ಪುಟ:ಸಮತಿ ಮದನಕುಮಾರರ ಚರಿತ್ರ.djvu/೨೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೪೪ ಸುಮತಿ ಮದನ ಕುಮಾರರ ಚರಿತ್ರೆ [ಅಧ್ಯಾಯ ನೀರ ಕುಡಿದು ಬಾಯಿಯನ್ನು ತೇವಮಾಡಿಕೊಂಡರೂ ದಾಹ ಅಡಗ ಲಿಲ್ಲ, ಸಾಯಂಕಾಲದ ಹೊತ್ತಿಗೆ ಒಂದು ತಿಟ್ಟಿನ ಹತ್ತಿರ ಡೇರಾ ಹಾಕಿ ಇಳಿದುಕೊಂಡೆವು. ಅಲ್ಲಿ ಆ ರಾತ್ರೆ ತ೦ಗಿದ್ದು ಮಾರನೇ ದಿನ ಬೆಳಗ್ಗೆ ಹೊರಟೆವು. ಸ್ವಲ್ಪ ದೂರ ಹೊರಟ ಕೂಡಲೆ ಧೂಳು ಕಾಣಿ ಸಿತು, ಕೂಡಲೆ ಅರಬ್ಬರ ಒಂದು ಗುಂಪು ನಮ್ಮೆದುರಿಗೆ ಬಂತು. ಅವರೆಲ್ಲರೂ ಆಯುಧಪಾಣಿಗಳಾಗಿದ್ದರು. ಅವರೆಲ್ಲರೂ ಹತ್ತಿಕೊಂಡು ಬರುತಿದ್ದ ಉತ್ತಮವಾದ ಕುದುರೆಗಳು ಜಿಂಕೆಗಳ ಹಾಗೆ ಓಡಿ ಬರುತಿ ದ್ದವು. ಇವರು ಯುದ್ಧಕ್ಕಾಗಿಯೇ ಬಂದರು. ಆದರೆ ನಾವುಗಳು ಯಾವ ದುರಭಿಪ್ರಾಯವೂ ಇಲ್ಲದೆ ಸುಮ್ಮನೆ ಹೋಗುತಿರುವುದನ್ನು ಕಂಡು ಅವರು ಸ್ವಲ್ಪ ಹಿಂತೆಗೆದರು. ಅವರಲ್ಲಿ ಮುಖಂಡನಾಗಿ ತೋರಿದ ಒಬ್ಬ ಪುರುಷನು ನನ್ನನ್ನು ಕುರಿತು, ನೀವು ಯಾರು ? ಎಲ್ಲಿಗೆ ಹೋಗುತೀರಿ ? ಎಂದು ಕೇಳಿದನು. ಅರಬ್ಬಿ ಭಾಷೆಯನ್ನು ಸ್ವಲ್ಪ ಅಭ್ಯಾಸಮಾಡಿದ್ದ ನಾನು ನಮಗೆ ಯಾವ ವಿಧವಾದ ಕೆಟ್ಟ ಮನಸೂ ಇಲ್ಲ. ಸುಮ್ಮನೆ ದೇಶವನ್ನು ನೋಡಿಕೊಂಡು ಹೋಗು ವುದಕ್ಕಾಗಿ ಬಂದೆನೆಂದು ಹೇಳಿದೆ. ಆಗ ಅವನು ನನ್ನ ಮುಖವನ್ನು ದೃಷ್ಟಿಸಿ ನೋಡುತ್ತಾ ನನ್ನಲ್ಲಿ ಏನೋ ಸುಗುಣವನ್ನು ಕಂಡವನಂತೆ, ನನ್ನಲ್ಲಿ ದಯವನ್ನು ಸೂಚಿಸುವನಹಾಗೆ ಹಸನ್ಮುಖಿಯಾಗಿ, ನನ್ನ ಕೈ ಹಿಡಿದುಕೊಂಡು ಹೇಳಿದ್ದೇನೆಂದರೆ :- ಅಣ್ಣಯ್ಯ, ನೀನು ಭಯಪಡತಕ್ಕದ್ದಿಲ್ಲ. ನಮ್ಮಲ್ಲಿಗೆ ಅತಿಥಿ ಯಾಗಿ ಬಂದಮೇಲೆ ನೀನೂ ನನಗೆ ಸಮಾನನೇ ಸರಿ, ನಾವು ವರಟು ಜನರೆಂಬುದೇನೋ ನಿಜ, ಆದರೆ ಇತರ ಕಡೆ ಇರುವಂತೆ ನಮ್ಮಲ್ಲಿ ದ್ರೋಹವಿಲ್ಲ, ಧೈರ್ಯವಾಗಿರು. ಹೀಗೆಂದು ಹೇಳಿದ ಕೂಡಲೆ, ಆ ಗುಂಪಿನ ಜನರೆಲ್ಲರೂ ಬಂದು ನನ್ನೆದುರಿಗೆ ನಿಂತು, ನಾನು ಅವರ ದೊರೆಯೋ ಎನ್ನುವ ಹಾಗೆ ನನಗೆ ಸಲಾಂಮಾಡಿದರು. ಕೊನೆಗೆ ಅವರ ಮುಖಂಡನೋ ಅಥವಾ ದೊರೆಯೋ ಆಗಿದ್ದ ಪುರುಷರು ಮರ್ಯಾದೆಯಿಂದ ನನ್ನನ್ನು ಕರೆದುಕೊಂಡು ಹೋಗಿ ಅವರ ಪಾಳಯ ದಲ್ಲಿ ಇಳಿಸಿಕೊಂಡನು. ರೊಟ್ಟಿ, ಮಾಂಸ, ಹಣ್ಣು ಗಳು ಇವುಗಳನ್ನು