ಪುಟ:ಸಮತಿ ಮದನಕುಮಾರರ ಚರಿತ್ರ.djvu/೨೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೪1 ಸುಮತಿ ಮದನ ಕುಮಾರರ ಚರಿತ್ರೆ [ಅಧ್ಯಾಯ ನಿಮ್ಮ ದೊರೆಯ ಐಶ್ವರ್ಯಕ್ಕೂ ತಕ್ಕಂತೆ ಮರ್ಯಾದೆ ದೊರೆಯು ತಿತ್ತು, ನಿಮ್ಮ ದೊರೆಯ ಹತ್ತಿರಿರುವ ಚಿನ್ನ ಬೆಳ್ಳಿ ಜವಾಹಿರು ನಮ್ಮ ಇಲ್ಲ, ಆದರೆ ಪರಾಕ್ರಮವೆಂಬ ಐಶ್ವರ್ಯ ಮಾತ್ರ ನಮ್ಮವರಲ್ಲಿದೆ. ಅರಬ್ಬರಾದ ನಾವುಗಳು ಈ ದೇಶ ಹುಟ್ಟಿದಾಗಿನಿಂದ ಇದುವರೆಗೆ ಯಾರಿಗೂ ಅಧೀನರಾಗಿರಲಿಲ್ಲ. ಮುಂದಕ್ಕೂ ಹೀಗೆಯೇ, ನಿಮ್ಮ ರಾಜನಿಗೆ ಈ ವಿಷಯವನ್ನು ತಿಳಿಸಬೇಕು, ನಿನ್ನ ಮುಖಾಂತರ ಅ೦ಬು ಬಿಲ್ಲನ್ನು ಹೊರತು ಮತ್ತೇನನ್ನೂ ನಸರಾಗಿ ಕಳುಹಿಸಲಾರೆವು. ಒಂದು ಪಕ್ಷದಲ್ಲಿ ನಮ್ಮನ್ನು ನೀವು ಜಯಿಸಿದಾಗ್ಯೂ ಈ ದೇಶದಿಂದ ನಿಮಗೆ ಪ್ರಯೋಜನವೇನೂ ಇಲ್ಲ. ನಮಗೆ ಶತ್ರುಗಳಾಗಿ ಬಂದವರು ನಮ್ಮ ಅಂಬಿನ ಪೆಟ್ಟಿಗೆ ತಲೆಯನ್ನು ತಪ್ಪಿಸಿಕೊಂಡರೂ, ಏನೂ ಸಿಕ್ಕದ ಈ ನಾಡಿನಲ್ಲಿ ಹಸಿವು ಬಾಯಾರಿಕೆಯಿಂದ ಪ್ರಾಣವನ್ನು ಬಿಡಬೇಕಾಗು ವುದು. ಇದು ಖಂಡಿತವೆಂದು ನಿಮ್ಮ ಅರಸನಿಗೆ ಅರಿಕೆಮಾಡು, ಇದಕ್ಕೆ ಮಲ್ಲನು- ಈ ಜನದ ಬಾಳು ಎಂಥಾ ಉತ್ತಮವಾದ್ದು ! 'ಯಾವ ವೀರನೂ ಇವರ ಮುಂದೆ ಹಾಯಲಾರ, ನಮ್ಮ ದುರ್ನಡ ತೆಯೇ ನಮ್ಮನ್ನು ಮತ್ತೊಬ್ಬರಿಗೆ ಅಡಿಯಾಳಾಗಿ ಮಾಡುವುದೇ ಅಲ್ಲದೆ ಮತ್ತೆ ಯಾವುದೂ ಅಲ್ಲ. ಚಾರುದತ್ತ- ಈ ಜನರ ವಿಷಯದಲ್ಲಿ ನಾನು ಪಟ್ಟ ಅಭಿಪ್ರಾ ಯವೂ ನಿನ್ನ ಅಭಿಪ್ರಾಯವೂ ಒಂದೇ ಆಗಿದೆ, ನನ್ನ ತಿಳಿವಳಿಕೆ ಈ ಭಾಗದಲ್ಲಿ ಸರಿಯಾದ್ದು ಹವುದೋ ಅಲ್ಲವೋ ತಿಳಿದುಕೊಳ್ಳೋಣವೆಂದೇ ಆ ದೇಶದ ಸ್ಥಿತಿಯನ್ನು ಸ್ವಲ್ಪ ವಿವರಿಸಿ ಹೇಳಿದೆ. ದುರ್ನಡತೆಯು ದೇಶಗಳನ್ನು ಹಾಳುಮಾಡಿದೆ. ಚಕ್ರಾಧೀಶ್ವರರನ್ನು ಸಿಂಹಾಸನದಿಂದ ಉರುಳಿಸಿದೆ, ನಮ್ಮ ನಡತೆ ಒಳ್ಳೇದಾಗಿದ್ದರೆ ನಮ್ಮನ್ನು ಯಾರೂ ಜಯಿಸಲಾರರು | ಇದುವರೆಗೂ ಈ ಕಥೆಯನ್ನು ಕೇಳುತಾ ಇದ್ದು ಸಾಕಾಗಿ ಕೊನೆಗೆ ತಡೆಯಲಾರದೆ ಮದನನು ರಾಮಜೋಯಿಸನನ್ನು ಕುರಿತು, ಮ-ಜೋಯಿಸರೆ, ನಾನು ಒಂದು ಸಂಗತಿಯನ್ನು ಕೇಳಬೇಕು. ಜೋ-ನಿನಗೆ ಮನಸ್ಸು ಬಂದದನ್ನು ಕೇಳು.