ಪುಟ:ಸಮತಿ ಮದನಕುಮಾರರ ಚರಿತ್ರ.djvu/೨೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೮] ೨೧೭ ಸುಮತಿ ಮದನಕುಮಾರರ ಚರಿತ್ರೆ ರುವ ಅರಸಿತ್ತಿಯರೂ ಸೇರಿದರು. ಒಬ್ಬೊಬ್ಬರಾಗಿ ಆಡುತ್ತಾ ವಿಶೇಷ ವಾಗಿ ದ್ರವ್ಯವನ್ನು ಸೋಲುತ್ತಾ ಬಂದರು, ಈ ಆಟಕ್ಕೆ ಲಲಿತೆ ಎಂಬ ಅರಸು ಮಗಳು, ಸುಮತಿ, ಇವರಿಬ್ಬರುಮಾತ್ರ ಹೋಗಲಿಲ್ಲ. ಕೊನೆಗೆ ಇವರ ಸರದಿಬಂತು, ತನಗೆ ಆಟ ಬರುವುದೇ ಇಲ್ಲವೆಂತಲೂ, ಅಥವಾ ಆಡಿದಾಗೂ ತಮ್ಮ ಚಿಕ್ಕಪ್ಪ ಸುಮ್ಮನೇ ಇರಲಾರನೆಂತಲೂ, ಲಲಿತೆಯು ತಪ್ಪಿಸಿಕೊಂಡಳು, ಆದರೆ ಸುಮತಿಗೆ ಇತರರ ಬಲವಂತ ಹೆಚ್ಚಾ ಯಿತು, ಮಂಗರಾಜನಂತೂ ಮನಸ್ಸು ಬಂದಹಾಗೆ ಹರಟ- ಏನೊ ಹಾರುವ, ನಾವೆಲ್ಲಾ ಸೋಲುವದನ್ನು ನೋಡಿಕೊಂಡಿದ್ದು, ನೀನು ತಂದ ಹಣವನ್ನು ಮಾತ್ರ ಕಟ್ಟಿ ಕೊಂಡು ಹೋಗುತೀಯಾ ? ನೀನು ಆಡಲೇಬೇಕು, ಇಲ್ಲದಿದ್ದರೆ, ಬಿಡುವುದಿಲ್ಲ, ಎಂದನು. ಅದಕ್ಕೆ ಸುಮ ತಿಯು--ನನ್ನ ಹತ್ತಿರ ಒಂದು ಕಾಸೂ ಇಲ್ಲ, ನನಗೆ ಆಟವೂ ಬಾರದು. ನಾನು ಆಡುವುದೂ ಇಲ್ಲ ಎಂದು ಹೇಳಿದನು. ಆಗ ಅಲ್ಲಿದ್ದ ಕಮ ಲಾಂಬಕೀದೇವಿಯೇ ಮೊದಲಾದ ಅರಸಿಯರಿಗೆ ಸುಮತಿಯನ್ನು ಗೇಲಿಮಾಡಲು ಇದು ಒಂದು ಸಮಯ ಸಿಕ್ಕಿತು. ಪಂಗೂಳಿ ಹಾರು ವರ ಹೈದನಿಗೆ ನಮ್ಮ ಸಭೆಯಲ್ಲಿ ಆಟವನ್ನು ಹರಟ ಗೆಲ್ಲುವುದಕ್ಕೆ ಬಂದೀತೆ ? ತೆಗೆ, ನಾನು ನೋಡಲಾರೆ ! ಎಂದು ಆಡಿಕೊಂಡರು. ಮತ್ತು ಲಲಿತೆಯನ್ನು ಕುರಿತು-ಏನೇ ಬಿನ್ನಾ ಣಿ ಆ ಹೈದ ಒ೦ದು ಪದಾರ್ಥವೆಂದು ನೀನು ಮಾತನಾಡಿಸಿಕೊಂಡು ಹೋಗುತೀಯಲ್ಲ! ಈಗ ಅವನ ಬಣ್ಣ ಏನಾಯಿತು, ನೋಡಿದೆಯಾ ? ಎಂದು ಹಂಗಿಸಿದರು. ಈ ಮಾತು ಲಲಿತೆ ಸಹಿಸಲಿಲ್ಲ. ಅವಳು-ಅಪ್ಪಾ ಸುಮತಿ, ಇವರ ಹಂಗಣೆಯನ್ನು ನಾನು ಕೇಳಲಾರೆ, ಏನಾದರೂ • ಆಗಲಿ. ನಾನು ನಿನಗೆ ಹಣವನ್ನು ಕೊಡುತೇನೆ. ನೀನು ಪಗಡೇ ಆಡು, ಎಂದಳು, ಈ ಮಾತಿಗೆ ಸುಮತಿಯು-ತಾಯಿ, ಎಂದಿಗೂ ಜೂಜಾ ಡಬಾರದೆಂದು ನಮ್ಮ ಗುರುಗಳು ಹೇಳಿದಾರೆ. ಇದಲ್ಲದೆ ಇತರರಲ್ಲಿ ಸುಮ್ಮನೆ ಹಣವನ್ನು ತೆಗೆದುಕೊಳ್ಳಬಾರದೆಂದು ಹೇಳಿದಾರೆ. ಅದಾ ಗ್ಯೂ ನಿಮ್ಮ ಬಲವಂತ ಹೆಚ್ಚಾದಕಾರಣ ನಾನು ಆಡುತೇನೆ. ಗೆಲ್ಲಲ್ಲಿ, ಸೋಲಲಿ, ಅದರ ಆದಾಯನಷ್ಟ ನಮಗೆ ಬೇಡ, ಎಂದು ಹೇಳಿ 14