೨೫ ಸುಮತಿ ಮದನಕುಮಾರರ ಚರಿತ್ರೆ [ ಅಧ್ಯಾಯ ಹೋಗುವುದಕ್ಕಾಗಿ ಬಂದೆ. ದಾರಿಯಲ್ಲಿ ಬರುತಾ ಮಳೆಯಿಂದ ನೆನೆದು ಚಳಿಯಾಗುತಿದೆ, ಹಸಿವೂ ಹೆಚ್ಚಾಗಿದೆ, ಎಂದು ಹೇಳಿದನು. ಆಗ ನಮ್ಮ ಯಜಮಾನನು - ಸ್ವಾಮಿ, ಈ ಬೆಂಕಿಯನ್ನು ಕಾಸಿಕೊಳ್ಳ ಬಹುದು. ತಾವು ಅರಸುಗಳು, ನಾವು ಬೇಡರು, ನಮ್ಮ ಮನೆಯಲ್ಲಿ ತಾವು ಊಟಮಾಡುವುದಿಲ್ಲ. ಸ್ವಾಮಿಗೆ ನಾನೇನ ಒಪ್ಪಿಸಲಿ, ಎಂದು ಹೇಳಿ, ಜೋಳದ ಅರಳನ್ನೂ ಅರ್ಧ ಸೇರು ಹಾಲನ್ನೂ ಬಹುಶ್ರಮ ದಿಂದ ತಂದು ಆತನಿಗೆ ಅರ್ಪಿಸಿ, ಐವತ್ತು ಅತೀ ಹಣ್ಣನ್ನು ಮುಂದಿಟ್ಟು ತೆಗೆದುಕೊಳ್ಳ ಬೇಕೆಂದು ಹೇಳಿದನು. ಆ ವೀರನು ಅಯ್ಯಾ, ಆದರ ದಿ೦ದ ನೀನು ಕೊಟ್ಟ ಈ ಆ ಹಾರದ ರುಚಿ ಎಂಥಾ ಭಕ್ಷ್ಯಭೋಜ್ಯಗಳಿಗೆ ತಾನೇ ಬಂದೀತು, ಸಂಕೋಚವನ್ನು ಮಾಡಿಕೊಳ್ಳ ಬೇಡ, ಎಂದು ಅವೆಲ್ಲವನ್ನೂ ಮೆದ್ದು ನಾವುಗಳು ಆತನಿಗಾಗಿ ಹಾಸಿದ ಚಾಪೆಮೇಲೆ ಮಲಗಿ ವಿಶ್ರಮಿಸಿಕೊಂಡನು. ಅದೆಲ್ಲವನ್ನೂ ನೋಡಿ ದಂಡಿನ ಚಾಕರಿ ಮಾಡಬೇಕೆಂದು ನನಗಿದ್ದ ಆಕೆ ಮತ್ತೂ ಅಧಿಕವಾಯಿತು, ಆತನ ಸಂಗಡಲೇ ನಾನೂ ಬರುತೇನೆಂದು ಆತನಿಗೆ ಹೇಳಿಕೊಂಡೆ. ಆತನು ದಂಡಿನ ಚಾಕರಿಯಲ್ಲಿ ಉಂಟಾಗತಕ್ಕ ವಿಧವಿಧವಾದ ಕಷ್ಟ ಗಳನ್ನು ವರ್ಣಿಸಿ ಹೇಳಿದನು : ಅನ್ನ ನೀರಿಲ್ಲದೇ ೩-೪ ದಿವಸಗಳಾ ದರೂ ಉಪವಾಸ ಇರಬೇಕಾದ ಸಂಭವ, ಅಲ್ಲಿ ಉ೦ಟಾಗತಕ್ಕೆ ರೋಗ, ಪ್ರಾಣಾಪಾಯಗಳು, ಪ್ರಾಣಿವಧೆಯಿಂದ ಉಂಟಾಗುವ ಪಾಪ, ಮಾರ್ಗಶ್ರಮ ಇವೇ ಮುಂತಾಗಿ ಅನೇಕ ವಿಧವಾದ ಕಷ್ಟಗಳನ್ನು ವಿಶದಪಡಿಸಿದನು. ಇದು ಯಾವುದೂ ನನ್ನ ಮನಸ್ಸಿಗೆ ಅ೦ಟಲಿಲ್ಲ. ಸೇನೆಯ ಚಾಕರಿಗೆ ಸೇರಿಕೊಂಡು ಆತನ ಸಂಗಡ ಹೋಗಲೇಬೇಕೆಂದು ನಿಸಿಕೊಂಡೆ. ರಾತ್ರೆ ಮೊದಲು ಕೋಳಿ ಕೂಗಿತು. ಆ ವೀರಭಟ ನಾದ ತುಕ್ಕ ಡೀದಾರನು ಎದ್ದು ದಂಡಿನ ಪಾಳಯಕ್ಕೆ ಹೊರಡಲು ಸಿದ್ದ ವಾದನು, ನಾನೂ ಆತನ ಸಂಗಡಲೇ ತೆರಳುವುದಕ್ಕೆ ಸಜ್ಜು ಮಾಡಿ ಕೊಂಡೆ, ಹೊರಡುವ ಸಮಯ ಬಂತು, ವೃದ್ದಳಾದ ನಮ್ಮ ತಾಯಿ ಬಂದು ನನ್ನ ನ್ನು ತಬ್ಬಿ ಕೊಂಡು--ಅಯ್ಯೋ ಮಗನೇ ನೀನು ಒಬ್ಬನೇ ನನಗೆ ಗಂಡುಮಗ ; ಉಳಿದ ಏಳು ಜನವೂ ಹೆಣ್ಣು ಮಕ್ಕಳು, ನಿನ್ನಿ೦ದ
ಪುಟ:ಸಮತಿ ಮದನಕುಮಾರರ ಚರಿತ್ರ.djvu/೨೭೧
ಗೋಚರ