ಪುಟ:ಸಮತಿ ಮದನಕುಮಾರರ ಚರಿತ್ರ.djvu/೨೬೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೫೨ ಸುಮತಿ ಮದನಕುಮಾರರ ಚರಿತ್ರೆ [ಅಧ್ಯಾಯ ಘೋರ ಕೃತ್ಯವನ್ನು ಯಾವಾಗಲೂ ಸಹಿಸಲಾರದ ಮದನನು ಇದನ್ನು ಕಂಡು ನಾಯಿಯನ್ನು ಹೊಡೆಯುವದಕ್ಕೆ ಹೋಗಲು, ಅದು ಆಡನ್ನು ಬಿಟ್ಟು ಬೊಗಳುತಾ ಇವನ ಮುಂದೆ ಬಂದು ನಿಂತುಕೊಂಡಿತು. ಹುಡುಗನಾದ್ದರಿಂದ ಇವನಿಗೆ ಭಯ ಪಡದೆ ಶ್ವಾನವು ಇವನ ಬಟ್ಟೆ ಯನ್ನು ಕಚ್ಚಿ ಹರಿದು ಮೇಲೆ ಬಿದ್ದು ಮೈ ಯನ್ನು ಪರಚುತಿತ್ತು. ಇನ್ನೊ೦ದು ಅಡಿಕೆ ಕಡಿಯುವ ಹೊತ್ತಿನಲ್ಲಿ ಆ ಕೆಟ್ಟ ನಾಯಿಯು ಹುಡುಗನ ಮೈಯನ್ನೆಲ್ಲಾ ಕಚ್ಚಿ ಪ್ರಾಣವನ್ನೇ ಕಳೆಯುತಿತ್ತು, ಅಷ್ಟ ರಲ್ಲಿಯೇ ಆಗತಾನೆ ಮದನನಿಂದ 'ಭಿಕ್ಷವನ್ನು ಈ ಸುಕೊಂಡು ಮಕ್ಕ ಳನ್ನೂ ಕರೆದುಕೊಂಡು ಅತ್ತ ಹೋಗುತಿದ್ದ ತಿರುಕೆಯವನು ನಾಯಿಯ ಕೆಟ್ಟ ತನವನ್ನು ದೂರದಿಂದಲೇ ಹಿಂತಿರುಗಿ ನೋಡಿ ತನ್ನ ಕೈಮಗುವನ್ನು ಸಂಗಡ ಬರುತಿದ್ದ ೬ ವರುಷದ ಹುಡುಗನಾದ ತನ್ನ ದೊಡ್ಡ ಮಗನ ಕೈಗೆ ಕೊಟ್ಟು ಓಡಿಬಂದು ಹತ್ತಿರಿದ್ದ ಒಂದು ದೊಣ್ಣೆಯಿಂದ ಆ ಶ್ವಾನ ವನ್ನು ಚೆನ್ನಾಗಿ ಹೊಡೆದು ಹಿಂತಿರುಗಿ ಬರದಂತೆ ಆಚೆಗೆ ಅಟ್ಟಿದನು. ಆ ಮೇಲೆ ಮದನನು ಮುಂದಕ್ಕೆ ಹೊರಡಲು, ಅವನ ಎದುರಿಗೆ ರಾಮು ಜೋಯಿಸನು ಸ್ನಾನವನ್ನು ಮಾಡಿಕೊಂಡು ಒದ್ದೆ ಬಟ್ಟೆ ಯ ಹಿಂಡಿ ಯನ್ನು ಕಟ್ಟಿ ತಲೇ ಮೇಲೆ ಇರಿಸಿಕೊಂಡು ಒಂದು ಕೈಯಲ್ಲಿ ಹುವ್ವನ ಬುಟ್ಟಿಯನ್ನೂ ಇನ್ನೊಂದು ಕೈಯಲ್ಲಿ ಪಂಚಪಾತ್ರೆಯನ್ನೂ ಹಿಡಿದು ಮಂತ್ರವನ್ನು ಹೇಳುತ್ತಾ ಬರುತಿದ್ದನು. ಆತನನ್ನು ಕಂಡ ಕೂಡಲೆ, ಮದನನು ಏನೋ ಮಹಾಕಾರ್ಯನಿರ್ವಾಹ ಮಾಡಿದವನಂತೆ ಜಾಗ್ರತೆ ಯಾಗಿ ಉಪಾಧ್ಯಾಯನ ಹತ್ತಿರಕ್ಕೆ ಓಡಿಹೋಗಿ, ಇವನ ಮೈಯೆಲ್ಲಾ ಮಣ್ಣಾಗಿರುವುದನ್ನು ಕಂಡು ಆತ ಇದೇನೆಂದು ಇವನನ್ನು ಪ್ರಶ್ನೆ ಮಾಡುವುದಕ್ಕೆ ಮುಂಚಿತವಾಗಿಯೇ- ಜೋಯಿಸರೆ, ಒಂದು ಕೆಟ್ಟ ಸೀಳುನಾಯಿ ನಮ್ಮ ಸುಮತಿಯ ಮೇಕೆಯನ್ನು ಕೊಂದುಹಾಕುತಿತ್ತು. ನಾನು ಅಷ್ಟರಲ್ಲಿಯೇ ಓಡಿಹೋಗಿ ಅದನ್ನು ಹೆದರಿಸಿ ಬಿಡಿಸದಿದ್ದರೆ ಮೇಕೆಬೇರೆ ಉಳಿಯುತಿರಲಿಲ್ಲ ಎಂದನು. ಜೋಯಿಸನ ಸಂಗಡಲೇ ಪಾದಚಾರಿಯಾಗಿ ಬರುತಿದ್ದ ಆ ದೊರೆಯು ಎರಡು ಮಾರು ದೂರದಲ್ಲಿ ಬರುತಿದ್ದ ಗೋಪಾಳದವನನ್ನು ನೋಡಿ-ಇವ ಯಾರು ? ನೋಡಿದರೆ