ಪುಟ:ಸಮತಿ ಮದನಕುಮಾರರ ಚರಿತ್ರ.djvu/೨೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೩ರಿ ಸುಮತಿ ಮದನ ಕುಮಾರರ ಚರಿತ್ರೆ [ಅಧ್ಯಾಯ ಕಂಡ ಒಬ್ಬ ಹುಡುಗನಿಂದ ಪುನಃ ಕೇಳಿ, ದೊರೆಯು ಮನಸ್ಸಿಗೆ ಹೆಚ್ಚಾದ ಖೇದವನ್ನು ಉಂಟುಮಾಡಿಕೊಂಡನು. ೨೦ ನೆ 'ಅಧ್ಯಾಯ ಹೀಗಿರುವಲ್ಲಿ ದೊರೆಯ ಅರಮನೆಗೆ ರಾಮಜೋಯಿಸನು ಅಕಸ್ಮಾತ್ತಾಗಿ ಒಂದು ದಿನ ಬಂದನು. ದೊರೆಮಗನ ನಡತೆಯಲ್ಲಿ ಈಚೆಗೆ ಉಂಟಾದ ಅನರ್ಥ ಯಾವುದೂ ಜೋಯಿಸನಿಗೆ ತಿಳಿದಿರಲಿಲ್ಲ. ಅವ ಬಂದ ಕೂಡಲೆ ದೊರೆಯು ತಕ್ಕ ಮರ್ಯಾದೆಯನ್ನು ತೋರಿಸಿ ಕೂರಿಸಿಕೊಂಡನು, ಆದರೆ ಅರಸನ ಮನಸ್ಸಿಗೆ ಏನೋ ಕಿ೦ಕೃತಿ ಯುಂಟಾಗಿದೆ ಎಂಬ ಭಾವವನ್ನು ತಿಳಿದು, ಅದಕ್ಕೆ ಮದನನೇ ಕಾರಣ ವಾಗಿರಬೇಕೆಂದು ಯೋಚಿಸಿ, ಜೋಯಿಸನು ಮುಖ್ಯವಾಗಿ ಆ ಹುಡು ಗನ ಯೋಗಕ್ಷೇಮವನ್ನು ವಿಚಾರಿಸಿದನು. ಆಗ ಅರಸು-ಸ್ವಾಮಿ, ನಾನು ಏನ ಹೇಳಲಿ, ಆ ಹುಡುಗನ ವಿಷಯದಲ್ಲಿ ನನಗಿದ್ದ ಆಸೆ ಯೆಲ್ಲಾ ಭಗ್ನ ವಾಯಿತು. ಈ ಚಿಗೆ ಅವ ಮಾಡಿದ ಒಂದೆರಡು ಕಾರ್ ಧಿಂದ ಅವನಲ್ಲಿ ಆಮೂಲವಾಗಿ ಕೆಟ್ಟ ಗುಣವೇ ತುಂಬಿದೆ, ಅಹಂಕಾರ ವಿಶೇಷವಾಗಿದೆ ಎಂದು ಹೇಳ ಬೇಕು.- ಹೀಗೆಂದು ಹೇಳಿ, ಮದನನ ನಡತೆಯನ್ನು ವಿವರಿಸಿ, ಅವನನ್ನು ಬೈದು, ತನ್ನ ಅದೃಷ್ಟವನ್ನು ಬೈದುಕೊಂಡನು. ಈ ಮಾತಿಗೆ ಜೋಯಿಸನು--ದೊರೆಯೆ, ನಿಮ್ಮ ಪುತ್ರನ ನಡತೆ ಬದಲಾಯಿಸಿರ: ನ್ನು ಕೇಳಿ ನನಗೂ ಸ್ವಲ್ಪ ಸಂಕಟವಾಯಿತು, ಆದರೆ ಸರಿಮಾಡುವುದಕ್ಕೆ ಆಗದ ಮರ್ಗುಣ ಯಾವುದೂ ಆತನಲ್ಲಿಲ್ಲ. ಕೆಟ್ಟ ದಾರಿಗೆ ಇಷ್ಟು ಸುಲಭವಾಗಿ ಬೀಳತಕ್ಕೆ ಸ್ವಭಾವವೇನೋ ಅಪಾಯ ಕರವಾದ್ದೇ ಹವುದು. ಆದರೆ ಈ ಕೆಟ್ಟ ತನ ನೀವು ಯೋಚಿಸುವ ಮಟ್ಟಗೆ ಅವನನ್ನು ಅವರಿಸಿಕೊಂಡಿದೆ ಎಂದು ನಾನು ನಂಬಿಲ್ಲ. ನಾವು ಅಂಗಸಾಧನೆಯನ್ನು ಮಾಡುವಾಗ್ಗೆ ಮೈ ಬಗ್ಗೆ ಬೇಕಾದರೆ, ಸ್ವಲ್ಪ ದಿವಸದ ಸಾಧಕ ಅಗತ್ಯವಷ್ಟೆ, ಬುದ್ಧಿಗೂ ಹಾಗೆಯೇ, ಅದು ಒಂದು ಮಾರ್ಗ