ಪುಟ:ಸಮತಿ ಮದನಕುಮಾರರ ಚರಿತ್ರ.djvu/೨೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ܐܘܦ ಸುಮತಿ ಮದನಕುಮಾರರ ಚರಿತ್ರೆ ೨44 ಹಿಡಿದು ಮುಂದಕ್ಕೆ ಎಳೆದುಕೊಂಡು ಅವನನ್ನು ಹೊಡೆಯುವುದಕ್ಕೆ ಮೊದಲುಮಾಡಿದನು. ಋಷಿಯು ಎಚ್ಚತ್ತು ನೋಡಿ ತನಗೆ ದೊಡ್ಡ ವಿಪತ್ತು ಬಂತೆಂದು ತಿಳಿದು, ಆ ದುಷ್ಟನನ್ನು ಕುರಿತು-ಎಲ ಪ್ರಾಣಿ, ನನ್ನ ನ್ನು ಯಾಕೆ ಹೊಡೆಯು ತೀಯೆ ? ನನ್ನ ಬಳಿಯಲ್ಲಿ ಒಂದು ಸೋರೇಬುರುಡೆ ಒಂದು ಕೌಪೀನ, ಇಷ್ಟು ಹೊರತು ಏನೂ ಇಲ್ಲ. ನನ್ನ ನ್ನು ಹೊಡೆಯುವುದರಿಂದ ನಿನಗೆ ಪಾಪಮಾತ್ರ ಸಂಭವಿಸುವುದು. ಮನುಷ್ಯನು ಲೋಕದಲ್ಲಿ ಒಳ್ಳೆ ಕೆಲಸವನ್ನು ಮಾಡಿದರೆ ಅವನಿಗೆ ಒಳ್ಳೆದಾಗುವುದು ; ಕೆಟ್ಟ ಕೆಲಸವನ್ನು ಮಾಡಿದರೆ ಕೆಟ್ಟ ದಾಗುವುದು. ಇದಕ್ಕೆ ನೀನೇ ದೃಷ್ಟಾಂತ. ನೀನೇನೋ ಸಮರ್ಥ ನೇ ಸರಿ, ಆದರೆ ಸಾಮರ್ಥ್ಯವನ್ನು ದುರ್ಮಾರ್ಗದಲ್ಲಿ ವೆಚ್ಚ ಮಾಡಿದೆ, ಆದ್ದರಿಂದ ಒಂದು ತುತ್ತು ಅನ್ನಕ್ಕೆ ಸಹಿತ ಗತಿ ಇಲ್ಲದವನಾಗಿದ್ದೀಯೆ. ಇಂಥಾ ಕಾಠ್ಯ ಗಳನ್ನೆ ನೀನು ಮುಂದಕ್ಕೂ ಮಾಡಿದರೆ ನಿನ್ನ ಪಾತಕವು ಇನ್ನೂ ಹೆಚ್ಚು ವುದು. ಇಂಥಾ ದಾರಿಯನ್ನೇ ಬಿಟ್ಟು ಒಳ್ಳೆತನವನ್ನು ಹಿಡಿ ; ಈ ವೂರನ್ನು ಬಿಟ್ಟು ಇನ್ನೊ೦ದುವೂರಿಗೆ ಹೋಗಿ ಅಲ್ಲಿ ಕೃಷಿಮಾಡಿ, ಈಗ ನಿನಗೆ ಇರುವ ಸಾಮರ್ಥ್ಯವನ್ನೆಲ್ಲಾ ಉಪಯೋಗಿಸು. ನೀನು ಶ್ರೇಯೋ ವಂತನಾಗಿ ಬದುಕುತೀಯೆ ; ಇತರರಿಗೂ ಉಪಕಾರವನ್ನು ಮಾಡು ತೀಯೆ. ಹೀಗೆಂದು ಮುನಿ ನುಡಿದನು, ಈ ಬುದ್ದಿವಾದವು ಪೋಲಕನ ಮನಸ್ಸಿಗೆ ಅಂಟಿತು. ಅವನು ಋಷಿಗೆ ನಮಸ್ಕಾರವನ್ನು ಮಾಡಿ ಆತ ನನ್ನು ಬಿಟ್ಟು ಮತ್ತೊಂದು ಊರಿಗೆ ಹೊರಟುಹೋದನು : ಅಲ್ಲಿ ಇವನು ಒಳ್ಳೆ ನಡತೆಯಿಂದ ದಿನಕ್ರಮೇಣ ಹಣವನ್ನು ಸಂಪಾದಿಸಿ ಸುಖವಾಗಿ ಬಾಳಿದನು. - ಹೀಗೆ ಕಥೆಯನ್ನು ಹೇಳಿ ಮುಗಿಸಿ, ರಾಮ ಜೋಯಿಸನು ನುಡಿ ದದ್ದು ಹೇಗೆಂದರೆ : ಅಯ್ಯಾ ದೊರೆಯೆ, ಹುಡುಗರು ಕೆಟ್ಟು ಹೋದರೆಂದು ನಿರಾಶೆ ಯಿಂದ ಸುಮ್ಮನೆ ಇರಬಾರದೆಂಬ ವಿಷಯವು ಈ ಕಥೆಯಿಂದ ಗೊತ್ತಾ ಯಿತಷ್ಟೆ ? ಯಾವ ಕೆಲಸವನ್ನು ಮಾಡುವುದಕ್ಕೆ ತಮಗೆ ಸಂಪೂರ್ಣ ವಾದ ಯೋಗ್ಯತೆ ಇದೆ ಎಂಬ ಸಂಗತಿ ಯಾರಿಗೂ ತಿಳಿಯದು.

15