ಪುಟ:ಸಮತಿ ಮದನಕುಮಾರರ ಚರಿತ್ರ.djvu/೨೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೨೩ ೧೯] ಸುಮತಿ ಮದನಕುಮಾರರ ಚರಿತ್ರೆ ಹುಡುಗರು-ಲೋಕದಲ್ಲೆಲ್ಲಾ ತಾನೇ ಬುದ್ಧಿವಂತನೆಂದು ಈ ಸುಮತಿ ಕೊಚ್ಚಿ ಕೊಳ್ಳು ತಾನೆ. ತಿಮ್ಮನಾಯಕ- ಈ ಭಿಕ್ಷಾನ್ನದ ಹಾರುವ ದೊರೆಮಕ್ಕಳಾದ ನಮಗೆ ಬುದ್ದಿ ಕಲಿಸುವುದಕ್ಕೆ ಬರುತಾನೆ ! ಮದನನು ಇವನ ಸ್ನೇಹಾ ಮಾಡಿದಮಾತ್ರಕ್ಕೆ ಇವ ಹೆಚ್ಚಿಕೊಂಡ ಮಂಗ- ನಮ್ಮ ಪುಟ್ಟ ಸಾಮಿಯು ನಿನಗೆ ಮಾಡಿದ ಉಪಕಾರಕ್ಕೆ ನೀನು ಅವನ ಮೇಲೆ ಚಾಡಿ ಹೇಳುತೀಯೇನೆರಾ ? ಸುಮತಿ – ಚಾಡೀಹೇಳಬೇಕಾದ ಅಗತ್ಯ ನನಗಿಲ್ಲ. ನಾನು ಭಿಕ್ಷಾನ್ನ ದವನಾದರೆ, ನಿಮ್ಮಗಳಿಂದ ನನಗೆ ಯಾವ ಉಪಕಾರವೂ ಆಗತಕ್ಕದ್ದಿಲ್ಲ. ಇದುವರೆಗೂ ಸುಮ್ಮನೇ ಇದ್ದ ಮದನನು ಈ ಮಾತನ್ನು ಕೇಳಿ ಕೋಪಗೊಂಡು-ಏನೆಲೋ ! ನನಗೆ ಅವಮಾನ ಮಾಡುತೀಯಾ ? ಸುಮತಿ-ನಾನು ಅವಮಾನಮಾಡುವುದಿಲ್ಲ. ನೀನೂ ನಿನ್ನ ಸ್ನೇಹಿತರೂ ಸೇರಿ ನನಗೆ ಅವಮಾನಮಾಡು ತೀರಿ. ಮದನ- ನೀನೇನು ಮಹಾ ದೊಡ್ಡ ಮನುಷ್ಯನೊ ? ಸುಮತಿ - ಇದುವರೆಗೂ ನೀನು ದೊಡ್ಡ ಮನುಷ್ಯನೆಂದು ಕೊ೦ಡಿದ್ದೆ. ಮದನ-ಈಗ ನಾನು ದೊಡ್ಡ ಮನುಷ್ಯನಲ್ಲವೇನೋ ? ನನ್ನನ್ನು ಬೈಯುತೀಯಾ ? - ಹೀಗೆಂದು ಕೋಪದಿಂದ ಉಳ್ಳ೦ಬಿರಿಸಿಗೂ ಸುಮತಿ ಯ ಕೆನ್ನೆ ಗೆ. ಮದನ ಒಂದು ಏಟನ್ನು ಹೊಡೆದನು. ಆಗ ಸುಮತಿಯ ದೈತ್ಯ ಸ್ವಲ್ಪ ಕುಂದಿತು. ಅವನು ಎರಡು ಕೈಯಿಂದಲೂ ಮುಖವನ್ನು ಮುಚ್ಚಿ ಕೊಂಡು ಅಳುತಾ-ಮದನ, ನೀನು ನನಗೆ ಹೀಗೆ ಮಾಡುತೀಯೆಂದು ತಿಳಿದಿರಲಿಲ್ಲ ಎಂದನು. ಆ ಕಾಲದಲ್ಲಿ ಹತ್ತಿರಿದ್ದ, ತುಂಟಹುಡುಗರೆಲ್ಲಾ - ಪುಟ್ಟ ಸಾಮಿ, ಇನ್ನೂ ನಾಲ್ಕು ಏಟ ಕೊಡಿ ಕೊಡಿ, ಎಂದು ಕೂಗಿದ್ದ ಲ್ಲದೆ, ಇದೇ ಸಮಯವೆಂದು, ಎಲ್ಲರೂ ಒಂದೊಂದು ಏಟ ಹಾಕುವು ದಕ್ಕೆ ಮೊದಲುಮಾಡಿ,--ಎಲ್ಲಿ ನಿನ್ನ ಮುಖ ತೋರಿಸು, ಹೇಡಿ, ಎಂದು