ಪುಟ:ಸಮತಿ ಮದನಕುಮಾರರ ಚರಿತ್ರ.djvu/೨೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೧೮ ಸುಮತಿ ಮದನಕುಮಾರರ ಚರಿತ್ರೆ [ಅಧ್ಯಾಯ ಆಟಕ್ಕೆ ಮೊದಲುಮಾಡಿದನು. ಸ್ವಲ್ಪ ಹೊತ್ತಿನಲ್ಲಿ ಆಟದ ಕ್ರಮವನ್ನು ತಿಳಿದು, ಆಡುತಾ ಅಲ್ಲಿದ್ದವರೆಲ್ಲರನ್ನೂ ಸೋಲಿಸಿದನು. ಎಲ್ಲರೂ ತ೦ದ ಹಣವೂ ಇವನದಾಯಿತು, ಆಗ ಈ ಹುಡುಗನು ಹತ್ತಿರಿದ್ದ ಲಲಿತೆಯ ಮುಂದೆ ಆ ಹಣವನ್ನೆಲ್ಲಾ ಸುರಿದು, ಅದನ್ನು ತೆಗೆದುಕೊಳ್ಳು ವಂತೆ ಹೇಳಿದನು. ಅವಳು ಅದರಲ್ಲಿ ಸ್ವಲ್ಪ ನನ್ನಾದರೂ ಸ್ವೀಕರಿ ಸೆಂದು ಬೇಡಿಕೊಂಡದ್ದರಿಂದ, ಸುಮತಿಯು ಅವಳ ಮಾತನ್ನು ನಡೆಸಿ ಕೊಟ್ಟು, ಅವಳು ಮೆಚ್ಚು ವರೀತಿಯಲ್ಲಿ ಆ ಹಣಕ್ಕೆ ಸದ್ವಿನಿ ಯೋಗವನ್ನು ಮಾಡುತ್ತೇನೆಂದು ಹೇಳಿದನು, ಮಾರನೇ ದಿನ ಬೆಳಗ್ಗೆ ಹೊತ್ತಿಗೆಮುಂಚೆ ಎದ್ದು ಹೊರಕ್ಕೆ ಹೋಗಿ ಆ ದಿನ ಸಾಯಂಕಾಲ ಹಿಂತಿರುಗಿ ಬಂದು ಅರಮನೆಗೆ ಸೇರಿದನು. ಅರೆಗಳಿಗೆಯೂ ಸುಮತಿ ಯನ್ನು ಬಿಟ್ಟು ಇರದೇ ಇದ್ದ ಮದನನು ಇವನನ್ನು ಮರೆತೇಬಿಟ್ಟನು. ಇವ ಎಲ್ಲಿ, ಎಂದು ಯಾರೂ ವಿಚಾರಮಾಡಲೇ ಇಲ್ಲ. ಅನಂಗರಾಜ ಮಾತ್ರ ಒಂದು ಸಾರಿ ಕೇಳಿ ಸುಮ್ಮನಾದನು. ಆದರೆ ಸಾಯಂಕಾಲ ಸುಮತಿಯು ಮನೆಗೆ ಬರಲು, ಲಲಿತೆಯು ನೀನು ಎಲ್ಲಿ ಹೋಗಿದ್ದೆ ಯಪ್ಪಾ ? ಬೆಳಗಿನಿಂದಲೂ ನಿನ್ನನ್ನು ಕಾಣಲಿಲ್ಲ ವಲ್ಲಾ, ಎಂದಳು. ಅದಕ್ಕೆ ಸುಮತಿಯು ಹೇಳಿದ್ದೇನೆಂದರೆ-ತಾಯಿ, ನಿನ್ನೆ ನೀವು ಕೊಟ್ಟ ಹಣವನ್ನು ವಿನಿಯೋಗಿಸುವುದಕ್ಕಾಗಿ ಹೋಗಿದ್ದೆ. ಇಲ್ಲಿಗೆ ಎರಡು ಹರದಾರಿಯಲ್ಲಿ ಒಂದು ಗ್ರಾಮವಿದೆ. ಅಲ್ಲಿ ಒಬ್ಬ ಶೂದ್ರಿ ತಿ ಇದಾಳೆ, ಅವಳು ಬಾಲ್ಯದಲ್ಲಿ ನನ್ನ ನ್ನು ಎತ್ತಿ ಆಡಿಸುತಿದ್ದ ವಳು, ಅವಳ ತಂದೆತಾಯಿಗಳಿಬ್ಬರೂ ಬಹಳ ಮುದುಕರು, ಅವರಿಗೆ ಇವಳು - ಹೊರತು ಇನ್ನು ಯಾರೂ ಮಕ್ಕಳಿಲ್ಲ. ಈ ಮುದು ಕರ ಪೋಷಣೆಗೆ ಯಾರೂ ಇಲ್ಲದೇ ಹೋದಾರಲ್ಲಾ, ಎ೦ಬ ಭಯ ದಿಂದಲೇ ಇವಳು ಮದುವೆಮಾಡಿಕೊಳ್ಳಲಿಲ್ಲ, ಮೊದಲಿನಿಂದಲೂ ಇತ ರರ ಮನೆಯಲ್ಲಿ ದುಡಿದು ಮಾತಾಪಿತೃಗಳನ್ನು ಸಂರಕ್ಷಣೆ ಮಾಡು ತಿದ್ದಳು, ಈಗ ಅವಳಿಗೂ ಮುಪ್ಪು ಬಂತು, ಎಪ್ಪತ್ತು ವರುಷದ ಸಮಯವಾಯಿತು. ಚಾಕರಿ ಮಾಡಲಾರಳು, ಹೊಟ್ಟೆಗಿಲ್ಲದೆ ಬಹು ಸಂಕಟ ಪಡು ತಿದಾಳೆ. ಆದಕಾರಣ ಆ ಬಡವಳಿಗೆ ಸಹಾಯಮಾಡ