ಪುಟ:ಸಮತಿ ಮದನಕುಮಾರರ ಚರಿತ್ರ.djvu/೨೬೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೦] ಸುಮತಿ ಮದನ ಕುಮಾರರ ಚರಿತ್ರೆ ೨೪೭ ಮ-ಬಡವರು ಭಾಗ್ಯವಂತರಿಗಿಂತ ಗುಣಾಢರಾಗಿಯೂ, ಧೈಯ್ಯ ಶಾಲಿಗಳಾಗಿಯೂ, ಉತ್ತಮರಾಗಿಯೂ ಇದಾರೆಂದು ಈ ಕಥೆಗಳಿಂದ ತೋರಿಬರುವುದು. ಜೋ-ಒ೦ದೊ೦ದು ವೇಳೆ ಹೀಗಿರುವುದು ನಿಜ. ಮ -ಇತರ ಕಡೆಯಲ್ಲಿರುವ ಹಾಗೆಯೇ ಇಲ್ಲಿಯೂ ಯಾಕೆ ಇರ ಬಾರದು ? ಈ ದೇಶದಲ್ಲಿರತಕ್ಕ ಬಡವರೆಲ್ಲಾ ಭಾಗ್ಯವಂತರಿಗಿಂತಲೂ ಉತ್ತಮರೊ ? ಜೋ-ನೀನು ಹೀಗೆ ತಿಳಿದುಕೊಂಡು ಇದ್ದೀಯೆ ಎಂದು ನಾನು ಯೋಚಿಸುತೇನೆ. ಯಾಕೆಂದರೆ ಯಾವ ಕೆಲಸವಾಗಬೇಕಾದರೂ ನೀನು ಬಡವರಿಗೆ ಹೇಳುತೀಯಲ್ಲದೆ ಭಾಗ್ಯವಂತರಿಗೆ ಹೇಳುವುದಿಲ್ಲ. - ಮ - ಹವುದು. ಆದರೆ ಈ ಸಂಗತಿ ಬೇರೆ, ಭಾಗ್ಯವಂತರಿಗೆ. ಮಾಡಿ ಅಭ್ಯಾಸವಿಲ್ಲದ ಅನೇಕ ಕೆಲಸಗಳನ್ನು ಬಡವರಿಗೆ ಮಾಡಿ ಅಭ್ಯಾಸವುಂಟು. ಜೋ-ಅಂಥಾ ಕೆಲಸಗಳು ಉಪಯುಕ್ತವಾಗಿವೆಯೆ ಇಲ್ಲವೆ ? ಮ-ಬಡವರು ಮಾಡುವ ಅನೇಕ ಕೆಲಸಗಳು ಉಪಯುಕ್ತ ವಾದವುಗಳೇ ಸರಿ. ಅವರು ನೆಲವನ್ನು ಉಳುತಾರೆ, ಬೆಳೆ ಬೆಳೆಯು ತಾರೆ, ಕಬ್ಬಿಣ ಕೆಲಸವನ್ನು ಮಾಡುತ್ತಾರೆ, ಅಡಿಗೆ ಮಾಡುತಾರೆ, ಬಟ್ಟೆ ನೇಯುತಾರೆ, ಅದನ್ನು ಒಗೆಯುತಾರೆ, ದನ ಕಾಯುತಾರೆ, ಹಾಲಕರೆ ಯುತಾರೆ, ಮುಖ್ಯವಾಗಿ ನಮ್ಮ ಸೌಖ್ಯಕ್ಕೆ ಬೇಕಾದ ಅನೇಕ ಕಾರ್ಯ ಗಳನ್ನು ಮಾಡತಕ್ಕವರು ಅವರೇ, ಜೋ- ಏನು, ಬಡವರು ಇದೆಲ್ಲವನ್ನೂ ಮಾಡುತಾರೆಯೆ ? ಮ-ಹವುದು, ಅವರು ಮಾಡದಿದ್ದರೆ ಮತ್ತೆ ಯಾರು ಮಾಡು ವವರು ? ನೇಗಿಲ ಹಿಡಿದು ಉಳುವುದು, ಚಮ್ಮಟಿಗೆ ಹಿಡಿದು ಬಡಿಯು ವುದೂ, ಮಣ್ಣ ತುಳಿದು ಗೋಡೆಹಾಕುವುದೂ, ಇದೆಲ್ಲಾ ಭಾಗ್ಯವಂತರಿಗೆ ಮಾನವೊ ? ಜೋ-ಕೆಲವು ದಿವಸಗಳ ಕೆಳಗೆ ನಮ್ಮ ತೋಟದಲ್ಲಿ ನೀನು ಒಂದು ಗುಡಿಸಲನ್ನು ಕಟ್ಟಲಿಲ್ಲವೆ ?