ಪುಟ:ಸಮತಿ ಮದನಕುಮಾರರ ಚರಿತ್ರ.djvu/೨೭೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೧] ಸುಮತಿ ಮದನಕುಮಾರರ ಚರಿತ್ರೆ ೨೫೫ ಅವರ ಸಂಸಾರ ಬಹು ದೊಡ್ಡದು, ನಾವು ಬಹು ಬಡವರು, ನಮ್ಮ ತಂದೆಯು ಸೇನೆಯಲ್ಲಿ ಸೇರಿ ೪ ವರುಷ ಚಾಕರಿ ಮಾಡಿದವನು. ಆತನ ಹಾಗೆಯೇ ನಾನೂ ದಂಡಿನಲ್ಲಿ ಚಾಕರಿಯನ್ನು ಮಾಡಬೇಕೆಂದು ವಿಶೇಷವಾಗಿ ಆಶೆಯಿತ್ತು. ನಾನು ಒಬ್ಬನೇ ಮಗನಾದ್ದರಿಂದ ನನ್ನ ನ್ನು ಕಳುಹಿಸುವುದಕ್ಕೆ ಆತನಿಗೆ ಇಷ್ಟ ವಿರಲಿಲ್ಲ. - ಒಂದು ದಿನ ರಾತ್ರೆ ಮುಪ್ಪಿನ ಮುದುಕರಾದ ನಮ್ಮ ತಂದೆ ತಾಯಿಗಳೂ ನಾವೂ ಮತ್ತು ಮನೆಯ ಇತರ ಜನರೂ ಎಲ್ಲರೂ ಸೇರಿ ನಮ್ಮ ಹಟ್ಟಿ ಯಲ್ಲಿ ದೊಡ್ಡ ಅಗ್ಗಿಷ್ಟಿಗೆಯನ್ನಿಟ್ಟು ಬೆಂಕಿಯನ್ನು ಕಾಸಿಕೊಳ್ಳು ತಿದ್ದೆವು. ಆ ರಾತ್ರೆ ಜಾವಹೊತ್ತು ಆದಮೇಲೆ, ತಲೆಗೆ ಒಂದು ಕಿರೀಟವನ್ನಿಟ್ಟು, ಕತ್ರಿನಿಂದ ಸೊಂಟದವರೆಗೂ ಕಬ್ಬಿಣದ ಉಂಗುರದಿಂದ ಮಾಡಿದ ಕವಚವನ್ನು ತೊಟ್ಟು, ಮಂಡಿಯವರೆಗೂ ವೀರಕಾಶೆಯನ್ನು ಹಾಕಿದ ಪಂಚೆಯನ್ನು ಟ್ಟು, ಸೊಂಟಕ್ಕೆ ಚಕ್ಕಳದ ನಡು ಕಟ್ಟನ್ನು ಕಟ್ಟಿ, ಪಕ್ಕದಲ್ಲಿ ಕತ್ತಿಯನ್ನೂ ಗುರಾಣಿಯನ್ನೂ ಕಟ್ಟಿ ಕೊಂಡು, ಆಜಾನುಬಾಹುವಾಗಿದ್ದ ಒಬ್ಬ ವೀರನು ನಮ್ಮ ಮನೆ ಯೊಳಕ್ಕೆ ಬಂದು ನಮ್ಮ ತಂದೆಯ ಎದುರಿಗೆ ನಿಂತುಕೊಂಡು--ಏನೈ ಹುಲಿನಾಯಕ, ನನ್ನ ನ್ನು ಮರೆತು ಬಿಟ್ಟೆ ಯಾ ? ಎಂದು ಹಸನ್ಮುಖ ನಾಗಿ ಕೇಳಿದನು. ನಮ್ಮ ತಂದೆಯು ಆತನನ್ನು ದೃಷ್ಟಿಸಿ ನೋಡಿಬುದ್ಧಿ, ಬುದ್ದಿ ತಮ್ಮನ್ನು ಮರೆತೇನೆ, ನನ್ನೊಡೆಯನನ್ನ, ದಯಮಾಡ ಬೇಕು, ಎಂದು ಒಂದು ಮಣೆಯ ಮೇಲೆ ಆತನನ್ನು ಕೂರಿಸಿದನು. ಅವರಿಬ್ಬರೂ ಕುಶಲಪ್ರಶ್ನೆ ಗಳನ್ನು ಮಾಡಿ ಮಾತನಾಡಿಕೊಂಡ ತರು ವಾಯ ಆ ವೀರನು-ಹುಲಿನಾಯಕ, ನಮ್ಮ ದಂಡಿನ ತುಕ್ಕಡಿ ಇಲ್ಲಿಗೆ ಒಂದು ಕೊಂಬಿನ ಕೂಗಿನಲ್ಲಿ ಬಂದು ಇಳಿದಿದೆ, ಇಂದಿಗೆ ಮೂರು ದಿವಸಕ್ಕೆ ನಮ್ಮ ಸೇನೆಯು ಕೊಡೆಯಾಲದ ರೇವಿನಲ್ಲಿ ಹಡಗನ್ನು ಹತ್ತಿ ಒಂದು ದ್ವೀಪಕ್ಕೆ ಹೊರಡಬೇಕು, ಅಲ್ಲಿನ ಜನರಿಗೂ ನಮ್ಮವರಿಗೂ ಸ್ವಲ್ಪ ವೈಷಮ್ಯ ಹುಟ್ಟಿದೆ. ನಾವು ಅವರನ್ನು ಜೈಸಬೇಕು, ಅಥವಾ ಅವರಲ್ಲಿ ಸ್ನೇಹವನ್ನು ಬೆಳಸಿಕೊಳ್ಳ ಬೇಕು. ಇದು ಹೊರತು ನಮ್ಮ ಹಡಗಿನವರಿಗೆ ಉಳಿಗಾಲವಿಲ್ಲವಾ ಗಿದೆ, ನಿನ್ನನ್ನು ನೋಡಿಕೊಂಡು