ಪುಟ:ಸಮತಿ ಮದನಕುಮಾರರ ಚರಿತ್ರ.djvu/೨೫೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೪೨ ಸುಮತಿ ಮದನ ಕುಮಾರರ ಚರಿತ್ರೆ [ಅಧ್ಯಾಯ ಬಿಡಿಸಿಕೊಂಡು ಬಂದ ನಿನ್ನ ಪರಾಕ್ರಮವನ್ನು ಕೊಂಡಾಡಲೆ ! ದಿಕ್ಕಿ ಲ್ಲದ ನಮಗೆ ಪ್ರಾಣದಾನವನ್ನು ಮಾಡಿದ ನಿನ್ನ ದಯಾರಸವನ್ನು ಕೊಂಡಾಡಲೆ ! ನಿನಗೆ ನಾವು ಹೇಗೆತಾನೆ ಪ್ರತ್ಯುಪಕಾರವನ್ನು ಮಾಡಿ ಯೇವು ? ಎಂದನು. ಆಗ ನಲ್ಲನು-ತಾತ, ಅಕಸ್ಮಾತ್ತಾಗಿ ನಡೆದ ಕಾರ್ಯನಿರ್ವಾಹವು ಅಲ್ಪ ನಾದ ನನ್ನಿ೦ದಾಯಿತು ಎಂದು ತಾವು ಹೇಳುವ ಮಾತು ಪ್ರೇಮದಿಂದ ಬರುವ ಮಾತಾಗಿದೆ ಎಂದು ಹೇಳಿ ಅವರನ್ನು ಕರೆದುಕೊಂಡು ಮುಂದಿನ ಊರಿಗೆ ಹೋಗಿ ಅಲ್ಲಿ ಆ ಮಾರನೇ ದಿನ ತಂಗಿದ್ದು ಭೋಜನಾದಿಗಳು ಆದನಂತರ ಆ ವೃದ್ದ ನನ್ನು ಕುರಿತು ತಾತ, ತಮಗೆ ಇಂಥಾ ವಿಪತ್ತು ಯಾಕೆ ಬಂತು ಎಂದನು, ಆಗ ಮುದುಕನು ತನ್ನ ಕಥೆಯನ್ನು ಹೇಳಿಕೊಂಡಿದ್ದು ಹೇಗೆಂದರೆ :- ಚಾರುದತ್ತ ಅವನ ಮಗಳು ಅಯ್ಯಾ ಮಗು, ಕೇಳು, ನಾನು ಅಲ್ಪ, ಆದಾಗ್ಯೂ ನಮಗೆ ಪ್ರಾಣದಾನವನ್ನೆ ಮಾಡಿದ ನಿನ್ನಂಥಾ ಮಹಾಪುರುಷನ ಮಾತನ್ನು ಇಷ್ಟರಮಟ್ಟಿಗೆ ನಡೆಸಿಕೊಡಲಾರೆನೆ ? ಹೇಳುತ್ತೇನೆ ಕೇಳು. ನನ್ನ ಹೆಸರು ಚಾರುದತ್, ಸಿಂಧು ದೇಶದ ಒಂದು ರೇವು ಪಟ್ಟಣದಲ್ಲಿ ನಾನು ಹುಟ್ಟಿದ್ದು, ನಮ್ಮ ತಂದೆಯು ಬಹು ದೊಡ್ಡ ವರ್ತಕ. ನನ್ನ ಚಿಕ್ಕ ವಯಸ್ಸಿನಲ್ಲಿಯೇ ತಾಯಿತಂದೆಗಳು ಇಬ್ಬರೂ ದೈವಾಧೀನರಾದ್ದರಿಂದ, ಲೋಕವ್ಯವಹಾರದಲ್ಲಿ ನನಗೆ ಬಹಳವಾಗಿ ಅಸಹ್ಯ ಹುಟ್ಟಿ ದೇಶಾಟನ ಮಾಡಬೇಕೆಂದು ನಾನು ಹೊರಟೆನು, ನಮ್ಮ ತಂದೆಯು ಬಹು ಸಮರ್ಥನಾಗಿದ್ದನು. ವಿದ್ಯಾ ವ್ಯಾಸಂಗವನ್ನು ಮಾಡುತ್ತಾ ಗ್ರಂಥಗಳಲ್ಲಿ ಕಾಲವನ್ನು ಕಳೆಯಬೇಕೆಂಬ ಆಶೆಯು ನನಗೆ ಆತನಿಂದಲೇ ಉಂಟಾದ್ದು, ಆತನ ಅಪರಿಮಿತವಾದ ಐಶ್ವರ್ಯವು ನನ್ನ ದೇಶಾಟ ನೆಗೆ ಸಹಾಯಕಾರಿಯಾಯಿತು. ಮೊದಲು ನಾನು ಮಿಸರ್ ದೇಶಕ್ಕೆ ಹೋದೆನು, ಪಾಂಡಿತ್ಯಕ್ಕೂ ಸಮಸ್ತ ಕುಶಲ ವಿದ್ಯೆಗಳಿಗೂ ಆ ದೇಶವು ಪೂರ್ವದಿಂದಲೂ ನೆಲೆ ಎಂದು ಖ್ಯಾತಿಗೊಂಡಿತ್ತು, ಅಲ್ಲಿ ಉತ್ತಮವಾದ ನೀಲನದಿಯು ಹರಿ