ಪುಟ:ಸಮತಿ ಮದನಕುಮಾರರ ಚರಿತ್ರ.djvu/೨೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೨೦ ಸುಮತಿ ಮದನಕುಮಾರರ ಚರಿತ್ರೆ [ಅಧ್ಯಾಯ ಮದನ- ಹಾಗೆ ಹೇಳುವುದಕ್ಕಾಗುವುದಿಲ್ಲ, ಯಾಕೆಂದರೆ ಬಹಳ ಐಶ್ವರ್ಯವಂತರಾದವರು ಬೇಕಾದ ಒಡವೆಗಳನ್ನು ಇಟ್ಟು ಕೊಂಡು, ಉತ್ತಮವಾದ ಬಟ್ಟೆ ಗಳನ್ನಿಟ್ಟು ಅ೦ಗಡಿಗಳಲ್ಲಿ ಸಾಮಾನುಗಳನ್ನು ಮಾರುತ್ತಾ ಇರುವುದಿಲ್ಲವೆ ? ಜೋಯಿಸ-ಆ ಸಾಮಾನುಗಳನ್ನೆಲ್ಲಾ ಅವರು ಮಾಡುವುದಿಲ್ಲ. ಇತರ ಬಡ ಜನರಿಂದ ಅವುಗಳನ್ನು ತಯಾರ್ಮಾಡಿಸಿ ಆ ಸಾಮಾನು ಗಳನ್ನು ಅಂಗಡಿಯಲ್ಲಿಟ್ಟು ಮಾರುತಾರೆ. ಹೇಗೆ ಯೋಚಿಸಿದಾಗ್ಯೂ ಐಶ್ವರ್ಯವಂತರು ಉಪಯೋಗವಾದ ಯಾವ ಕೆಲಸವನ್ನೂ ಮಾಡುವು ದಿಲ್ಲ ಬಡವರು ನಿಜವಾಗಿ ಪ್ರಯೋಜನಕ್ಕೆ ಬರತಕ್ಕ ಸಾಮಾನುಗಳ ನ್ನೆಲ್ಲಾ ಮಾಡುತ್ತಾರೆ, ಎನ್ನುವ ಮಾತು ಖಂಡಿತವಾಯಿತು, ಒಂದು ಊರಿನಲ್ಲಿ ಬರೀ ಐಶ್ವರ್ಯವಂತರೇ ಇದ್ದರೆ, ಅವರು ಯಾವ ಕೆಲಸ ವನ್ನೂ ಮಾಡುವುದಿಲ್ಲವಾದ್ದರಿಂದ ಅವರೆಲ್ಲಾ ಹೊಟ್ಟೆಗಿಲ್ಲದೆ ಸಾಯ ಬೇಕಾಗುವುದು, ಅವರಲ್ಲಿ ಎಷ್ಟು ಹಣವಿದ್ದಾಗ್ಯೂ ಉಪಯೋಗವಿಲ್ಲ. ಒಂದು ಊರಿನಲ್ಲಿ ಬರೀ ಬಡವರೇ ಇದ್ದರೆ, ಅವರೆಲ್ಲಾ ಒಂದೊಂದು ಉದ್ಯೋಗವನ್ನು ಅನುಸರಿಸಿಕೊಂಡು ಯಾವಾಗಲೂ ಕೆಲಸ ಮಾಡು ವುದರಿಂದ ಜನಕ್ಕೆ ಬೇಕಾದ ಸಾಮಾನುಗಳನ್ನೆಲ್ಲಾ ಅವರೇ ಮಾಡಿ ಕೊಳ್ಳು ತಾರೆ ; ಅವರಲ್ಲಿ ಹಣವಿಲ್ಲದಿದ್ದಾಗ್ಯೂ ಅವರು ಹಿಟ್ಟು ಬಟ್ಟೆ ಗಿಲ್ಲದೆ ಸಾಯುವುದಿಲ್ಲ, ಆದರೆ ಈ ದಿನ ಹೊತ್ತಾಯಿತು. ಈ ಮಾತು ಇಲ್ಲಿಗೆ ಸಾಕು, ಲಲಿತೆಯು ನಿಂತ ಕಥೆಯನ್ನು ನಾಳೆ ಹೇಳಲಿ.. ಹೀಗೆಂದು ಎಲ್ಲರೂ ತಮ್ಮ ಕೆಲಸಕ್ಕೆ ಹೊರಟು ಹೋದರು. ೨೧ ನೆ ಅಧ್ಯಾಯ ಆ ಮಾರನೆ ದಿನ ಬೆಳಗ್ಗೆ ಮದನನು ಹಾಸಿಗೆಯಿಂದ ಎದ್ದ ತರುವಾಯ, ಮುನ್ನಾ ದಿನ ಚಾರುದತ್ತನ ಕಥೆಯಲ್ಲಿ ಅರಬ್ಬರು ಕುದುರೆ ಸವಾರಿಮಾಡುವ ಸಂಗತಿಯನ್ನು ಕೇಳಿದ್ದನಾದಕಾರಣ, ಹಾಗೆಯೇ ತಾನೂ ಸವಾರಿಮಾಡಬೇಕೆಂದು ಯೋಚಿಸಿ ಅದರ ಮೇಲೆ ಹತ್ತಿ ಕೊಂಡು