ಪುಟ:ಸಮತಿ ಮದನಕುಮಾರರ ಚರಿತ್ರ.djvu/೨೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೨೫ ೧೯] ಸುಮತಿ ಮದನಕುಮಾರರ ಚರಿತ್ರ ನನ್ನಲ್ಲಿ ಇನ್ನೇನೂ ಇಲ್ಲ, ಈ ಒಂದು ಹಣ ಮಾತ್ರ ದೊರೆಮನೆಯಲ್ಲಿ ನಿನ್ನೆ ದಕ್ಷಿಣೆಯಾಗಿ ಬಂದಿತ್ತು. ಇದನ್ನು ಹಿಡಿ ಎಂದು ಕೊಟ್ಟನು. ತಾನೂ ಆ ಸಿದ್ದಿ ಯವನಿಗೆ ಉಚಿತವನ್ನು ಕೊಡಬೇಕೆಂದು ಮದ ನನು ನೋಡಿಕೊಳ್ಳಲು ಹತ್ತಿರ ಇದ್ದ ದುಡ್ಡೆಲ್ಲ ವೆಚ್ಚವಾಗಿ ಹೋಗಿತ್ತು. ತುಂಟರ ಹಾವಳಿಯಲ್ಲಿ ಒಂದು ಕಾಸೂ ಉಳಿದಿರಲ್ಲ. ತರುವಾಯ ಹುಡುಗರೆಲ್ಲರೂ ಗೂಳಿಕಾಳಗವಾಗುವ ಕಡೆಗೆ ತಿರು ಗಿದರು. ಆಗ ಸುಮತಿಯು-ಅಲ್ಲಿಗೆ ಹೋಗುವುದು ಸರಿಯಲ್ಲ ; ನಾವು ಹುಡುಗರು, ದೊಡ್ಡವರ ಗುಂಪಿನ ಮಧ್ಯೆ ನಾವು ಸಿಕ್ಕಿಕೊಂಡರೆ ಈಚೆಗೆ ಬರುವುದಕ್ಕೂ ಇಲ್ಲದೆ ಅಲ್ಲಿ ಇರುವುದಕ್ಕೂ ಇಲ್ಲದೆ ಕಷ್ಟ ವಾಗು ವುದು, ಗೂಳಿ ತಪ್ಪಿಸಿಕೊಂಡು ಈಚೆಗೆ ಬಂದರೆ, ಜನರನ್ನು ತುಳಿದು ಬಿಟ್ಟಿತು. ನಾವು ಚಿಕ್ಕವರಾದ್ದರಿಂದ, ನಮ್ಮನ್ನು ದೊಡ್ಡವರು ತಳ್ಳಿ ಬಿಟ್ಟು ತಾವು ತಪ್ಪಿಸಿಕೊಂಡು ಓಡಿಹೋಗವರು, ಗೂಳಿಯು ನಮ್ಮನ್ನು ತುಳಿದುಬಿಡಬಹುದು. ಇಷ್ಟ ರಮೇಲೆ ಬೇಕಾದವರು ಹೋಗಲಿ, ಆದರೆ ಮದನ ಮಾತ್ರ ಹೋಗುವುದು ಸರಿಯಲ್ಲ. ಅವನಿಗೆ ಏನಾದರೂ ಅಪಾಯ ಸಂಭವಿಸಿದರೆ ದೊರೆಗೂ ಅರಸಿಗೂ ಬಹಳ ವ್ಯಾಕುಲ ಉಂಟಾ 'ದೀತು-ಹೀಗೆಂದು ಹೇಳಿದನು. ಈ ಮಾತನ್ನು ಯಾರೂ ಲಕ್ಷ ಮಾಡಲಿಲ್ಲ. ಆದಕಾರಣ ಸುಮತಿಯೂ ಅವರ ಸಂಗಡಲೇ ಹೋದನು. ಗೂಳಿಗಳು ಕಾದಾಡುತಿದ್ದ ರಂಗದ ಸುತ್ತಲೂ ಜನರ ಗುಂಪು ನಿಂತಿತ್ತು. ಅವರ ಹತ್ತಿರ ಈ ಹುಡುಗರೂ ನುಸುಳಿಕೊಂಡು ಹೋಗಿ ನಿಂತರು. ಆಗ ಗೂಳಿಗಳ ಕಾಳಗ ಬಲವಾಗಿ ನಡೆಯುತ್ತಿತ್ತು. ಕೊನೆಗೆ ಒಂದು ದೊಡ್ಡ ಗೂಳಿಯು ಇನ್ನೊ೦ದನ್ನು ತಿವಿದು ಸೋಲಿಸಿತು, ಈ ಎರಡು ಗೂಳಿಗಳೂ ಒ೦ದನ್ನು ಒಂದು ಹರಿಸಿಕೊಂಡು ಜನರಮೇಲೆ ನುಗ್ಗಿದವು, ಜನರೆಲ್ಲಾ ಛಿನ್ನಾ ಭಿನ್ನವಾಗಿ ಓಡಿದರು, ಇಬ್ಬರು ಗಂಡಸ ರನ್ನೂ ಒಬ್ಬ ಹೆಂಗಸನ್ನೂ ಒಬ್ಬ ಹುಡುಗನನ್ನೂ ಗೂಳಿಗಳು ತುಳಿದು ಬಿಟ್ಟವು, ಇಬ್ಬರ ಪ್ರಾಣಹೋಯಿತು, ಇಬ್ಬರಿಗೆ ಕಾಲುಮುರಿದು ಪೂರಾ ಪೆಟ್ಟಾಯಿತು, ಮದನನ ಸಂಗಡ ಇದ್ದ ಹುಡುಗರೆಲ್ಲರೂ ಗಾಬರಿಯಾಗಿ ಓಡಿಹೋದರು, ಮದನ ಕುಮಾರ ಮಾತ್ರ ಓಡಿಬರುತಾ