ಪುಟ:ಸಮತಿ ಮದನಕುಮಾರರ ಚರಿತ್ರ.djvu/೨೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೦] ಸುಮತಿ ಮದನ ಕುಮಾರರ ಚರಿತ್ರೆ ೨೪೧ ಬಿಡಿಸಿಕೊಳ್ಳುವುದಕ್ಕೆ ಯತ್ನಿ ಸಲು ಹೊರಟನು. ಆದರೆ ಏನು ಪ್ರಯೋ ಜನ ? ಮಲ್ಲನ ಹತ್ತಿರ ಒಂದು ಆಯುಧವೂ ಇರಲಿಲ್ಲ. ಸಹಾಯಕ್ಕೆ ಮತ್ತೆ ಯಾರೂ ಇಲ್ಲ, ಸಿಪಾಯಿಗಳಾದರೊ ನೂರಾರು ಜನದ ಮೇಲಿ ದ್ದರು. ಆದಕಾರಣ ಇವರನ್ನು ಉಪಾಯದಿಂದ ಗೆಲ್ಲಬೇಕೆಂದು ಯೋಚಿಸಿ ತನ್ನ ಬಳಿ ಯಲ್ಲಿದ್ದ ಗುಂಡುಗೊಡಲಿಯಿಂದ ಮರದ ಕೊಂಬೆ ಗಳನ್ನು ಕಡಿದು ಅದಕ್ಕೆ ಬೆಂಕಿ ಹತ್ತಿಸಿದನು, ಆ ಎತ್ತರವಾದ ಸ್ಥಳದಲ್ಲಿ ಉರಿಯುತಿದ್ದ ಆ ಬೆಂಕಿಯ ಪ್ರಭೆಯು ಸುತ್ತಲೂ ಇದ್ದ ಬೆಟ್ಟ ಗುಟ್ಟದ ಮೇಲೂ, ಕಾಡುಗಿಡಗಳ ಮೇಲೂ ಬಿದ್ದು ಅದೆಲ್ಲಾ ಹೆಚ್ಚಾಗಿ ಬೆಳಕಾ ಯಿತು. ಅಕಸ್ಮಾತ್ತಾಗಿ ಏನಾದರೂ ಒಂದು ಸಂಗತಿ ಜರುಗಿದರೆ ಅದನ್ನು ಕಂಡು ಕೂಡಲೆ ಗಾಬರಿಯಿಂದ ಭಯ ಪಟ್ಟು ಎಲ್ಲಾ ಕೆಲಸ ವನ್ನೂ ಬಿಟ್ಟು ಬಿಡುವ ಸ್ವಭಾವವು ಯಾವಾಗಲೂ ಮನುಷ್ಯ ಸಾಮಾನ್ಯ ರಲ್ಲಿ ಇದೆ ಎಂದು ತಿಳಿದಿದ್ದ ಮಲ್ಲನು ಸುತ್ತಲೂ ಪರ್ವತಗಳಿಂದ ಆವೃತವಾದ ಒಂದು ಜಾಗದಲ್ಲಿ ನಿಂತು ತನ್ನ ಕೈಲಾದಮಟ್ಟಿ ಗೂ ಗಟ್ಟಿ 'ಯಾಗಿ ವಿಧ ವಿಧವಾಗಿ ಕೂಗಿಕೊಂಡನು. ಹೊಳಲು ಕೊಡು ತಿದ್ದ ಆ ಸ್ಥಳದ ಸ್ವಭಾವದಿಂದ ಈ ಕೂಗು ಸುತ್ತಲೂ ಬಹಳ ದೂರಕ್ಕೆ ಅತಿ ಯಾಗಿ ಕೇಳಿಸಿತು, ವಿಪರೀತವಾದ ಈ ಬೆಂಕಿಯ ಪ್ರಕಾಶವನ್ನು ಕಂಡು ಈ ಗದ್ದಲವನ್ನು ಕೇಳಿ ಗಾಬರಿಪಟ್ಟಿದ್ದ ಆ ಸಿಪಾಯಿಗಳು ಭಯದಿಂದ ದಿಕ್ಕೆಟ್ಟು ಕಿತ್ತು ಮುರಿದು ಓಡಿ ಹೋದರು. ಇದೆಲ್ಲವನ್ನೂ ದೂರದಲ್ಲಿ ನಿಂತು ನೋಡುತಿದ್ದ ಮಲ್ಲನು ಆ ಮುದುಕನ ಹತ್ತಿರ ಹೋಗಿ ಆತನನ್ನೂ ಆ ಯುವತಿಯನ್ನೂ ಎತ್ತಿ ಕೊಂಡು ನಿರ್ಭಿತಿಯಾದ ಒಂದು ಸ್ಥಳಕ್ಕೆ ಹೋಗಿ ಅಲ್ಲಿ ಕೂತುಕೊಂ ಡನು. ಆಗ ಮುದುಕನು ಮಲ್ಲನನ್ನು ಕುರಿತು-ಅಯ್ಯಾ, ನೀನು ಯಾರು, ಯಕ್ಷನೋ, ಕಿನ್ನರನೋ, ಕಿಂಪುರುಷನೋ, ಸಿದ್ದನೋ, ರಾಕ್ಷಸನೊ ಪಿಶಾಚವೊ, ಅಥವಾ ಮನುಷ್ಯನೊ ? ನೀನು ಯಾರೋ ನಾನರಿಯೆ, ಮಹತ್ತಾದ ಅಪಾಯದಲ್ಲಿ ಸಿಕ್ಕಿದ ನಮಗೆ ಪಂಚ ಪ್ರಾಣವೂ ಹೋಗಿತ್ತು. ನಮ್ಮಿಬ್ಬರ ಮರಣವು ಗಳಿಗೆಯೋ ಕ್ಷಣವೋ ಎನ್ನುವ ಹಾಗಿತ್ತು, ಹೀಗೆ ಮೃತ್ಯುವಿನ ದವಡೆಯಲ್ಲಿ ಸಿಕ್ಕಿ ಕೊಂಡಿದ್ದ ನಮ್ಮನ್ನು