ಪುಟ:ಸಮತಿ ಮದನಕುಮಾರರ ಚರಿತ್ರ.djvu/೨೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೩೮ ಸುಮತಿ ಮದನ ಕುಮಾರರ ಚರಿತ್ರೆ [ಅಧ್ಯಾಯ ಗಟ್ಟಿ ಮುಟ್ಟಾಗಿದ್ದ ಇವನನ್ನು ಕಂಡು--ಎಲ' ಕುರುಬ, ಕುರಿಕಾಯು ವುದರಿಂದ ನಿನಗೆ ಬರುವುದೇನು ? ನಮ್ಮ ಜೊತೆಗೆ ಬಾ, ನೀನು ಬಲವಾಗಿದ್ದೀಯೆ. ಚೆನ್ನಾಗಿ ಯುದ್ಧ ಮಾಡಬಹುದು, ಕೊಳ್ಳೇ ಹೊಡೆದುಕೊಂಡು ಬರಬಹುದು, ನಿನ್ನ ಬಡತನವೆಲ್ಲಾ ಇದರಿಂದ ಹೋಗುವುದು ಎಂದರು, ಅದಕ್ಕೆ ಮಲ್ಲನು--ಸ್ವಾಮಿ, ನಮ್ಮ ತಂದೆ ತಾಯಿಗಳು ಬಹಳ ಮುದುಕರು, ಅವರನ್ನ ಬಿಟ್ಟು ಬಂದರೆ, ಸಾಲ ನೆಗೆ ಯಾರೂ ಇಲ್ಲದೆ ಅವರು ಕಾಡ ಪಾಲಾಗುವರು. ಇದೂ ಅಲ್ಲದೆ ನಿಮ್ಮ ದಂಡಿಗೆ ಬಂದು ಸೇರಿದರೆ, ನಿರಪರಾಧಿಗಳಾದ ಅನೇಕರನ್ನು ಕೊಲ್ಲಬೇಕು. ಅನೇಕರಿಗೆ ಹಿಂಸೆಕೊಡಬೇಕು. ಇದರಿಂದ ಪಾಪ ಸಂಭವಿಸುವುದು, ನನ್ನ ಕುರಿಯೇ ನನಗೆ ಸಾಕು ಎಂದನು. ಈ ಮಾತಿಗೆ ಕೋಪಗೊಂಡು ದಂಡಿನ ಭಟರು ದಪ್ಪವಾಗಿ ಬೆಳೆ ದಿದ್ದ ಅವನ ಒ೦ದೆರಡು ಕುರಿಗಳನ್ನು ಎತ್ತಿಕೊಂಡು ಹೋದರು, ಈ ತು೦ಟತನವನ್ನು ಕಂಡು ರೋಷದಿಂದ ಮಲ್ಲನು ಕೈಯಲ್ಲಿ ಒಂದು ಕಟ್ಟಿಗೆಯನ್ನು ಹಿಡಿದು-ನನ್ನ ಕುರಿಗಳನ್ನು ಬಿಟ್ಟು ಬದಲು ಮಾತ ನಾಡಿ, ಇಲ್ಲದಿದ್ದರೆ ನನ್ನ ಸಂಗಡ ಜಗಳಕ್ಕೆ ಬನ್ನಿ ಎಂದನು. ದಂಡಿ ನವರು ಇದನ್ನು ಲಕ್ಷ್ಯಮಾಡದೆ ಇರಲು, ಮಲ್ಲನು ತನ್ನ ದೊಣ್ಣೆ ಯನ್ನು ತಿರುಗಿಸುತ್ತಾ ಅವರ ಮೇಲೆ ಬಿದ್ದು, ಎಲ್ಲರಿಗೂ ಪೆಟ್ಟು ಮಾಡಿ ಕುರಿಯನ್ನು ಬಿಡಿಸಿಕೊಂಡದ್ದಲ್ಲದೆ ಅವರ ಸೇನಾಪತಿಯ ಸವಿಾಪಕ್ಕೆ ಹೋಗಿ, ನಡೆದ ಸಮಾಚಾರವನ್ನೆಲ್ಲಾ ತಿಳಿಸಿದನು. ಆಗ ಆ ಸೇನಾ ಪತಿಯು ತನ್ನ ಭಟರ ತುಂಟತನಕ್ಕಾಗಿ ಅವರನ್ನು ಶಿಕ್ಷಿಸಿ, ಮುಂದಕ್ಕೆ ಹೊರಟನು. ಹೀಗೆ ಅವರು ಮುಂದಕ್ಕೆ ಹೋಗುತಿರುವಾಗ, ಹೊಲ್ಲನು ಇವರನ್ನು ಕಂಡು ಬೆರಗಾದನು, ನಮ್ಮ ಜೊತೆಗೆ ಬರುತೀಯಾ ಎಂದು ಸೇನೆಯವರು ಅವನನ್ನು ಕೇಳಿದರು, ಹೊಲ್ಲನು ಆಗಲಿ ಎಂದು ಒಪ್ಪಿ ಅವರ ಸಂಗಡ ಹೊರಟನು. ಇವನು ಶತ್ರುಗಳನ್ನು ಕೊಲ್ಲುವುದರಲ್ಲಿಯೂ, ಗಡಿದುರ್ಗಗಳನ್ನು ಹಿಡಿಯುವುದರಲ್ಲಿಯೂ ವಿಶೇಷ ಪರಾಕ್ರಮವನ್ನು ತೋರಿಸಿದ ಕಾರಣ, ಇವನ ಖ್ಯಾತಿಯು