ಪುಟ:ಸಮತಿ ಮದನಕುಮಾರರ ಚರಿತ್ರ.djvu/೨೫೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೦] ಸುಮತಿ ಮದನ ಕುಮಾರರ ಚರಿತ್ರ ೨4೯ ದಿನೇ ದಿನೇ ಹೆಚ್ಚು ತ ಬಂತು. ಸ್ವಲ್ಪ ದಿವಸದಲ್ಲಿಯೇ ಇವನಿಗೆ ದೊಡ್ಡ ಸೇನಾಧಿಕಾರವಾಯಿತು. ಈ ಕಥೆಯನ್ನು ಉದ್ದಕ್ಕೂ ಕೇಳುತಾ ಇದ್ದ ಮದನನ ಕಣ್ಣಿನಲ್ಲಿ ನೀರು ಸುರಿಯುವುದಕ್ಕೆ ಮೊದಲಾಯಿತು, ಮಗು, ಯಾಕಪ್ಪಾ ಅಳುತೀಯೆ ? ಎಂದು ರಾಣಿಯು ಕೇಳಲು-ಅಮ್ಮಯ್ಯ, ನನಗೆ ಸುಮತಿಯ ಜ್ಞಾಪಕ ಬಂತು, ಸುಮತಿಗೆ ಈ ಮಲ್ಲನ ವಯಸ್ಸು ಬಂದರೆ, ಅವನೂ ಇವನ ಹಾಗೇ ಬಹು ಒಳ್ಳೆಯವನಾಗಿದ್ದಾನು, ಎಂದು ಮದನನು ಹೇಳಿದನು. ಆಗ ರಾಣಿಯು-ಯಾಕೆ ಹಾಗನ್ನು ತೀಯೆ ? ಹೋಲ್ಲ ಏನು ಕಡಮೆಯಾಗಿದಾನೆಯೆ ? ಸೈನ್ಯದಲ್ಲಿ ದೊಡ್ಡ ಅಧಿಕಾರವನ್ನು ಮಾಡುತಿದಾನಲ್ಲ ? ಎಂದಳು. ಮದನನು-ಅಮ್ಮಯ್ಯ, ಹಾಗಲ್ಲ, ಹೊಲ್ಲ ಎಂಥಾ ಪದವಿಯಲ್ಲಾದರೂ ಇರಲಿ, ಅದರಿಂದ ಬಂದ ಭಾಗ್ಯವೇನು ? ತಂದೆತಾಯಿಗಳಲ್ಲಿಯೂ, ದೇವರಲ್ಲಿಯೂ ವಿಶೇಷ ಭಕ್ತಿಯನ್ನಿಟ್ಟು ಕೊಂಡಿರುವಂಥಾ ಮಲ್ಲನು ಏನೂ ಅರಿಯದವ ನೆಂದು ಹಳಿಯಲಾಗದು. ಹೊಲ್ಲನ ಡಂಭನೆಲ್ಲಾ ಹಾಗಿರಲಿ, ಮಲ್ಲನೇ ಉತ್ತಮ, ನಾನು ಆ ಹೊಲ್ಲನ ಹಾಗೆ ಒಬ್ಬ ನೀಚ, ಹೀಗೆಂದು ಮಗ ಆಡಿದ ಮಾತನ್ನು ದೊರೆ ಕೇಳಿ, ಇಷ್ಟು ಜಾಗ್ರತೆಯಾಗಿ ಬುದ್ದಿ ಬಂತಲ್ಲಾ ಎಂದು ಸಂತೋಷ ಪಡುತಾ, ಅವ ನನ್ನು ಕುರಿತು-ಮಗು ನಿನ್ನ ತಪ್ಪು ನಿನಗೆ ತಿಳಿಯಿತಲ್ಲಾ, ನನಗೆ ಅಷ್ಟೇ ತೃಪ್ತಿಯಾಯಿತು, ಎಂದು ಹೇಳಿದನು. ಲಲಿತೆಯು ಕಥೆಯನ್ನು ಮುಂದಕ್ಕೆ ಓದಲು ಆರಂಭಿಸಿದಳು, ಹೇಗೆಂದರೆ :- ಮಲ್ಲನು ತನ್ನ ಕುರಿಹಿಂಡನ್ನು ಕರೆದುಕೊಂಡು ಹೋಗಿ, ಬೆಟ್ಟದ ಕಿಬ್ಬೆಯಲ್ಲಿ ಮೇಯಿಸುವ ಪದ್ಧತಿಯಿತ್ತು, ಅಲ್ಲಿನ ಹೊದರು ಗಳಲ್ಲಿಯೂ, ಗುಹೆಗಳಲ್ಲಿಯೂ, ಹುಲಿ, ಕಿರುಬ, ತೋಳ ಮುಂತಾದ ದುಷ್ಟ ಜಂತುಗಳು ಸೇರಿಕೊಂಡು, ಮೇಯುವುದಕ್ಕೆ ಬಂದ ಕುರಿಗಳಲ್ಲಿ ಯಾರೂ ಅರಿಯದಂತೆ ಒಂದೊಂದು ಕುರಿಯನ್ನು ಕಚ್ಚಿ ಕೊಂಡು ಓಡಿ ಹೋಗುತಿದ್ದವು. ಇಂಥಾ ಕೆಟ್ಟ ಮೃಗಗಳನ್ನು ಕೊಂದು, ಊರ ಜನಕ್ಕೆ ಉಪಕಾರಮಾಡುವುದರಲ್ಲಿ ಹೊರತು, ಮತ್ತೆ ಯಾವ ವಿಧವಾದ