ಪುಟ:ಸಮತಿ ಮದನಕುಮಾರರ ಚರಿತ್ರ.djvu/೨೭೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೫೭ ೨೧] ಸುಮತಿ ಮದನಕುಮಾರರ ಚರಿತ್ರೆ ನಮ್ಮ ಮನೆ ಬೆಳಕು ಕಾಣಬೇಕೆಂದು ಇದ್ದೆನಲ್ಲಪ್ಪಾ ! ಹಾಳ ರಣಕ್ಕೆ ನಿನ್ನ ನ್ನು ಕಳುಹಿಸಿ ನಾನು ಹೇಗೆ ಹೊಟ್ಟೆಹಿಡಿಯಲಿ ! ಎಂದು ವಿಧ ವಿಧದಲ್ಲಿ ಹಂಬಲಿಸಿಕೊಂಡು ಅಳುತಿದ್ದಳು. ನನ್ನ ತಂಗಿಯರೆಲ್ಲರೂ - ಅಯ್ಯೋ ಅಣ್ಣಾ, ಅಣ್ಣಾ ಹೋಗುತೀಯಾ ! ನನಗೆ ಯಾರು ಗತಿ ! ಎಂದು ರೋದನ ಮಾಡುತಿದ್ದರು. ಅದೆಲ್ಲವನ್ನೂ ನೋಡಿ ನನಗೂ ಮನಸ್ಸು ಸ್ವಲ್ಪ ಕರಗಿತು, ಕಣ್ಣಿನಲ್ಲಿ ನೀರು ಬಂತು. ನಾನು ರಾತ್ರೆ ಮಾಡಿದ ಸಂಕಲ್ಪವನ್ನು ಬಿಟ್ಟು ಬಿಡಲೇ ಎನ್ನು ನಮಟ್ಟಿ ಗೂ ಮನ ಸ್ಪೆಲ್ಲಾ ಕಲಕಿ ಹೋಯಿತು, ನಮ್ಮ ತಂದೆಯ ಮುಖವನ್ನು ನೋಡಿದೆ. ಆತನ ಕಣ್ಣಿನಲ್ಲಿಯೂ ನೀರು ಬಂತು. ಅದನ್ನು ಸಹಿಸಿಕೊಂಡು ಹೆಂಡತಿಯನ್ನು ನೋಡಿ ಅವನು ರಣಕ್ಕೆ ಹೋಗಲೇ ಬೇಕೆಂದು ಮುಷ್ಕರಮಾಡುತಾನೆ, ಅವನನ್ನು ಯಾಕೆ ತಡೆಯುತೀಯೆ ? ಬಿಟ್ಟು ಬಿಡು. ಆಯುಸ್ಸಿದ್ದರೆ ಬದುಕಿ ಬರುತಾನೆ. ಇಲ್ಲದಿದ್ದರೆ ವೀರಸ್ವರ್ಗ ಬರುವುದು ಎಷ್ಟು ದಿನವಿದ್ದರೂ ಸಾಯಲೇಬೇಕು, ಎಂದನು. ನಮ್ಮ ತಂದೆತಾಯಿಗಳಿಗೆ ನಾನು ನಮಸ್ಕಾರ ಮಾಡಿ, ಅವರ ಹರಕೆ ಯನ್ನು ಕೈಗೊಂಡು, ಹತ್ತಿರ ನಿಂತಿದ್ದ ತುಕ್ಕಡಿದಾರನಾದ ಆ ಭೀಮ ರಾಜನ ಸಂಗಡ ಹೊರಟೆ. ಆತನು ಸೇನೆಯಲ್ಲಿ ನನಗೆ ಒಂದು ಚಿಕ್ಕ ಅಧಿಕಾರವನ್ನು ಮಾಡಿಕೊಟ್ಟನು. ತರುವಾಯ ಹಡಗನ್ನು ಏರಿ ಆ ದ್ವೀಪಕ್ಕೆ ಹೋಗಿ ಅಲ್ಲಿ ಪಾಳ ಯವನ್ನು ಹಾಕಿ ಇಳಿದುಕೊಂಡೆವು. ಸರ್ವ ಸೇನಾಪತಿಯಾಗಿದ್ದ ಆ ಭೀಮರಾಜನು ತನ್ನೊ ಳಗೆ ಯೋಚಿಸುತ್ತಾ ನಾಲ್ಕು ಉಪಾಯಗಳಲ್ಲಿ ದಾನೋಪಾಯವು ಪರಾಕ್ರಮಿಗಳಿಗೆ ತಕ್ಕದ್ದಲ್ಲ. ಶತ್ರುಗಳನ್ನು ಜೈಸುವುದಕ್ಕೆ ಸಾಮ ಭೇದೋಪಾಯಗಳನ್ನು ಮಾಡಬೇಕು. ಇದಕ್ಕೆ ಅವರು ಸಗ್ಗದಿದ್ದರೆ ಅಂಥಾ ಕಾಲದಲ್ಲಿ ದಂಡೋಪಾಯವನ್ನು ಅನುಸರಿಸ ಬೇಕೆಂದು ತಿಳಿದು, ನನ್ನ ನ್ಯೂ ಇನ್ನೂ ಇಬ್ಬರನ್ನೂ ಸಂಗಡ ಕರೆದು ಕೊಂಡು, ಆ ದ್ವೀಪದ ಕಾಡುಜನರ ದೊರೆಯ ಹತ್ತಿರಕ್ಕೆ ಹೋಗಿ ಅವರ ಮಾತಿನಲ್ಲಿಯೇ ಸಂಭಾಷಣೆಯನ್ನು ಮಾಡಿ, ಆ ಜನರಲ್ಲಿ ಸ್ನೇಹವನ್ನು ಮಾಡಿಕೊಂಡನು.