ಪುಟ:ಸಮತಿ ಮದನಕುಮಾರರ ಚರಿತ್ರ.djvu/೨೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೩೬ ಸುಮತಿ ಮದನ ಕುಮಾರರ ಚರಿತ್ರೆ [ ಅಧ್ಯಾಯ ಒಬ್ಬರ ತಂಟೆಗೂ ಹೋಗುವುದಿಲ್ಲ. ತನ್ನ ತಂಟೆಗೆ ಯಾರಾದರೂ ಬಂದರೆ ಬಿಡುವುದಿಲ್ಲ. ಹೀಗೆ ಮಾತನಾಡು ತಿರುವ ಸಮಯದಲ್ಲಿ ಒಂದು ಹದ್ದು ಆ ಕಾಶ ದಿಂದ ಕೆಳಕ್ಕೆ ಬಂದು ಕೋಳಿಮರಿಯೊಂದನ್ನು ಎತ್ತಿಕೊಂಡು ಹಾರಿತು, ಕೂಡಲೆ ಹತ್ತಿರ ಕಾದುಕೊಂಡಿದ್ದ ಒಬ್ಬ ಹುಡುಗನು ತನ್ನ ಬಿಲ್ಲಿನಿಂದ ಒಂದು ಕಲ್ಲನ್ನು ಹೊಡೆಯಲು, ಹದ್ದು ಆ ಏಟನ್ನು ತಿಂದು ಕೆಳಕ್ಕೆ ಬಿದ್ದು ಮರಣಸಂಕಟದಿಂದ ಒದ್ದಾಡುತಿತ್ತು. ಮಲ್ಲ- ವಿಶೇಷವಾಗಿ ದುರಾಶೆಯುಳ್ಳ ಜನರ ಪಾಡೆಲ್ಲಾ ಕೊನೆಗೆ ಹೀಗೆಯೇಸರಿ, ಎಲ್ಲರಿಗಿಂತಲೂ ಹೆಚ್ಚಾಗಿ ತಾವು ಮೇಲಕ್ಕೆ ಏರ ಬೇಕೆಂದು ಯತ್ನ ಮಾಡುವಾಗ, ಏನೋ ಒಂದು ಬಿಟ್ಟು ಬಡಿದು ಅವರು. ಕೆಳಕ್ಕೆ ಬೀಳುತ್ತಾರೆ. ಹೊಲ್ಲ-ನಾನು ಗಗನಕ್ಕೆ ಹಾರಿ ಪ್ರಾಣವನ್ನು ಬಿಟ್ಟಾದರೂ ಬಿಟ್ಟೆನು ; ಇಲ್ಲಿ ಕೆಳಗೆ ಬಿದ್ದಿರಲಾರೆ. ಮಲ್ಲ-ನಮ್ಮ ಕಷ್ಟ ಸುಖಗಳೆರಡೂ ದೇವರ ಕೈಲಿದೆ. ನಿರಸ ರಾಧಿಗಳನ್ನು ಅನ್ಯಾಯವಾಗಿ ಹಿಂಸೆ ಮಾಡಿ ಮೇಲಕ್ಕೆ ಏರುವುದ ಕ್ಕಿಂತಲೂ, ಒಬ್ಬರ ಗೋಜಿಗೂ ಹೋಗದೆ ಕೆಳಗೆ ಬಿದ್ದಿರುವುದು. ಮೇಲು. ಹೀಗೆ ಇಬ್ಬರೂ ಮಾತನಾಡಿಕೊಂಡರು. ಮಲ್ಲನು ಯಾವಾಗಲೂ ನಿಧಾನಿಯಾಗಿ ಒಳ್ಳೆ ಕಾರ್ಯಗಳನ್ನು ಮಾಡುವುದರಲ್ಲಿಯೇ ಬುದ್ಧಿ ಯುಳ್ಳವನಾಗಿದ್ದನು, ಆದರೆ ಹೊಲ್ಲನು ಮರಗಳನ್ನು ಹತ್ತುತ್ತಾ, ಬೆಟ್ಟಗಳನ್ನು ಹತ್ತು ತಾ, ಅಲ್ಲಿಂದ ಧುಮುಕುತಾ, ಇವೇ ಮೊದಲಾದ ಅನೇಕ ಸಾಹಸ ಕಾರ್ಯಗಳನ್ನು ಮಾಡುವುದರಲ್ಲಿಯೇ ಬುದ್ದಿ ಯುಳ್ಳವ ನಾಗಿದ್ದನು. ಒಂದು ದಿನ ಕಾಡಿನಲ್ಲಿ ಹೋಗುತಿರುವಾಗ ಹೊಲ್ಲನಿಗೆ ಒ೦ದು ತೋಳನವರಿ ಸಿಕ್ಕಿತು, ಅವನು ಅದನ್ನು ಹಿಡಿದುಕೊಂಡು ಮನೆಗೆ ತಂದು ಅದನ್ನು ಸಾಕುತಾಬಂದನು. ಆ ತೋಳವು ದಿನಕ್ರಮ ದಲ್ಲಿ ದೊಡ್ಡದಾಗುತಾ ನೆರೆಹೊರೆಯವರ ಕುರಿಗಳನ್ನೂ ಮೇಕೆಗಳನ್ನೂ ಹಿಡಿದು ಕೊಲ್ಲುತಾ ಇತ್ತು. ಇಂಥಾ ಮೃತ್ಯುವನ್ನು ಸಾಕಿ ಎಲ್ಲರಿಗೂ