ಪುಟ:ಸಮತಿ ಮದನಕುಮಾರರ ಚರಿತ್ರ.djvu/೨೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೮] ಸುಮತಿ ಮದನಕುಮಾರ ಚರಿತ್ರೆ ೨೧೯ ಬೇಕೆಂದು, ಅಲ್ಲಿಗೆ ಹೋಗಿ, ನೀವು ಕೊಟ್ಟು ಹಣವನ್ನು ನಿಮ್ಮ ಹೆಸರಿನ ಮೇಲೇ ಅವಳಿಗೆ ಕೊಟ್ಟು ಜೀವನಾ ಮಾಡಿಕೊಳ್ಳುವಂತೆ ಹೇಳಿ ಬಂದೆ, ಹೀಗೆಂದು ಸುಮತಿ ಹೇಳಿದನು. ಅದಕ್ಕೆ ಲಲಿತೆಯು-ಅಯ್ಯ, ನೀನು ಮಾಡಿದ ಕೆಲಸ ಉತ್ತಮವಾದ್ದು, ದೀನರಾದವರಿಗೆ ಉಪ ಕಾರ ಮಾಡುವುದಕ್ಕಿಂತಲೂ ಇನ್ನು ಧ್ಯವಿಲ್ಲ. ಆದರೆ ಆ ಹಣವನ್ನು ನಿನ್ನ ಹೆಸರಿನ ಮೇಲೆಯೇ ಕೊಡ ಬೇಕಾಗಿತ್ತು ಎಂದಳು. ಇದಕ್ಕೆ ಸುವತಿಯ ಅಮ್ಮಯ್ಯ, ಆ ಹಣ ನನ್ನ ದಲ್ಲ, ತಾವು ಕೊಟ್ಟದ್ದು, ಆದ್ದ ರಿಂದ ಧರ ತಮಗೇ ಹೊರತು ನನಗಲ್ಲ. ಅದನ್ನು ಹಾಗೆ ನಾನು ಉಪಯೋಗಿಸಿದರೆ, ನೀವು ಸಂತೋಷ ಪಟ್ಟರಿ, ಎಂದು ತಿಳಿ ದೇ ನಾನು ಹಾಗೆ ವೆಚ್ಚ ಮಾಡಿದೆ. ಈ ಅರಮನೆಯಲ್ಲಿ ಎಷ್ಟೋ ಜನ ಅರಸು ಮಕ್ಕಳು ಬಂದು ನೆರೆದಿದ್ದಾರೆ. ಸಾಲವನ್ನಾದರೂ ಮಾಡಿ ಜೂಜಾಡಿ ಆಡುತಾರೆ. ಆ ಹಣಕ್ಕೆಲ್ಲಾ ಸರಿಯಾದ ಉಪಯೋಗವನ್ನು ಹುಡುಕಿ, ಬಡವರಿಗೆ ಸಹಾಯಮಾಡಿದರೆ ಎಷ್ಟು ಚೆನ್ನಾಗಿದ್ದಿತು ! ಇದನ್ನು ಬಿಟ್ಟು, ತಮ್ಮ ಪೋಷಣೆಯಲ್ಲಿಯೇ ನಿರತರಾಗಿದ್ದಾರೆ. ಇವರಿಗೆ ಎಲ್ಲವೂ ಅನುಕೂಲವಾಗಿರಬೇಕು. ಬಿಸಿಲಾಗದು, ಚಳಿಯಾಗದು. ನಾಲ್ಕು ಮಾರು ದೂರ ನಡೆಯುವುದಕ್ಕಾಗದು. ಅರಘಳಿಗೆಯ ಊಟ ಹೊತ್ತು ಹೋಗಕೂಡದು. ಹೀಗೆಲ್ಲಾ ಮಾಡಿಕೊಂಡು ದೇಹ ಪೋಷಣೆ ಯನ್ನು ಬಹು ಅಕ್ಕರೆಯಿಂದ ಮಾಡಿಕೊಳ್ಳು ತಾರೆ. ಇವರಿಗೆ ಸ್ವಲ್ಪ ನೆಗಡಿ ಬಂದರೆ ಹತ್ತು ಜನ ವೈದ್ಯರು ಮನೆಗೆ ಸುತ್ತು ತಲೇ ಇರಬೇಕು. ಇತರ ಬಡಜನರು ಮಾತ್ರ ಕಷ್ಟ ಪಟ್ಟು ಸಾಯಬೇಕು, ಬಡವರು ಎಷ್ಟು ಶ್ರಮ ಪಟ್ಟ ರೂ ಈ ಹಣವಂತರ ಮನಸ್ಸಿಗೆ ಅದು ಬರುವುದೇ ಇಲ್ಲ. ಮನುಷ್ಯ ಮನುಷ್ಯರಿಗೆ ಇಷ್ಟು ವ್ಯತ್ಯಾಸ ಉಂಟೆ ? ಸ್ವಲ್ಪವೂ ದಯಾರಸವಿಲ್ಲದಿದ್ದರೆ, ಬಡವರು ಇವರಲ್ಲಿ ಸೇರಿಯಾರೆ ? ಬೇಕಾದ ಒಡವೆಗಳನ್ನು ಹೇರಿಕೊಂಡು, ಉಡುಪನ್ನು ಹಾಕಿಕೊಂಡು, ಮುಖ ವನ್ನೂ ಮೈಯನ್ನೂ, ಕೈ ಕಾಲುಗಳನ್ನೂ ಕುಣಿಸುತಾ, ಇಲ್ಲದ ಅಭಿನಯ ವನ್ನು ಮಾಡುತಾ, ಡಂಭದಿಂದ ಮೆರೆಯುತಾರೆ. ಈ ಐಶ್ವರವೆಲ್ಲಾ ಬಡ ವರ ಮನೆ ಹಾಳಾಗಿ ಅರಮನೆಗೆ ಬಂದದ್ದೇ ಹೊರತು, ಕಷ್ಟ ಪಟ್ಟು ಇವರು