೧೪ ಸುಮತಿ ಮದನ ಕುಮಾರರ ಚರಿತ್ರೆ [ಅಧ್ಯಾಯ ಕುತ್ತು ಪರಿಹಾರವಾಗಲೆಂದು ಒಂದು ತುತ್ತು ಅನ್ನ ವನ್ನೂ ಕೊಡು ತಿರ ಲಿಲ್ಲ. ಬಡವರಾದರೂ ಯಾವ ಕೆಲಸವೂ ಮಾಡದೆ ಕೂತಕಡೆ ಬಿಟ್ಟು ಏಳದೆ ಎರಡು ಮಂಡೀ ಸಂದಿಯಲ್ಲಿ ತಲೆಯನ್ನು ಸಿಕ್ಕಿಸಿಕೊಂಡು, ಮುಖ ಅಡಿಯಾಗಿ ತೂಕಡಿಸುತಿದ್ದರು, ಕೆಲಸ ಮಾಡುವುದಕ್ಕಿ೦ತಲೂ ಯಾವ ಕೆಲಸವೂ ಇಲ್ಲದೆ ಸುಮ್ಮನೇ ಜಡರಾಗಿರುವುದೇ ಮೇಲೆಂದು ಎಣಿಸಿ ಕೊಂಡಿದ್ದರು. ಸಣ್ಣ ಹುಡುಗರು ತಂದೆತಾಯಿಗಳ ಮಾತನ್ನು ಕೇಳುತ್ತಿರಲಿಲ್ಲ. ತಂದೆತಾಯಿಗಳು ಮಕ್ಕಳಿಗೆ ಒಳ್ಳೆ ಬುದ್ದಿಯನ್ನು ಕಲಿಸುತಿರಲಿಲ್ಲ. ಹೀಗೆ ಲೋಕವೆಲ್ಲಾ ಬಹುವಾಗಿ ಕೆಟ್ಟು ಹೋಗಿತ್ತು. ಅನೇಕರು ರಾಕ್ಷಸ ಕೃತ್ಯವನ್ನು ಮಾಡುತಾ ಮಹಾಪಾತಕಗಳನ್ನು ಮಾಡುವುದರಲ್ಲಿ ನಾನು ತಾನೆಂದು ಮೇಲಾಡುತಿದ್ದರು. ಸಜ್ಜನರು ಬಾಳುವುದಕ್ಕೆ ಮಾರ್ಗವೇ ಇರಲಿಲ್ಲ. ಆಗ ಪ್ರಪಂಚವನ್ನು ಉದ್ದಾರ ಮಾಡುವುದಕ್ಕಾಗಿ ದೇವರು ಈ ಭೂಲೋಕದಲ್ಲಿ ಅವತಾರ ಮಾಡಿ ಧರ್ಮಸಂಸ್ಥಾಪನೆಯನ್ನು ಮಾಡಿದನು. ಹೀಗೆ ಅನೇಕ ಸಾರಿ ನಡೆದಿದೆ. ಹೀಗೆ ದೇವರು ಸ್ಥಾಪನೆಮಾಡಿದ ಧರ್ಮವನ್ನು ಕಾಪಾ ಡುತ ಜನರಿಗೆಲ್ಲಾ ಅದನ್ನು ಬೋಧಿಸುತಾ ತಪಸ್ಸು ಮಾಡಿಕೊಂಡಿದ್ದ ವರೇ ಖುಷಿಗಳು. ಇಂಥಾ ಉತ್ತಮವಾದ ಪದಾರ್ಥವನ್ನೆ ತಾವು ತಿನ್ನ ಬೇಕು, ಅಂಥಾ ಒಳ್ಳೆ ಬಟ್ಟೆ ಯನ್ನೆ ಹೊದೆಯಬೇಕು, ಎಂದು ಅವರಿಗೆ ಆಶೆ ಇರಲಿಲ್ಲ. ಒಣ ಕಲ ಎಲೆಯಾದರೂ ಸರಿಯೆ, ಕೊನೆಗೆ ಗಾಳಿಯಾದರೂ ಸರಿಯೆ, ಆಹಾರಮಾಡಿ ಹೊಟ್ಟೆ ತುಂಬಿಕೊಳ್ಳುತಿ ದ್ದರು. ಕೃಷ್ಣಾಜಿನ, ವ್ಯಾಘ್ರಾಜಿನ, ನಾರುಬಟ್ಟೆ ಗಳು ಇವುಗಳನ್ನು ಉಟ್ಟು ಹೊದ್ದು ಕಾಲವನ್ನು ಕಳೆಯುತಿದ್ದರು. ಅವರಿಗೆ ಹಣ ಕಾಸನ್ನು ಕೊಟ್ಟರೆ ದೀನರಾದವರಿಗೆ ಕೊಡಿರೆಂದು ಹೇಳಿ ಧಿಃಕರಿಸಿ ಹೊರಟು ಹೋಗುತಿದ್ದರು. ಈ ರೀತಿಯಲ್ಲಿ ಅವರು ಲೋಕಕ್ಕೆ ಎಷ್ಟೋ ಉಪಕಾರವನ್ನು ಮಾಡಿದರು. ಆದ್ದರಿಂದ ನಮಗೆ ದೇವರು ಏನು ಕೊಟ್ಟ ದಾನೋ ಅದರಲ್ಲಿ ನಾವು ತೃಪ್ತರಾಗಬೇಕು, ಮೃಗಪಕ್ಷಿ ಗಳು ತಮಗೆ ಸಿಕ್ಕುವ ಹುಲ್ಲನ್ನೂ ಕಾಳನ್ನೂ ತಿಂದು, ನೀರು ಹೊರತು ಇನ್ನೇನನ್ನೂ ಕುಡಿಯದೆ ಇರುವದಿಲ್ಲವೆ ? ಆದರೂ ಅವುಗಳಿಗೆ ಶಕ್ತಿ ಏನಾದರೂ ಕಡಿಮೆಯಾಗಿದೆಯೆ ? ”
ಪುಟ:ಸಮತಿ ಮದನಕುಮಾರರ ಚರಿತ್ರ.djvu/೨೭
ಗೋಚರ