ವಿಷಯಕ್ಕೆ ಹೋಗು

ಪುಟ:ಸಮತಿ ಮದನಕುಮಾರರ ಚರಿತ್ರ.djvu/೨೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

[ಅಧ್ಯಾಯ .೨೨೮ ಸುಮತಿ ಮದನಕುಮಾರರ ಚರಿತ್ರೆ ಹಾಕಿಕೊಂಡು ರಾಣಿಯ ಸಂಗಡ ತಾವೂ ಈಚೆಗೆ ಹೊರಟರು. ಆ ಸಮಯಕ್ಕೆ ಸರಿಯಾಗಿ ಮದನನ ಸಂಗಡ ಹೋಗಿದ್ದ ಹುಡುಗರು ಕೆಲ ವರು ಬಂದು, ಮದನನಿಗೆ ವಿಶೇಷವಾಗಿ ಏನೂ ಗಾಯವಾಗಲಿಲ್ಲ ವೆಂದು ಹೇಳಿದರು, ಅವರ ಹಿಂದುಗಡೆಯಲ್ಲಿಯೇ ಮದನನೂ ಬಂದನು. ರಾಣಿಯು ಅವನನ್ನು ನೋಡಿ, ಅತ್ಯಾನಂದದಿಂದ ಎತ್ತಿಕೊಂಡು ಅವನ ಗುಣಗಳನ್ನು ಹಾಡಿಹಾಡಿಕೊಂಡು ಮುದ್ದಾಡಿದಳು. ತರು ವಾಯ ಪುಟ್ಟು ಸಾಮಿಯಸಂಗಡ ಹೋಗಿದ್ದ ಹುಡುಗರೆಲ್ಲರೂ ಅಲ್ಲಿ ಬಂದು ನಿಂತಿರುವುದನ್ನೂ ಆ ಗುಂಪಿನಲ್ಲಿ ಸುಮತಿ ಇಲ್ಲದೇ ಇರುವುದನ್ನೂ ಕಂಡು ಆಕೆಯು ಎಲ್ಲರೂ ಬಂದಿದಾರೆ, ಆ ಕೆಟ್ಟ ಹುಡುಗನಾದ ಸುಮತಿ ಮಾತ್ರ ಇಲ್ಲಿಲ್ಲ. ಅವನೇ ಪುಟ್ಟು ಸಾವಿಗೆ ಈ ಅಪಾಯವನ್ನು ತಂದು ಬಿಟ್ಟಿರಬೇಕು, ಆ ಗಂಡನ್ನು ಕಂಡರೆ ಮೊದಲಿನಿಂದಲೂ ನನಗೆ ಆಗದು. ಆ ಗೂಳಿಯು ಆ ಗಂಡನ್ನೇ ಹಾದುಕೆಡವಿದ್ದ ರಾಗಿತ್ತು. ಹೀಗೆಂದು ಕೋಪದಿಂದ ಗರ್ಜಿಸಿದಳು. ಮದನ-ಅಮ್ಮಯ್ಯ, ಸುಮತಿಯನ್ನು ತಾವು ಯಾಕೆ ಬಯ್ಯು ತೀರಿ, ಅವನಿಂದ ನನಗೆ ಅಪಾಯವೇನೂ ಉಂಟಾಗಲಿಲ್ಲ. ಇನ್ನೂ ಅವನು ಹೇಳಿದ ಬುದ್ದಿ ವಾದವನ್ನು ನಾನು ಕೇಳಿದ್ದರೆ ಹೀಗೆಲ್ಲಾ ಆಗುತಿರಲಿಲ್ಲ. ರಾಣಿ-ಹಾಗಾದರೆ, ಇದೆಲ್ಲಾ ಯಾರಿ೦ದ ಆಯಿತು ? - ಮದನ-ಇಂಥಾ ಅಪಾಯ ಉಂಟಾಗಬಹುದೆಂದು ಸುಮತಿಯು ಮುಂಚಿತವಾಗಿಯೇ ನಮಗೆ ಹೇಳಿದ, ಅವನ ಮಾತನ್ನು ನಾವು ಕೇಳದೇಹೋದೆವು. ಗೂಳಿಯು ನನ್ನ ನ್ನು ಹರಿಸಿಕೊಂಡು ಬರುವುದನ್ನು ಕಂಡು ಅಲ್ಲಿದ್ದವರೆಲ್ಲಾ ಭಯದಿಂದ ಕೂಗಿಕೊಳ್ಳುತಿದ್ದರೇ ಹೊರತು, ಯಾರೂ ಅದನ್ನು ಹಿಡಿದು ನಿಲ್ಲಿಸಲಾರದೇ ಹೋದರು. ಸುಮತಿಯು ಒಂದು ಕೋಲಿನಿಂದ ಅದನ್ನು ತಿವಿದನು. ಆಗ ಗೂಳಿಯು ಅವನ ಕಡೆಗೆ ತಿರುಗಿತು. ಆಗ ಜ್ಞಾನತಪ್ಪಿ ನಾನು ಅಲ್ಲಿ ಬಿದ್ದು ಬಿಟ್ಟೆ. ಆ ಮೇಲೆ ಏನಾಯಿತೋ ನಾನರಿಯೆ. ಓಲೆಕಾರರು--ಬುದ್ದಿ, ಸುಮತಿಗೆ ಅಪಾಯಸಂಭವಿಸಿ ಅವನನ್ನು