ಪುಟ:ಸಮತಿ ಮದನಕುಮಾರರ ಚರಿತ್ರ.djvu/೨೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ووو ಸುಮತಿ ಮದನ ಕುಮಾರರ ಚರಿತ್ರೆ [ಅಧ್ಯಾಯ. ದಕ್ಕೆ ಹೋಗಬೇಕೆಂದು ನಿಷ್ಕರ್ಷೆಮಾಡಿಕೊಂಡರು, ಸುಮತಿಯೂ ಇವರ ಸಂಗಡಲೇ ಹೊರಟನು. ಮಂಗರಾಜ ಮೊದಲಾದ ಕೆಲವು ಹುಡುಗರಿಗೆ ಇವನಮೇಲೆ ದ್ವೇಷವಿತ್ತು. ಮದನನು ಈ ಕೆಟ್ಟ ಹುಡು ಗರ ಸಹವಾಸದಲ್ಲಿಯೇ ಲೋಲನಾಗಿ ಸುಮತಿಯನ್ನು ಮಾತನಾಡಿಸದೆ ಸುಮ್ಮನೆ ಹೋಗು ತಿದ್ದನು. ಮುನ್ನಾ ದಿವಸ ನಡೆದ ಜಗಳಕ್ಕೆ ಕಾರಣ ವೇನೆಂದು ಮದನ ಕೇಳಲೂ ಇಲ್ಲ. ಅವ ಕೇಳದೆ ನಾನು ಯಾಕೆ ಹೇಳಲೆಂದು ಸುಮತಿ ಹೇಳಲೂ ಇಲ್ಲ, ಇವರೆಲ್ಲರೂ ಹೋಗುತಿರು ವಾಗ, ಸ್ವಲ್ಪ ದೂರದಲ್ಲಿ ಕೆಲವು ಜನರು ಗುಂಪು ಸೇರಿಕೊಂಡಿದ್ದರು. ಅದಕ್ಕೆ ಕಾರಣವೇನೆಂದು ಕೇಳಲಾಗಿ, ಸ್ವಲ್ಪ ಹೊತ್ತಿನಲ್ಲಿಯೇ ಗೂಳಿ ಕಾಳಗವಾಗುವುದೆಂದು ಹೇಳಿದರು, ಆಗ ಸುಮತಿಯು ನಾವು ಗೂಳಿಕಾಳಗಕ್ಕೆ ಹೋಗಬಾರದು. ಅವು ಕಿತ್ತುಕೊಂಡು ಜನರಮೇಲೆ ನುಗ್ಗಿದರೆ ತಪ್ಪಿಸಿಕೊಳ್ಳುವುದು ಕಷ್ಟ. ಇಂಥಾ ಅ ಪಾಯ ಯಾವು ದಕ್ಕೂ ಪುಟ್ಟಸ್ವಾಮಿಯನ್ನು ಸಿಕ್ಕಿಸುವುದಿಲ್ಲವೆಂದು ಖಾನಾ೦ಬಕಿಗೆ ಮಾತ ಕೊಟ್ಟು ಬಂದಿದ್ದೀರಿ, ಎಂದನು. ಆಗ ಅವರಲ್ಲಿ ಒಬ್ಬ ಹುಡು ಗನು ಗೂಳಿಗಳನ್ನು ಉದ್ದವಾದ ಹಗ್ಗ ಕ್ಕೆ ಕಟ್ಟಿ ರುತಾರೆ, ಆದನ್ನು ಕಿತ್ತು ಕೊಂಡು ಬರಲಾರವು. ಅಥವ ಬಂದರೂ ಇಂಥಾ ಅಪಾಯ ಸಂಭವಿಸಿ ತೆಂದು ಯಾರುತಾನೆ ಅರಮನೆಗೆ ಹೋಗಿ ಹೇಳುತ್ತಾರೆ ? ಎಂದನು. - ಹುಡುಗರು ಯಾರೂ ಹೇಳುವುದಿಲ್ಲ. ಸುಮತಿ-ನಾನು ಒಬ್ಬರ ಮೇಲೆ ಚಾಡಿ ಹೇಳ ಬೇಕೆಂದು ಇಲ್ಲ. ಆದರೆ ಎಲ್ಲಿಗೆ ಹೋಗಿದ್ದಿರಿ, ಏನು ನಡೆಯಿತು ? ಎಂದು ಕೇಳಿದರೆ, ನಾನು ಏನಹೇಳಲಿ ? ಹುಡುಗರು ನಮ್ಮ ದಾರಿಯಲ್ಲಿ ನಾವು ಹೋಗುತಿದ್ದೆ ಎಂದು ಅಷ್ಟರಮಟ್ಟಿಗೆ ಹೇಳು, ಮುಂದಕ್ಕೆ ಬೇಡ. ಸುಮತಿ- ಹಾಗಾದರೆ ನಾವು ನಿಶ್ಚಯವನ್ನು ಹೇಳಿದಹಾಗಾಗು ವುದಿಲ್ಲ, ಮತ್ತೂ ಗೂಳಿಕಾಳಗದಲ್ಲಿ ಅಪಾಯವುಂಟು, ನಾವು ಅಲ್ಲಿಗೆ ಹೋಗಬಾರದು, ಮದನನನ್ನು ಅಲ್ಲಿಗೆ ಕರೆದುಕೊಂಡು ಹೋಗಲೇ ಕೂಡದು--(ಹೀಗೆ ಸುಮತಿ ಆಡಿದ ಮಾತು ಅಲ್ಲಿದ್ದವರು ಯಾರಿಗೂ ಸರಿಬೀಳಲಿಲ್ಲ).