ಪುಟ:ಸಮತಿ ಮದನಕುಮಾರರ ಚರಿತ್ರ.djvu/೨೬೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೫೩ ೨೧] ಸುಮತಿ ಮದನಕುಮಾರರ ಚರಿತ್ರೆ ಜಿವಶವವಾಗಿದಾನೆ, ಅವನ ಮಕ್ಕಳು ಅವನಿಗಿ೦ತಲೂ ಕೇಡಾಗಿವೆ. ಕಾಲನ್ನು ಎತ್ತಿ ಇರಿಸಲಾರವು, ಎಂದನು. ಮದನ-ಅ ಪ್ಪಾಜಿ, ನಾಯಿಯನ್ನು ನಾನು ಹೊಡೆಯುವುದಕ್ಕೆ ಹೋದಾಗ ಅದು ನನ್ನ ಮೇಲೆ ಬಿದ್ದು ನನ್ನ ನ್ನು ಕೊಂದುಹಾಕುತಿತ್ತು. ಈತನು ನಾಯಿಯನ್ನು ಹೊಡೆದು ಓಡಿಸಿ ನನ್ನ ನ್ನು ಉಳಿಸಿದನು. ಆದ್ದರಿಂದ ೨ ದಿವಸದಿಂದ ಅನ್ನ ಕ್ಕೆ ಗತಿಯಿಲ್ಲದೆ ಉಪವಾಸವಾಗಿರುವ | ಈ ಬಡವನನ್ನೂ ಇವನ ಮಕ್ಕಳನ್ನೂ ಕರೆದುಕೊಂಡು ಹೋಗಿ ನಮ್ಮ ಅರಮನೆಯಲ್ಲಿ ಒಂದು ದಿನ ಹೊಟ್ಟೆ ತುಂಬಾ ಅನ್ನವನ್ನು ಹಾಕಿ ಕಳುಹಿಸೋಣವೆಂದು ಇದ್ದೆ, ಇವನ ಎಳೆಮಗುವಿಗೆ ಚಳಿ ಬಂದು ನಡುಗುತಿದೆ. ಈಚೆಗೆ ನನ್ನ ನಡತೆ ಸರಿಯಾಗಿಲ್ಲ, ನನ್ನ ತಪ್ಪನ್ನೆ ಲಾ ಮರೆತು ಈ ಬಡವನಿಗೂ ಅವನ ಮಕ್ಕಳಿಗೂ ಒಂದು ದಿನ ಅನ್ನ ಹಾಕುವಂತೆ ಅ ಪ್ಪಣೆ ಮಾಡಬೇಕು, ಅ ಸ್ವಾಜಿ, ಇಷ್ಟರಲ್ಲಿಯೇ ಮದನನ ಕುದುರೇ ಆಳು ಓಡಿಬಂದು ಬದಿಯಲ್ಲಿ ಸಿಕ್ಕಿಕೊಂಡಿದ್ದ ಕುದುರೆಯನ್ನು ಈಚೆಗೆ ತೆಗೆದು ಅದನ್ನು ಹಿಡಿದು ಕೊಂಡು ಇವರೆಲ್ಲಾ ಮಾತನಾಡುತ್ತಾ ನಿಂತಿದ್ದೆಡೆಗೆ ಬಂದನು. ಆ ದೊರೆಯು ಅವನನ್ನು ಕಂಡು ಇದೇನೆಂದು ಕೇಳಲು, ಆಳು ಅರಸ ನನ್ನು ಕುರಿತು- ಸಲಾಕು ಸ್ವಾಮಿ, ಚಿಕ್ಕ ಬುದ್ದಿ ಯವರ ಅಪ್ಪಣೀ ಪ್ರಕಾರ ನಾನು ಕುದುರೆಯನ್ನು ಸವಾರಿಗೆ ಸಜ್ಜು ಮಾಡಿದೆ, ಅವರು ಅದರ ಮೇಲೆ ಕೂತುಕೊಂಡು ಹೋಗುತಾ ಅರಬ್ಬರು ಸವಾರಿಮಾಡ. ತಕ್ಕ ತರಹವನ್ನೆಲ್ಲಾ ಹೇಳುತ್ತಾ ಬರುತಿದ್ದರು. ಅಷ್ಟರಲ್ಲಿಯೇ ಕುದುರೆಯು ಹತೋಟತಪ್ಪಿ ಓಡುವುದಕ್ಕೆ ಮೊದಲುಮಾಡಿತು, ಮದನ ಕುಮಾರರು ಯಾವ ಕಡೆಗೆ ಹೋದರೆ ಅದು ನನ್ನ ಕಣ್ಣಿಗೆ ಕಾಣಿಸಲೇ ಇಲ್ಲ. ತರುವಾಯ ಕುದುರೆಯು ಸಿಕ್ಕಿತು. ಅದರ ಮೈಯೆಲ್ಲಾ ಕೊಚ್ಚೆ ಯಾಗಿತ್ತು, ಹೀಗೆಂದು ಸಂಗತಿಯನ್ನೆಲ್ಲಾ ಅರಿಕೆ ಮಾಡಿದನು. ಇದನ್ನು ಕೇಳಿ ದೊರೆಯು--ಈ ಕುದುರೆಯು ಯಾವಾಗಲೂ ಸಾದು ವಾಗಿಯೇ ಇರುವುದು, ಆದರೂ ಈ ಸಮಯದಲ್ಲಿ ಇಷ್ಟು ಆಭಾಸಕ್ಕೆ ಕಾರಣವೇನೋ ಗೊತ್ತಾಗಲಿಲ್ಲ, ಎಂದು ಹೇಳಿ, ಮದನನ ಕೈಲಿದ್ದ