ಪುಟ:ಸಮತಿ ಮದನಕುಮಾರರ ಚರಿತ್ರ.djvu/೨೬೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

[೨೦ ಸುಮತಿ ಮದನ ಕುಮಾರರ ಚರಿತ್ರೆ ೨೪೫ ನನಗಾಗಿ ತಂದಿಟ್ಟರು, ಅವರ ರೊಟ್ಟಿ ಮಾಂಸಗಳನ್ನು ಬಿಟ್ಟು ನನ್ನ ರೊಟ್ಟಿ ಯನ್ನೂ ಅವರ ಹಾಲು ಹಣ್ಣು ಗಳನ್ನೂ ನಾನು ತೆಗೆದುಕೊಂಡು ವಿಶ್ರಮಿಸಿಕೊಂಡೆ. ಅವರ ಆದರವನ್ನು ನಾನು ಕೈಗೊಳ್ಳು ತಾ ಅಲ್ಲಿಯೇ ಕೆಲವು ದಿವಸಗಳನ್ನು ಕಳೆದೆ, ಆ ದೇಶದಲ್ಲಿ ಉಷ್ಣ ಹೆಚ್ಚು, ಸೂರ್ಯನ ವೇಗವನ್ನು ಸಹಿಸುವುದಕ್ಕೆ ಆಗುವುದೇ ಇಲ್ಲ. ಭೂಮಿಯೆಲ್ಲಾ ಬರೀ ಮರಳು, ನೆಲವನ್ನು ಉಳುವುದೇ ಇಲ್ಲ, ಬಿತ್ತನೆಯನ್ನು ಬಿತ್ತುವುದೇ ಇಲ್ಲ. ಖರ್ಜೂರ ಮೊದಲಾದ ಒ೦ದೆರಡು ಹಣ್ಣು ಗಳು ವಿನಾ ಮತ್ತೆ ಯೇನೂ ಈ ಸೀಮೆಯಲ್ಲಿ ಬೆಳೆಯುವುದೇ ಇಲ್ಲ, ಕುರಿ, ಒಂಟಿ, ಕುದುರೆ ಇವುಗಳನ್ನು ಸಾಕುವುದು, ಕೆಲವು ವ್ಯಾಪಾರ ಮಾಡು ವುದು, ಇದೇ ಇಲ್ಲಿನ ಜನರ ವೃತ್ತಿ, ಹೋಕೆಯನ್ನು ಅರಿಯಲೇ ಅರಿಯರು, ಶಾಂತವಾಗಿದ್ದರೆ ದೇವತೆಗಳಿಗೆ ಸಮಾನರಾಗಿರುವರು. ಕೋಪ ಬಂದರೆ ದೊಡ್ಡ ರಾಕ್ಷಸರಿಗಿಂತಲೂ ಕಡೆಯಾಗುವರು. ನಾನು ಅಲ್ಲಿರುವಾಗ ನೆರೆ ರಾಜ್ಯದ ಒಬ್ಬ ರಾಯಭಾರಿಯು | ಅಲ್ಲಿಗೆ ಬಂದು ದೊರೆಯನ್ನು ಕಂಡನು. ತರುವಾಯ ತಮ್ಮ ದೊರೆಯ ಐಶ್ವರ್ಯವನ್ನೂ ಡಂಭವನ್ನೂ ಅವನ ಚತುರಂಗಗಳನ್ನೂ ಅವನ ಸರಾ ಕ್ರಮವನ್ನೂ ವಿಶೇಷವಾಗಿ ವಿವರಿಸಿ ಅಂಥಾ ದೊರೆಗೆ ಅಧೀನ. ವಾಗಿದ್ದು ಕೊಂಡು ಆತನ ಸಂರಕ್ಷಣೆಯನ್ನು ಪಡೆದು ಆತನಿಗೆ ಕಪ್ಪ ವನ್ನು ಕೊಡುತಾ ಸುಖವಾಗಿರಬಹುದು, ಎಂದು ವಿಸ್ತಾರವಾಗಿ ಅರಿಕೆ ಮಾಡಿಕೊಂಡನು. ಡಂಭ ಎಂಬುದನ್ನೆ ಅರಿಯದ ಅರಬ್ಬರ ದೊರೆಯು ತನ್ನ ಡೇರೆಯ ಬಾಗಿಲಲ್ಲಿ ಕಾಲಮೇಲೆ ಕಾಲನ್ನು ಹಾಕಿಕೊಂಡು ಕೂತು ಕೊಂಡಿದ್ದನು, ಆ ರಾಯಭಾರಿಯ ಮಾತನ್ನು ಕೇಳಿ ಆತನ ಪರಿವಾರ ವೆಲ್ಲಾ ಕಿಡಿ ಕಿಡಿಯಾಯಿತು, ಆದರೆ ದೊರೆಯು ಕೋಪಗೊಳ್ಳದೆ. ನಿಧಾನವಾಗಿ ಆ ರಾಯಭಾರಿಯನ್ನು ಕುರಿತು ಆಡಿದ ಮಾತಿನ ಸರಣಿ ಹೇಗೆಂದರೆ :- ಅಯ್ಯಾ, ವೃದ್ಧನಾಗಿಯೂ ವಿವೇಕಶಾಲಿಯಾಗಿಯೂ ಇರುವ ನೀನು ಬೇರೆ ಕೆಲಸಕ್ಕಾಗಿ ನಮ್ಮಲ್ಲಿಗೆ ಬಂದಿದ್ದರೆ ನಿನ್ನ ಸಾಮರ್ಥ್ಯಕ್ಕೂ