ಪುಟ:ಸಮತಿ ಮದನಕುಮಾರರ ಚರಿತ್ರ.djvu/೨೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೩೪ ಸುಮತಿ ಮದನ ಕುಮಾರರ ಚರಿತ್ರ - [ಅಧ್ಯಾಯ ಒಬ್ಬೊಬ್ಬರಲ್ಲಿ ಒಂದೊಂದು ಯೋಗ್ಯತೆ ಇದ್ದೇ ಇರುವುದು. ಆದರೆ ಅದು ಬೂದಿಮುಚ್ಚಿದ ಕೆಂಡದಹಾಗೆ ಪ್ರಕಾಶಕ್ಕೆ ಬರದೇ ಆರುತ್ತೆ. ಸ್ವಭಾವವಾದ ಇಂಥಾ ಶಕ್ತಿಯನ್ನು ಹೊರಪಡಿಸುವಂತೆ ಮಾಡುವುದು ವಿದ್ಯಾ ವ್ಯಾಸಂಗ, ದುರ್ಮಾರ್ಗಕ್ಕೆ ತಿರುಗಿಸಿದರೆ ಕೆಟ್ಟ ಗುಣವೆನ್ನಿಸಿ ಕೊಳ್ಳತಕ್ಕ ಶಕ್ತಿಯೇ ಸನ್ಮಾರ್ಗಕ್ಕೆ ತಿರುಗಿಸಿದರೆ ಮಹಾಕಾರಗಳನ್ನು ನಿರ್ವಹಿಸತಕ್ಕ ಸದ್ಗುಣವಾಗುವುದು. ದೊರೆ-ಕೆಟ್ಟು ಹೋಗಿದ್ದ ಪೋಲಕನಿಗೆ ಋಷಿಯ ದೆಸೆಯಿಂದ ಹೇಗೆ ಬುದ್ದಿ ಬಂತೋ ಹಾಗೆಯೇ ನನ್ನ ಮಗನಿಗೆ ತಮ್ಮಿಂದ ಬುದ್ಧಿ ಬರಬೇಕಾಗಿದೆ. ತಮ್ಮ ಕೈಲಿ ಕೊಟ್ಟಿದ್ದೇನೆ, ಹೇಗಾದರೂ ಮಾಡಿ. ಆದರೆ ಈಗ ಅವನ ಸ್ಥಿತಿ ನೋಡಲಾಗಿ ಅವ ಹೇಗೆ ಯೋಗ್ಯನಾದನೆ ತಿಳಿಯದು. ಜೋಯಿಸ-ಅವನ ಬುದ್ದಿ ಹೇಗೆ ಇದೆಯೊ ಅದರ ಪ್ರಕಾರ ಆಗುವುದು. ಆದರೆ ಅವನು ಸ್ವಭಾವದಲ್ಲಿ ಒಳ್ಳೆತನ, ಔದಾರ್ಯ, ದಯಾರಸ ಇವುಗಳನ್ನು ಳ್ಳವನಾಗಿದ್ದಾನೆ. ಆಗಲೇ ಅವನು ಮಾಡಿದ ಕೆಟ್ಟ ಕೆಲಸಗಳಿಗಾಗಿ ಅವನಿಗೆ ನಾಚಿಕೆಹುಟ್ಟಿರಬೇಕು. ಪರೀಕ್ಷಿಸಿ ನೋಡೋಣ. ಹೀಗೆ ಹೇಳಿ ದೊರೆಯು ಜೋಯಿಸನನ್ನು ತನ್ನ ಅರಮನೆಯ ಅಂತಃಪುರಕ್ಕೆ ಕರೆದುಕೊಂಡು ಹೋದನು. ಅಲ್ಲಿ ಅರಸಿಯೇ ಮೊದ ಲಾದವರೆಲ್ಲರೂ ಆತನಿಗೆ ಬಹಳ ಮರ್ಯಾದೆಯನ್ನು ತೋರಿಸಿದರು. ಆದರೆ ಅರೆಗಳಿಗೆಗೆ ಮುಂಚೆ ಎಲ್ಲರೂ ಕೊಂಡಾಡುತಿದ್ದ ಮದನನಿಗೆ ಉಪಾಧ್ಯಾಯನನ್ನು ಕಂಡ ಕೂಡಲೆ, ಹಾವಿಗೆ ಗರುಡ ಪಚ್ಚೆ ಯನ್ನು ತೋರಿಸಿದಂತೆ ಆಯಿತು. ಆತನಿಗೆ ತಕ್ಕ ಮರ್ಯಾದೆಯನ್ನೇ ನೋ ಮಾಡಿದನು ; ಆತ ಕೇಳಿದ ಮಾತಿಗೆಲ್ಲಾ ಸದುತ್ತರವನ್ನು ಬಹು ವಿನಯವಾಗಿಯೇನೋ ಹೇಳಿದನು. ಆದರೆ ಅವನ ತಲೆಯು ಕೆಳಕ್ಕೆ ಬಗ್ಗೆ ಇತ್ತು, ಏನೋ ಒಂದು ಬಗೆಯ ವ್ಯಸನವೂ ಪಶ್ಚಾತ್ತಾಪವೂ ಅವನ ಮುಖದಲ್ಲಿ ತೋರಿಬರುತಿತ್ತು. ಇದನ್ನು ಕಂಡು ಜೋಯಿಸನು ಅರಸನನ್ನು ನೋಡಿ-ಮದನನಲ್ಲಿ ಇರುವ ಒಳ್ಳೆ ಗುಣಕ್ಕೆ ಜಾಗ್ರತೆ ಯಾಗಿ ದೃಷ್ಟಾ೦ತ ದೊರೆಯುವುದು ಎಂದು ರಹಸ್ಯವಾಗಿ ಹೇಳಿದನು.