ಪುಟ:ಸಮತಿ ಮದನಕುಮಾರರ ಚರಿತ್ರ.djvu/೨೬೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೦] ಸುಮತಿ ಮದನಕುಮಾಗರ ಚರಿತ್ರೆ ೨೪೯ ಗಳನ್ನು ಕೊಂಡುಕೊಳ್ಳು ವುದರಿಂದ ಅವರಿಗೆ ಹಣವನ್ನು ಕೊಟ್ಟು ಎಷ್ಟೊ ಉಪಕಾರವನ್ನು ಮಾಡುತಾರೆ ಜೋಯಿಸ-ಹಣವೆ೦ದರೇನು ? ಮದನ -ಒಂದು ತಲೆ ಅಥವಾ ಮತ್ತೆ ಯಾವುದಾದರೂ ಒಂದು ಗುರುತು ಉಳ್ಳ ಚಿನ್ನದ ಮತ್ತು ಬೆಳ್ಳಿಯ ತುಂಡುಗಳು ಅಥವಾ ಬಿಲ್ಲೆ ಗಳು. ಜೋಯಿಸ-ಅಂಥಾ ಚಿನ್ನ ಬೆಳ್ಳಿ ತುಂಡುಗಳಿಂದ ಉಪಯೋಗ ವೇನು ? ಮದನ-ನಾವು ಹಣವನ್ನು ಕೊಟ್ಟರೆ ಎಲ್ಲರೂ ತೆಗೆದುಕೊಳ್ಳು ತಾರೆ ; ಅದಕ್ಕೆ ಬದಲಾಗಿ ನನಗೆ ಬೇಕಾದ ಸಾಮಾನುಗಳನ್ನು ಕೊಡುತಾರೆ.. ಜೋಯಿಸ-ಈ ಹಣದ ಬಿಲ್ಲೆ ಗಳಿ೦ದಲೇ ನಿಜವಾದ ಪ್ರಯೋಜನ ಯಾವುದೂ ಇಲ್ಲ ; ಇಂಥಾ ಬಿಲ್ಲೆ ಗಳನ್ನು ಬಡವರಿಗೆ ಐಶ್ವಶ್ಯವಂತರು ಕೊಟ್ಟು ಅವರಿಂದ ಮನೆ ಬಾಗಿಲು, ಬಟ್ಟೆ ಬರೆಗಳು, ತಿಂಡೀಸಾಮಾನು .ಗಳು, ಮೊದಲಾದ್ದನ್ನು ತೆಗೆದುಕೊಂಡು ತನ್ಮೂಲಕ ಬಡವರಿಗೆ ಉ ಸಕಾರವನ್ನು ಮಾಡುತ್ತಾರೆ ಎಂದಹಾಗಾಯಿತಷ್ಟೆ ? ಮದನ- ಈ ಬಿಲ್ಲೆ ಗಳು ಪ್ರಯೋಜನಕ್ಕೆ ಬಾರದವುಗಳೆಂದು ಹೇಳ ಕೂಡದು, ಬಡವರು ಇವುಗಳನ್ನು ಕೊಟ್ಟು ತಮಗೆ ಬೇಕಾದ ಸಾಮಾನುಗಳನ್ನು ಕೊಂಡುಕೊಳ್ಳ ಬಹುದು. ಜೋಯಿಸ- ಬಡವರ ಹತ್ತಿರ ಹಣವಿದ್ದರೆ ತಮಗೆ ಬೇಕಾದ್ದನ್ನು ಕೊಂಡುಕೊಳ್ಳಬಹುದು ಎಂತಲೋ ? ಮದನ-ಹವುದು. ಜೋಯಿಸ - ಹಾಗಾದರೆ ಬಡವರು ಅ೦ಥಾ ಉಪಯುಕ್ತವಾದ ಸಾಮಾನುಗಳನ್ನು ಯಾರಿಂದ ಕೊಂಡುಕೊಳ್ಳ ಬೇಕು ? ಐಶ್ವರ್ಯ ವಂತರು ಇಂಥಾ ಸಾಮಾನುಗಳು ಯಾವುದನ್ನೂ ಮಾಡುವುದಿಲ್ಲ. ನೀನು ಮೊದಲೇ ಹೇಳಿದ್ದೀಯೆ ; ಆದಕಾರಣ ಬಡವರು ತಮ್ಮ ತಮ್ಮಲ್ಲೇ ಒಬ್ಬರಿಂದೊಬ್ಬರು ಕೊಂಡುಕೊಳ್ಳ ಬೇಕಾಯಿತು. 16