗೆಂದು ಹೇಳಿದನು. ಇವರೆಲ್ಲಾ ಮನೆಗೆ ಬಂದಮೇಲೆ ಹುಡುಗರಸಂಗಡ ಮಾತನಾಡುತಾ ಅನಂಗರಾಜನು ಸುಮತಿಯನ್ನು ಕುರಿತು-ಅಯ್ಯಾ, ಮಗು, ನೀನು ಆಟವನ್ನು ನೋಡಿಕೊಂಡು ಬಂದೆ ಯಲ್ಲ; ಅದು ಹೇಗಿತ್ತು ? ಎಂದನು. ಅದಕ್ಕೆ ಸುಮತಿಯು-ಬುದ್ದಿ, ಇಂಥಾ ಆಟಗಳನ್ನು ನಾನು ನೋಡುವುದಕ್ಕೆ ಇದೇ ಮೊದಲು, ಆದ್ದ ರಿಂದ ಆಡಿದ್ದು ಹೀಗಿತ್ತು ಎಂದು ಹೇಳುವುದಕ್ಕೆ ನನ್ನ ಕೈಲಾಗದು. ಆದರೆ ಆ ಆಟದಲ್ಲಿ ಉದ್ದ ಕ್ಯೂ ಮೋಸ, ಕಳ್ಳತನ, ಕಾಪಟ್ಯ, ಸುಳ್ಳು, ಇದೇ ತುಂಬಿತ್ತು, ಇಂಥಾದ್ದನ್ನು ನೋಡುವುದಕ್ಕೆ ದೊಡ್ಡವರೆಲ್ಲಾ ಹೋಗಿ ತಮ್ಮ ಕಾಲವನ್ನು ವ್ಯರ್ಥವಾಗಿ ಕಳೆಯುವದಲ್ಲದೆ, ಅದನ್ನು ನೋಡುವುದಕ್ಕೆ ತಮ್ಮ ಮಕ್ಕಳುಗಳನ್ನೂ ಕಳುಹಿಸಿ, ಆ ಹುಡುಗರೂ ಕೆಟ್ಟತನವನ್ನು ಕಲಿತುಕೊಳ್ಳುವ ಹಾಗೆ ಮಾಡುತ್ತಾರಲ್ಲಾ ಎಂದು ನನಗೆ. ಆಶ್ಚರವಾಗಿದೆ, ಎಂದು ನುಡಿದನು, ಸುಮತಿಯು ಆಡಿದಮಾತು ನಿಶ್ಚಯವೆಂದು ಅನಂಗರಾಜನು ಹೇಳಿ ನಕ್ಕನು. ಆದರೆ ಈ ಹುಡು ಗನ ಮಾತು ಅಲ್ಲಿದ್ದ ರಾಜಸ್ತ್ರೀಯರಿಗೆ ಸರಿಬೀಳಲಿಲ್ಲ. ಆದರೂ ದೊರೆ ಆಡಿದ ಮಾತಿಗೆ ಪ್ರತಿಯಾಗಿ ಆಡದೆ ಇವರೆಲ್ಲರೂ ಸುಮ್ಮನಿರಬೇಕಾಗಿ ಬಂತು. ಮಾರನೇ ದಿನ ಅರಮನೆಯಲ್ಲಿ ಜೂಜನ್ನು ಇಟ್ಟು ಪಗಡೆಯಾಡು ವುದೆಂದು ಗೊತ್ತಾಯಿತು, ಆ ಆಟಕ್ಕೆ ಹುಡುಗರೂ ರಾಣಿವಾಸದಲ್ಲಿ