ಪುಟ:ಸಮತಿ ಮದನಕುಮಾರರ ಚರಿತ್ರ.djvu/೨೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೦) ಸುಮತಿ ಮದನಕುಮಾರರ ಚರಿತ್ರೆ ೨೨೯ ಗೂಳಿಯು ಹಾಯುವುದರೊಳಗಾಗಿ ಒಬ್ಬ ಸಿದ್ದಿ ಯವ ಬಂದು ಗೂಳಿ ಯನ್ನು ಹೊಡೆದು ಕೆಳಕ್ಕೆ ಕೆಡವಿದನು. ಅವ ಇಲ್ಲದಿದ್ದರೆ, ಸುಮ ತಿಯು ಉಳಿಯುತಿರಲಿಲ್ಲ. ರಾಣಿ-ತಾನು ಸುಮತಿಯನ್ನು ಅನ್ಯಾಯವಾಗಿ ದೂಷಿಸಿದ್ದ ಕ್ರಾಗಿ ನಾಚಿಕೊಂಡು) ಈಗ ಆ ಹುಡುಗ ಎಲ್ಲಿಹೋದ ? ಓಲೆಕಾರರು-ಅವನಿಗೆ ಏನೂ ಪೆಟ್ಟಾಗಲಿಲ್ಲ. ಆ ಸಿದ್ಧಿಯವ ನನ್ನು ಅವನು ಕರೆದುಕೊಂಡು ಹೋಗುತಿದ್ದುದನ್ನು ಕಂಡು ಬಂದೆವು. ಈ ಮಾತನ್ನು ಕೇಳಿ, ಅಲ್ಲಿದ್ದ ರಾಣಿವಾಸದವರೆಲ್ಲಾ, ಸ್ವಲ್ಪ ಹೊತ್ತಿಗೆಮುಂಚೆ ತಾವು ತಿರಸ್ಕರಿಸಿ ಮಾತನಾಡಿದ ಸುಮತಿಯನ್ನು ಆಗ ವಿಶೇಷವಾಗಿ ಕೊಂಡಾಡಲು ಮೊದಲುಮಾಡಿದರು. ಮದನನು ನಡೆದ ಸಂದರ್ಭವನ್ನೆಲ್ಲಾ ಸವಿಸ್ತಾರವಾಗಿ ಹೇಳಿದನು. ಆಗ ದೊರೆಯುಸುಮತಿಗೆ ಇಲ್ಲಿನ ಚರಗಳು ಸರಿಬೀಳದೆ ಅವನಿಗೆ ಅವಮಾನವಾದ್ದ ರಿಂದ, ಅವನು ಅಸಮಾಧಾನಪಟ್ಟು ಕೊಂಡು ಇಲ್ಲಿಂದ ಹೊರಟು ಹೋಗಿರಬೇಕು, ಮದನ, ಅಂಥಾ ಒಳ್ಳೆ ಹುಡುಗನನ್ನು ನೀನು ಹೊಡೆ ಯಬಹುದೆ ? ನಾಚಿಕೆ ಇಲ್ಲವೆ ? ಅವನು ನಿನಗೆ ಮಾಡಿದ ಉಪಕಾರಕ್ಕೆ ಇದೇಯೋ ಪ್ರತ್ಯುಪಕಾರ ? ಎಂದನು, ಆಗ ಮದನನು ತಲೆಬಾಗಿ ನಿಂತು, ಕಣ್ಣಿನಲ್ಲಿ ನೀರನ್ನು ಸುರಿಸುವುದಕ್ಕೆ ಮೊದಲು ಮಾಡಿದನು. ಮಗನು ಅಳುತಾ ಇರುವುದನ್ನು ನೋಡಿ ಸಹಿಸಲಾರದೆ ರಾಣಿಯು ಅವನನ್ನು ಸಮದಾಯಿಸಿ ಮುಟ್ಟಿಸುವುದಕ್ಕೆ ಹೊರಟಳು, ಪುನಃ ದೊರೆಯು- ಮಗನಮೇಲೆ ವಾತ್ಸಲ್ಯವನ್ನು ತೋರಿಸಿ ಅವನನ್ನು ಮುದ್ದಿ ಸುವುದಕ್ಕೆ ಇದು ಸಮಯವಲ್ಲ. ಅತ್ಯಂತ ನೀಚ ಕೃತ್ಯವನ್ನು ಮಾಡಿ ಇವನನ್ನು ಹೆತ್ತ ತಾಯಿತಂದೆಗಳಿಗೆ ಅವಮಾನವನ್ನು ತಂದಂಥಾ ಈ ಹುಡುಗನು ಅ೦ಥಾ ಅಭಿಮಾನಕ್ಕೆ ಪಾತ್ರನಲ್ಲ ; ಹೀಗೆಂದು ಹೇಳಿದ ದೊರೆಯ ಕಟುವಾದ ಮಾತಿನಿಂದ ರಾಣಿಗೆ' ನನಸು ಬಹಳವಾಗಿ ಕಲಕಿ ಹೋಯಿತು. ಅವಳು ಅಳುತ್ತಾ ಇದ್ದ ತನ್ನ ಮಗನನ್ನು ಒಳಕ್ಕೆ ಕರೆದುಕೊಂಡು ಹೊರಟುಹೋದಳು, ಮತ್ತು ಮದನನು ಸುಮತಿ ಯನ್ನು ಹೊಡೆಯುವುದಕ್ಕೆ ಉಂಟಾದ ಸಂದರ್ಭಗಳನ್ನೆಲ್ಲಾ ಕಣ್ಣಾರ