ಪುಟ:ಸಮತಿ ಮದನಕುಮಾರರ ಚರಿತ್ರ.djvu/೨೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸುಮತಿ ಮದನಕುಮಾರರ ೨೨೦ - [ಅಧ್ಯಾಯ ಹೊಸದಾಗಿ ಸಂಪಾದಿಸಲಿಲ್ಲ. ಕೃಷಿಮಾಡಿ ಅದರ ಫಲವನ್ನು ಅನು ಭವಿಸುತಾ ಬಡವರಿಗೆ ಸಹಾಯಮಾಡುತ್ತಾ, ಯಾರಿಗೂ ಕೇಡನ್ನು ೦ಟು ಮಾಡದೆ, ಇರಬೇಕೆಂದು ನಮ್ಮ ಗುರುಗಳು ಹೇಳಿದಾರೆ, ಆದರೆ ಈ ಹಣ ಗಾರರ ತಾತ್ಪಯ್ಯ ಹಾಗಿಲ್ಲ. ತಾವು ಎಷ್ಟು ಕೆಲಸಮಾಡದೇ ಇದ್ದರೆ, ಅಷ್ಟು ದೊಡ್ಡವರು ; ತಮ್ಮ ಬಳಿಯಲ್ಲಿ ಚಾಕರರು ಎಷ್ಟು ಹೆಚ್ಚಾಗಿದ್ದರೆ, ತಾವು ಅಷ್ಟು ದೊಡ್ಡವರು ; ಲೋಕವನ್ನು ತಾವು ಎಷ್ಟು ಬಾಧಿಸಿ, ಬಡ ವರನ್ನು ಹಾಳುಮಾಡಿ, ತಾವು ಡಂಭಮಾಡಿದರೆ, ತಾವು ಅಷ್ಟು ದೊಡ್ಡವರು,- ಹೀಗೆಂದು ತಿಳಿದು ಇದಾರೆ. ಕಾಪಟ್ಯವು ಎಷ್ಟು ಹೆಚ್ಚಾಗಿದ್ದರೆ ಅಷ್ಟು ಮತ್ಯಾದೆ ಎಂತಲೂ, ಇತರರನ್ನು ಎಷ್ಟು ಮೋಸಮಾಡಿದರೆ, ಅದು ಅಷ್ಟು ಯುಕ್ತಿ ಎಂತಲೂ, ತಿಳಿದುಕೊಂಡಿ ದಾರೆ. ಇವರ ಅಹಂಕಾರದ ಹೊಗರಿನಲ್ಲಿ ಒಳ್ಳೆ ಮಾತು ಕಿವಿಗೇ ಬೀಳುವುದಿಲ್ಲ. ಹೀಗೆಂದು ಹೇಳಿದನು. ಈ ಮಾತನ್ನು ಕೇಳಿ ಲಲಿತೆಯು. ಸುಮತಿಯ ಬುದ್ದಿ ಯನ್ನು ಕೊಂಡಾಡುತಾ ಅಪ್ಪಾ ನೀನು ಹೇಳಿದ್ದೆಲ್ಲಾ ನಿಜ. ಇಂಥಾ ಒಳ್ಳೆ ಮಾತು ಒಳ್ಳೆ ಮನಸ್ಸುಳ್ಳವರಿಗೆ ಹೊರತು ಇತರರಿಗೆ ಬರುವುದಿಲ್ಲ. ಐಶ್ವರ ಮದದಿಂದ ಜನರು ಬಡವರಿಗೆ ಮೋಸ ಮಾಡುವುದು ನಿಜ, ಆದರೆ ಹುಲೀ ಚಕ್ಕಳವನ್ನು ಹೊದ್ದು ಗದ್ದೆ ಯಲ್ಲಿ ಮೆಯ್ಯುವುದಕ್ಕೆ ಹೋದ ಕತ್ತೆಯು ತನ್ನ ಕೂಗಿನಿಂದಲೇ ತಾನು ಕೆಟ್ಟ ಹಾಗೆ ಈ ದುಷ್ಟ ರೂ ಸಹ ತಮ್ಮ ಅವಿವೇಕದಿಂದಲೇ ತಾವು ಕೆಡು ತಾರೆಂದು ಹೇಳಿದಳು. ೧೯ ನೆ ಅಧ್ಯಾಯ ಹೀಗೆ ಆ ದಿನ ಕಳೆದುಹೋಯಿತು, ಮಾರನೇ ದಿನ ಮದನನೂ ಅವನ ಹೊಸ ಸ್ನೇಹಿತರೂ ಉದ್ಯಾನವನಕ್ಕೆ ಹೋಗಿ ಆಟವನ್ನು ಆಡಿ | ಕೊಂಡು ಬರಬೇಕೆಂದು ಹೊರಟರು. ಅವರ ಸಂಗಡ ಲಲಿತೆಯೇ ಮೊದಲಾದ ಒಬ್ಬಿಬ್ಬರು ಹೆಣ್ಣು ಹುಡುಗರೂ ಸುಮತಿಯೂ ಹೋದರು. ಎಲ್ಲರೂ ಹೊಗೇಬತ್ತಿಯನ್ನು ಸೇದುವುದಕ್ಕೆ ಮೊದಲು ಮಾಡಿದರು. ಮಂಗರಾಜನು ಒಂದು ಸುತ್ತನ್ನು ಸುತ್ತಿ ಬೆಂಕಿಹತ್ತಿಸಿ, ನೀನೂ.